Get Updates
Get notified of breaking news, exclusive insights, and must-see stories!

ರೈಲ್ವೇ ಪ್ಲಾಟ್ ಫಾರಂನಲ್ಲಿ ಹುಟ್ಟಿದ ಗಂಡು ಮಗು

ಥಾಣೆ, ಜೂನ್ 22: ಥಾಣೆಯ ರೈಲ್ವೇ ನಿಲ್ದಾಣದ ಪ್ಲಾಟ್ ಫಾರಂನಲ್ಲೇ ಬುಧವಾರ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಻ಅಂದ ಹಾಗೆ ಮಗು ಗಂಡು ಮಗುವಾಗಿದ್ದು ಆರೋಗ್ಯವಾಗಿದೆ.

ಆಸ್ಪತ್ರೆಗೆ ತೆರಳಲು 24 ವರ್ಷದ ಮೀನಾಕ್ಷಿ ಜಾಧವ್ ಮತ್ತು ಆಕೆಯ ಗಂಡ ಸಂದೇಶ್ ಜಾಧವ್ ಥಾಣೆಯ ಪ್ಲಾಟ್ ಫಾರಂ ನಂಬರ್ 10ಕ್ಕೆ ಬಂದು ತಲುಪಿದ್ದರು. ಘಟ್ಕೋಪರ್ ಗೆ ಹೋಗುವ ರೈಲು ಹತ್ತಿ ಅಲ್ಲಿನ ಆಸ್ಪತ್ರೆಗೆ ಪತ್ನಿಯನ್ನು ದಾಖಲಿಸುವುದು ಸಂದೇಶ್ ಜಾಧವ್ ಆಲೋಚನೆಯಾಗಿತ್ತು.

Woman gives birth to baby boy on Thane railway platform

ಆದರೆ ಪ್ಲಾಟ್ ಫಾರಂ ತಲುಪುತ್ತಲೇ ಮೀನಾಕ್ಷಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೊನೆಗೆ ಅವರ ಪತಿ ಸಹಾಯಕ್ಕಾಗಿ ಮೊರೆ ಇಟ್ಟಿದ್ದರು.

ಆಗ ತಕ್ಷಣ ರೈಲ್ವೇ ಭದ್ರತಾ ಪಡೆಯ ಅಧಿಕಾರಿಗಳಾದ ಶೋಭಾ ಮೊತೆ ಮತ್ತು ಇತರ ಸಿಬ್ಬಂದಿಗಳು ಸಹಾಯಕ್ಕೆ ಧಾವಿಸಿ ಬಂದಿದ್ದಾರೆ. ನಂತರ ಆಕೆಯ ಸುತ್ತಾ ಪರದೆ ಹಿಡಿದು ಆಕೆಗೆ ಅಲ್ಲೇ ಡೆಲಿವರಿ ಮಾಡಿಸಿದ್ದಾರೆ. ಮೀನಾಕ್ಷಿ ರೈಲ್ವೇ ನಿಲ್ದಾಣದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ನಂತರ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಮಗು ಮತ್ತು ತಾಯಿಯನ್ನು ದಾಖಲಿಸಲಾಗಿದ್ದು ತಾಯಿ-ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ.

ರೈಲ್ವೇ ಪ್ಲಾಟ್ ಫಾರ್ಂ ಮೇಲೆ ಮಲಗಿ ದೊಡ್ಡವರಾದ ಸಾಧಕರ ಕಥೆಗಳನ್ನು ಕೇಳಿದ್ದೇವೆ. ಬಹುಶಃ ಈ ಮಗು ದೊಡ್ಡವನಾದ ನಂತರ ತಾನು ಹುಟ್ಟಿದ್ದೇ ರೈಲ್ವೇ ಪ್ಲಾಟ್ ಫಾರಂ ನಲ್ಲಿ ಎನ್ನಬಹುದೇನೋ!!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+