ವಿಪ್ರೋದಿಂದ ಅಮೆರಿಕದ ದೊಡ್ಡ ಕಂಪನಿ ಖರೀದಿ

ಅಮೆರಿಕದ ಅಡಮಾನ ಸಾಲ ಕಂಪನಿಯಾದ Opus CMC (Opus Capital Markets Consultants) ಅನ್ನು ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ರಫ್ತು ಕಂಪನಿ ವಿಪ್ರೋ ಸಂಸ್ಥೆಯು 465 ಕೋಟಿ ರೂಪಾಯಿಗೆ (75 ದಶಲಕ್ಷ ಡಾಲರ್) ಖರೀದಿಸಿದೆ.
( ನೆದರ್ ಲ್ಯಾಂಡ್ಸ್ ನಲ್ಲೂ ಆರಂಭವಾಯ್ತು ಇನ್ಫಿ ಬಿಪಿಒ! )
ಉತ್ತರ ಅಮೆರಿಕದಲ್ಲಿ ತನ್ನ ಕಾರ್ಯಾಚರಣೆ ಜಾಲ ವಿಸ್ತರಿಸುವ ಉದ್ದೇಶದಿಂದ 'ಓಪಸ್ ಸಿಎಂಸಿ'ಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ವಿಪ್ರೊ ತಿಳಿಸಿದೆ. ಈ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ (Q4: ಜನವರಿ-ಮಾರ್ಚ್) ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಕಂಪನಿಯ ಗೃಹ ಸಾಲಗಳಿಗೆ ಸಂಬಂಧಿಸಿದ ಐಟಿ ಪರಿಹಾರ ಮತ್ತು ಹೊರಗುತ್ತಿಗೆ ಉದ್ಯಮ ಬಲಪಡಿಸುವುದು ಈ ಸ್ವಾಧೀನದ ಉದ್ದೇಶ ಎಂದು ವಿಪ್ರೊ ತಿಳಿಸಿದೆ. 'ಓಪಸ್ ಸಿಎಂಸಿ'ಯಲ್ಲಿ ಪ್ರಸ್ತುತ 490 ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಅಮೆರಿಕದ ಐದು ಕಡೆ ಕಾರ್ಯಾಚರಣೆ ನಡೆಸುತ್ತಿದೆ. ಅಮೆರಿಕದ ಇಲಿನಾಯ್ ನಲ್ಲಿರುವ Opus CMC ಕಂಪನಿಯು 2005ರಲ್ಲಿ ಸ್ಥಾಪನೆಗೊಂಡಿದೆ.
Opus CMC ಖರೀದಿಯಿಂದ ವಿಪ್ರೋದ ಹರಿವು ವಿಸ್ತಾರಗೊಳ್ಳಲಿದೆ. ಬಿಪಿಒ ವಲಯದಲ್ಲಿ ಇದು ನಿಜಕ್ಕೂ ಸವಾಲಿನದ್ದಾಗಿದೆ ಎಂದು ವಿಪ್ರೋ ಬಿಪಿಒ ಮುಖ್ಯಸ್ಥ ಮನೋಜ್ ಪುಂಜಾ ತಿಳಿಸಿದ್ದಾರೆ.












Click it and Unblock the Notifications