Government Employee: ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿ, ಸ್ಪಷ್ಟನೆಗಳು

ನವದೆಹಲಿ, ಮಾರ್ಚ್‌ 25: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿಯನ್ನು ಏರಿಕೆ ಮಾಡಲಾಗುತ್ತದೆಯೇ?. ಈ ಕುರಿತು ಹಲವು ಬಾರಿ ವರದಿಗಳು ಬಂದಿದ್ದು, ಕೇಂದ್ರ ಸರ್ಕಾರ ಸಹ ಸ್ಪಷ್ಟನೆಗಳನ್ನು ನೀಡುತ್ತಲೇ ಬಂದಿದೆ. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿ 60 ವರ್ಷಗಳು. ಇದನ್ನು ಹೆಚ್ಚಳ ಮಾಡಲಾಗುತ್ತದೆ ಎಂಬ ಪ್ರಸ್ತಾಪಕ್ಕೆ ವಿರೋಧಗಳು ಸಹ ಕೇಳಿ ಬಂದಿದ್ದವು. ಮತ್ತೆ ಈ ಕುರಿತು ಚರ್ಚೆ ಆರಂಭವಾಗಿದ್ದು, ಲೋಕಸಭೆಯಲ್ಲಿ ಸರ್ಕಾರ ಸ್ಪಷ್ಟನೆ ನೀಡಿದೆ.

ಲೋಕಸಭೆ ಕಲಾಪದಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿ ಏರಿಕೆ ಕುರಿತು ಕೇಳಿದ್ದ ಪ್ರಶ್ನೆಗೆ ಸಚಿವ ಜಿತೇಂದ್ರ ಸಿಂಗ್ ಉತ್ತರವನ್ನು ನೀಡಿದ್ದಾರೆ. ಸದ್ಯ ಕೇಂದ್ರ ಸರ್ಕಾರದ ಮುಂದೆ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿ ಏರಿಕೆ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ. ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿ 60 ವರ್ಷಗಳು ಆಗಿರಲಿದೆ ಎಂದು ಸಚಿವರು ಹೇಳಿದ್ದಾರೆ.

Will Union Government Change Retirement Age Of Government Employees

ಹೊಸ ನೇಮಕಾತಿಗಳು: ಲೋಕಸಭೆಯಲ್ಲಿ ಸರ್ಕಾರಿ ನೌಕರರ ನಿವೃತ್ತಿ ಬಳಿಕ ತೆರವಾಗುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಕುರಿತು ಪ್ರಶ್ನೆ ಮಾಡಲಾಗಿತ್ತು. ಈ ಕುರಿತು ಸರ್ಕಾರ ಉತ್ತರ ನೀಡಿದ್ದು, ನಿವೃತ್ತಿಯಿಂದ ತೆರವಾದ ಹುದ್ದೆಗೆ ಹೊಸ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ನಿಗದಿತ ನಿಯಮಗಳನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ.

ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿ ಏರಿಕೆ/ ಇಳಿಕೆ ಕುರಿತು ಸರ್ಕಾರಿ ನೌಕರರ ಸಂಘಟನೆಗಳು ಯಾವ ಬೇಡಿಕೆ ಇಟ್ಟಿವೆ? ಎಂದು ಪ್ರಶ್ನಿಸಲಾಗಿತ್ತು. ಸರ್ಕಾರದ ಜೊತೆಗಿನ ಹಲವಾರು ಸಭೆಗಳಲ್ಲಿ ಕೇಂದ್ರ ಸರ್ಕಾರಿ ನೌಕರರ ಸಂಘಟನೆಗಳು ನಿವೃತ್ತಿ ವಯೋಮಿತಿ ಕುರಿತು ಚರ್ಚಿಸಿವೆ. ಆದರೆ ಸರ್ಕಾರ ಪ್ರಸ್ತುತ ಇರುವ 60 ವರ್ಷ ವಯೋಮಿತಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿಯಲ್ಲಿ ವ್ಯತ್ಯಾಸವಿದೆಯೇ? ಎಂದು ಪ್ರಶ್ನಿಸಲಾಗಿತ್ತು. ಕೇಂದ್ರ ಸರ್ಕಾರ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿ ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರವಾಗಿದೆ. ಇದರ ಕುರಿತು ಕೇಂದ್ರ ಯಾವುದೇ ಮಾಹಿತಿ ಸಂಗ್ರಹ ಮಾಡಿಲ್ಲ ಎಂದು ಹೇಳಿದೆ.

ಪ್ರಸ್ತುತ, ಕೇಂದ್ರ ಸರ್ಕಾರದ ನೌಕರಿ ನೌಕರರ ನಿವೃತ್ತಿ ವಯಸ್ಸು 60 ವರ್ಷಗಳು. ಆದರೆ ಈ ವಯೋಮಿತಿ ಕೆಲವು ರಾಜ್ಯಗಳಲ್ಲಿ ಬೇರೆ ಬೇರೆ ಇದೆ. ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿ ಏರಿಕೆ ವಿಷಯದ ಬಗ್ಗೆ ಊಹಾಪೋಹಗಳು ಆಗಾಗ ಕೇಳಿ ಬರುತ್ತದೆ. ಆಗ ಕೇಂದ್ರ ಸರ್ಕಾರ ಸ್ಪಷ್ಟೀಕರಣವನ್ನು ನೀಡಿದೆ.

Take a Poll

ಸದ್ಯ ನಿವೃತ್ತಿ ವಯಸ್ಸಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಲಾಗಿದೆ. ಹಲವು ಬಾರಿ ನಿವೃತ್ತಿ ವಯೋಮಿತಿ ಏರಿಕೆಯಿಂದ ಆಗುವ ಲಾಭ, ನಷ್ಟಗಳ ಕುರಿತು ಸಹ ವರದಿಗಳು ಪ್ರಕಟವಾಗಿದೆ. ಸದ್ಯ ಸರ್ಕಾರ ಇರುವ ನಿಯಮವನ್ನು ಬದಲಾವಣೆ ಮಾಡುವುದಿಲ್ಲ.

2024ರ ನವೆಂಬರ್‌ನಲ್ಲಿ ಏಪ್ರಿಲ್ 2025 ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಸರ್ಕಾರವು 62ಕ್ಕೆ ಹೆಚ್ಚಿಸಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲಾಗುತ್ತಿತ್ತು. ಆದರೆ ಇದು ಸತ್ಯಕ್ಕೆ ದೂರವಾದದ್ದು, ಇದು ನಕಲಿ ಸುದ್ದಿಯಾಗಿದ್ದು, ಅಂತಹ ಪ್ರಸ್ತಾವನೆ, ಆದೇಶಗಳು ಆಗಿಲ್ಲ ಎಂದು ಪಿಐಬಿ ಮೂಲಕ ಸ್ಪಷ್ಟಪಡಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+