ಮೃತಪಟ್ಟ ಯೋಧರ ಕುಟುಂಬಕ್ಕೆ ಪಿಂಚಣಿ ಯಾಕೆ ನೀಡಬೇಕು

ಆಲೀಘಢ್ (ಉ.ಪ್ರ), ಸೆ 17: ನಮ್ಮ ದೇಶ ಯಾವಾಗಲೂ ಶೋಕದಿಂದ ತುಂಬಿರುವ ರಾಷ್ಟ್ರ. ದೇಶ ಕಾಯುವ ಮೃತ ಯೋಧರ ಕುಟುಂಬಕ್ಕೆ ಪಿಂಚಣಿ ನೀಡುವ ಅವಶ್ಯಕತೆ ಏನಿದೆ ಎಂದು ಉತ್ತರಪ್ರದೇಶದ ಸರಕಾರೀ ಅಧಿಕಾರಿಯೊಬ್ಬರು ಉದ್ದಟತನದ ಹೇಳಿಕೆ ನೀಡಿದ್ದಾರೆ.

ಭಾರತದಂತಹ ರಾಷ್ಟ್ರಗಳಲ್ಲಿ ಮಾತ್ರ ಈ ರೀತಿಯ ಬೇಡಿಕೆಗಳಿರುತ್ತವೆ, ಪ್ರಪಂಚದ ಯಾವುದೇ ದೇಶದಲ್ಲಿರದ ಕಾನೂನು ನಮ್ಮ ದೇಶದಲ್ಲಿ ಏನಕ್ಕೆ ಬೇಕು? ಮೃತ ಯೋಧರ ಕುಟುಂಬದವರು ಪಿಂಚಣಿಗೆ ಬೇಡಿಕೆ ಇಡುವುದು ನ್ಯಾಯಸಮ್ಮತವಲ್ಲ ಎಂದು ಆಲೀಘಢ್ ಜಿಲ್ಲಾ ಮ್ಯಾಜಿಸ್ಟ್ರೇಟರ್ ರಾಜೀವ್ ರುಟೆಲಾ ಹೇಳಿದ್ದಾರೆ.

Why should Soldiers family compensated, UP official

ಯೋಧರ ಕೆಲಸ ದೇಶ ಕಾಯುವುದು, ಅದಕ್ಕಾಗಿ ಸರಕಾರ ಅವರಿಗೆ ವೇತನ, ಭತ್ಯೆ ನೀಡುತ್ತದೆ. ಅಮೆರಿಕಾದ ಸುಮಾರು ಐದು ಸಾವಿರ ಮಂದಿ ಯೋಧರು ಅಫಘಾನಿಸ್ಥಾನದಲ್ಲಿ ಮೃತ ಪಟ್ಟಿದ್ದಾರೆ. ಆದರೆ ಆ ಕುಟುಂಬದ ಒಬ್ಬರೂ ಪಿಂಚಣಿಗಾಗಿ ಸರಕಾರದ ಮುಂದೆ ಕ್ಯೂ ನಿಂತಿಲ್ಲ.

ದೇಶ ರಕ್ಷಣೆಯೇ ನಮ್ಮ ಗುರಿಯೆಂದು ಹೋರಾಡುವ ಯಾವುದೇ ಯೋಧರು ಪಿಂಚಣಿಗಾಗಿ ಸರಕಾರದ ಮುಂದೆ ಕೈಜೋಡಿಸಬಾರದು ಎಂದು ಶುಕ್ಲಾ ವಿವಾದಕಾರಿ ಹೇಳಿಕೆ ನೀಡಿದ್ದಾರೆ.

ಗಡಿಯಲ್ಲಿ ಯಾವುದೇ ಯೋಧ ಮೃತಪಟ್ಟರೆ ಕೇಂದ್ರ ಸರಕಾರ ಪೆಟ್ರೋಲ್ ಬಂಕಿನಿಂದ ಹಿಡಿದು ಐವತ್ತು ಲಕ್ಷ ರೂಪಾಯಿವರೆಗೆ ಪರಿಹಾರ ನೀಡುತ್ತದೆ. ಹೀಗಿದ್ದಾಗ ನಮ್ಮ ದೇಶ ಮುಂದುವರಿಯುವುದು ಯಾವಾಗ ಎಂದು ಶುಕ್ಲಾ ಪ್ರಶ್ನಿಸಿದ್ದಾರೆ.

ರಾಜೀವ್ ರುಟೆಲಾ ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+