ಅಪ್ರಾಪ್ತ ಹುಡುಗನ ಮೇಲೆ ಮಹಿಳೆಯಿಂದ ಅತ್ಯಾಚಾರ
ಲೂಧಿಯಾನ,ಅ.19: ಮನೆಪಾಠಕ್ಕೆಂದು ದಿನ ಬರುತ್ತಿದ್ದ ಹುಡುಗನ ಮೇಲೆ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಘಟನೆ ಭಾನುವಾರ ವರದಿಯಾಗಿದೆ.
ಲೂಧಿಯಾನದ 31 ವರ್ಷ ವಯಸ್ಸಿನ ಮಹಿಳೆ ತನ್ನ ಮನೆಗೆ ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದ ಹುಡುಗನ ಮೇಲೆ ಕಾಮದೃಷ್ಟಿ ಬೀರಿದ್ದಾಳೆ. ಆತನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೆ ಈ ಬಗ್ಗೆ ಯಾರಿಗಾದರು ಹೇಳಿದರೆ ಅಷ್ಟೇ ಎಂದು ಬೆದರಿಕೆ ಒಡ್ಡಿದ್ದಾಳೆ.
8ನೇ ತರಗತಿ ಓದುತ್ತಿರುವ 14 ವರ್ಷ ವಯಸ್ಸಿನ ಹುಡುಗ ಈ ಮಹಿಳೆಯ ಮನೆಯಲ್ಲಿ ಬಾಡಿಗೆಗಿದ್ದಾನೆ. ಓದಿನಲ್ಲಿ ಕೊಂಚ ಹಿಂದಿದ್ದ ಬಾಲಕನನ್ನು ಮನೆಗೆ ಕರೆಸಿಕೊಂಡ ಮಹಿಳೆ ಆತನ ಮುಂದೆ ತನ್ನ ಇಚ್ಛೆ ವ್ಯಕ್ತಪಡಿಸಿದ್ದಾಳೆ.

ಅದರೆ, ಆಕೆ ಮಾತುಗಳನ್ನು ಕೇಳಿ ಬಾಲಕ ಹೆದರಿದ್ದಾನೆ. ಅದರೆ, ಇದಕ್ಕೆ ಜಗ್ಗದ ಮಹಿಳೆ ಆತನನ್ನು ಬಲವಂತವಾಗಿ ಅನುಭವಿಸಿದ್ದಾಳೆ. ಸಾಲದ್ದಕ್ಕೆ ಲೈಂಗಿಕ ಕ್ರಿಯೆಯನ್ನು ವಿಡಿಯೋ ಮಾಡಿಟ್ಟುಕೊಂಡು ಆತನನ್ನು ಬೆದರಿಸಿದ್ದಾಳೆ.
ಈ ರೀತಿ ಹಲವಾರು ತಿಂಗಳು ಆತನೊಡನೆ ದೈಹಿಕ ಸಂಪರ್ಕ ಬೆಳೆಸಿದ್ದಾಳೆ. ಅವನು ಪ್ರತಿರೋಧ ಒಡ್ಡಿದಾಗ ವಿಡಿಯೋ ತೋರಿಸಿ ಬೆದರಿಸಿದ್ದಾಳೆ. ನೀನೇ ನನ್ನನ್ನು ಅತ್ಯಾಚಾರ ಮಾಡಿದೆ ಎಂದು ದೂರು ನೀಡುತ್ತೇನೆ. ಇದಕ್ಕೂ ಜಗ್ಗದಿದ್ದರೆ ನಿನ್ನ ಕೊಂದು ಬಿಡುತ್ತೇನೆ ಎಂದಿದ್ದಾಳೆ.
@BLRrocKS kala ket hoytappa Nam kaladalli hudgeers heeg irlilla @dna @shamsundar_sk
— Suchitra Maagala (@maagalasuchitra) October 19, 2014 ಕೊನೆಗೆ ತನಗಾದ ನೋವನ್ನು ತನ್ನ ತಂದೆ ಬಳಿ ಹೇಳಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಬಾಲಕನನ್ನು ಪರೀಕ್ಷಿಸಲಾಗಿದ್ದು ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ ಎಂದು ವೈದ್ಯಾಧಿಕಾರಿ ಧರ್ಮ ಪಾಲ್ ಹೇಳಿದ್ದಾರೆ.
Protection of Children from Sexual Offences Act 2012 (ಪೊಸ್ಕೋ) ಅಡಿಯಲ್ಲಿ ಭಾನುವಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮಹಿಳೆಯನ್ನು ಹುಡುಕುತ್ತಿದ್ದಾರೆ. ಮಹಿಳೆ ತೆಗೆದಿದ್ದ ವಿಡಿಯೋ ಪೊಲೀಸರ ವಶವಾಗಿದ್ದು, ತನಿಖೆ ಮುಂದುವರೆದಿದೆ.












Click it and Unblock the Notifications