• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಕಿಂಗ್: ಹೀಗಿದೆಯಾ ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿಂದಿನ ಗುಟ್ಟು?

|

ನವದೆಹಲಿ, ಮಾರ್ಚ್ 23: ಭಾರತದಲ್ಲಿ ಮೂರು ವಾರಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಕಳೆದ 24 ದಿನಗಳಿಂದ ದೇಶದ ಇಂಧನ ದರದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡು ಬರಲಾಗುತ್ತಿದೆ.

ದೇಶದಲ್ಲಿ ಪಂಚರಾಜ್ಯ ಚುನಾವಣೆಗಳು ಎದುರಾಗಿರುವ ಹಿನ್ನೆಲೆ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಪರಿಷ್ಕರಣೆ ಆಗುತ್ತಿಲ್ಲ ಎನ್ನಲಾಗುತ್ತಿದೆ. ಕೊನೆಯದಾಗಿ ಕಳೆದ ಫೆಬ್ರವರಿ.27ರಂದು ಪೆಟ್ರೋಲ್ ದರ 24 ಪೈಸೆ ಮತ್ತು ಡೀಸೆಲ್ ದರ 15 ಪೈಸೆ ಏರಿಕೆಯಾಗಿತ್ತು. ಇದರ ಮಧ್ಯೆ ಹಲವು ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿದೆ.

ಮಾರ್ಚ್ 22: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕದಿಂದ ಕೇಂದ್ರ ಸರ್ಕಾರ ಗಳಿಸಿರುವ ಆದಾಯದ ಪ್ರಮಾಣ ಶೇ.300ರಷ್ಟು ಏರಿಕೆಯಾಗಿದೆ. ಈ ಬಗ್ಗೆ ಕೇಂದ್ರದ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ. 2014-15ನೇ ಸಾಲಿನಲ್ಲಿ ಇಂಧನದ ಮೇಲಿದ್ದ ಸುಂಕ ಮತ್ತು ಪ್ರಸಕ್ತ ಸಾಲಿನಲ್ಲಿ ಇಂಧನ ಮೇಲೆ ವಿಧಿಸುತ್ತಿರುವ ಸುಂಕದ ಪ್ರಮಾಣ ಅಚ್ಚರಿ ಮೂಡಿಸುತ್ತದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.

6 ವರ್ಷಗಳಲ್ಲಿ ಕೇಂದ್ರಕ್ಕೆ ಶೇ.300ರಷ್ಟು ಆದಾಯ

6 ವರ್ಷಗಳಲ್ಲಿ ಕೇಂದ್ರಕ್ಕೆ ಶೇ.300ರಷ್ಟು ಆದಾಯ

ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೊದಲ ವರ್ಷ 2014-15ನೇ ಸಾಲಿನಲ್ಲಿ ಪೆಟ್ರೋಲ್ ಮೇಲೆ ವಿಧಿಸಿದ ಸುಂಕದಿಂದ 29,279 ಕೋಟಿ ರೂಪಾಯಿ ಮತ್ತು ಡೀಸೆಲ್ ಮೇಲೆ ವಿಧಿಸಿದ ಸುಂಕದಿಂದ 42,881 ಕೋಟಿ ರೂಪಾಯಿ ಆದಾಯ ಸಂಗ್ರಹಿಸಲಾಗಿತ್ತು. ಅಲ್ಲಿಂದ 6 ವರ್ಷಗಳಲ್ಲೇ ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಿದ ಸುಂಕದಿಂದ ಸಂಗ್ರಹಿಸಿದ ಆದಾಯದ ಪ್ರಮಾಣದಲ್ಲಿ ಶೇ.300ರಷ್ಟು ಹೆಚ್ಚಳವಾಗಿದೆ. 2020-21ನೇ ಸಾಲಿನ ಮೊದಲ 10 ತಿಂಗಳಿನಲ್ಲೇ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕದಿಂದ 2.94 ಲಕ್ಷ ಕೋಟಿ ರೂಪಾಯಿ ಆದಾಯ ಸಂಗ್ರಹಿಸಲಾಗಿದೆ.

ಕೇಂದ್ರ ಸರ್ಕಾರ ವಿಧಿಸುತ್ತಿರುವ ಸುಂಕದ ಪ್ರಮಾಣ

ಕೇಂದ್ರ ಸರ್ಕಾರ ವಿಧಿಸುತ್ತಿರುವ ಸುಂಕದ ಪ್ರಮಾಣ

ಭಾರತದಲ್ಲಿ 2014ನೇ ಸಾಲಿನಲ್ಲಿ ಒಂದು ಲೀಟರ್ ಪೆಟ್ರೋಲ್ ಮೇಲೆ 9.48 ರೂಪಾಯಿ ಸುಂಕವನ್ನು ವಿಧಿಸಲಾಗುತ್ತಿತ್ತು. ಆದರೆ ಪ್ರಸ್ತುತ 2020-21ನೇ ಸಾಲಿನಲ್ಲಿ ಅದೇ ಒಂದು ಲೀಟರ್ ಪೆಟ್ರೋಲ್ ಮೇಲೆ 32.90 ರೂಪಾಯಿ ಸುಂಕ ವಿಧಿಸಲಾಗುತ್ತಿದೆ. ಕಳೆದ 6 ವರ್ಷದಲ್ಲಿ ಡೀಸೆಲ್ ಸುಂಕದಲ್ಲೂ ಭಾರಿ ಪ್ರಮಾಣದ ಏರಿಕೆಯಾಗಿದೆ. 2014ರಲ್ಲಿ ಒಂದು ಲೀಟರ್ ಡೀಸೆಲ್ ಮೇಲೆ 3.56 ರೂಪಾಯಿ ವಿಧಿಸಲಾಗುತ್ತಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಅದೇ ಒಂದು ಲೀಟರ್ ಡೀಸೆಲ್ ಮೇಲೆ 31.80 ರೂಪಾಯಿ ಸುಂಕವನ್ನು ಹೇರಲಾಗುತ್ತಿದೆ.

2021ರ ನಂತರದಲ್ಲಿ ದಾಖಲೆಯ ಬೆಲೆ ಏರಿಕೆ

2021ರ ನಂತರದಲ್ಲಿ ದಾಖಲೆಯ ಬೆಲೆ ಏರಿಕೆ

2021ನೇ ವರ್ಷದ ಮೊದಲ ಎರಡು ತಿಂಗಳಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಲಾಕ್ ಡೌನ್ ಬಳಿಕ ಸುಧಾರಿಸಿಕೊಳ್ಳುತ್ತಿದ್ದ ಸಾರ್ವಜನಿಕರಿಗೆ ಇಂಧನ ಬೆಲೆ ಭಾರಿ ಹೊಡೆತ ಕೊಟ್ಟಿದೆ. ಕಳೆದ ಎರಡು ತಿಂಗಳಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರದ ಮೇಲೆ 4.87 ರೂಪಾಯಿ ಏರಿಕೆಯಾಗಿದೆ. ಡೀಸೆಲ್ ದರವು ಪ್ರತಿ ಲೀ.ಗೆ 4.99 ರೂಪಾಯಿ ಹೆಚ್ಚಳವಾಗಿದೆ.

ಎರಡು ರಾಜ್ಯಗಳಲ್ಲಿ ಶತಕ ಬಾರಿಸಿದ ಪೆಟ್ರೋಲ್ ದರ

ಎರಡು ರಾಜ್ಯಗಳಲ್ಲಿ ಶತಕ ಬಾರಿಸಿದ ಪೆಟ್ರೋಲ್ ದರ

ದೆಹಲಿಯಲ್ಲಿ ಪೆಟ್ರೋಲ್ ದರ 91.17 ರೂಪಾಯಿ, ಡೀಸೆಲ್ ದರ 81.47 ರೂಪಾಯಿ ಇದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀ.ಗೆ 97.57 ಮತ್ತು ಡೀಸೆಲ್ ದರ ಪ್ರತಿ ಲೀ.ಗೆ 88.60 ರೂಪಾಯಿ ಇದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಹೆಚ್ಚಿನ ವ್ಯಾಟ್ ನಿಂದಾಗಿ ಪೆಟ್ರೋಲ್ ದರವು ಶತಕ ಬಾರಿಸಿದೆ. ಮಧ್ಯಪ್ರದೇಶದ ಅನುಪ್ಪುರ್ ನಗರದಲ್ಲಿ ಪೆಟ್ರೋಲ್ ದರ ಪ್ರತಿ ಲೀ.ಗೆ 101.59 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀ.ಗೆ 91.97 ರೂಪಾಯಿ ಆಗಿತ್ತು. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಪೆಟ್ರೋಲ್ ದರ ಪ್ರತಿ ಲೀ.ಗೆ 101.84 ರೂಪಾಯಿ ಹಾಗೂ ಡೀಸೆಲ್ ದರ ಪ್ರತಿ ಲೀ.ಗೆ 93.77 ರೂಪಾಯಿ ಆಗಿತ್ತು.

ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ

ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ

ಪ್ರಸ್ತುತ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟಿದೆ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.

ಪ್ರಮುಖ ನಗರದಲ್ಲಿ ಪೆಟ್ರೋಲ್, ಡೀಸೆಲ್ ದರ: (Table)

ನಗರ - ಪೆಟ್ರೋಲ್ ದರ(ಪ್ರತಿ ಲೀ.ಗೆ) - ಡೀಸೆಲ್ ದರ(ಪ್ರತಿ ಲೀ.ಗೆ)

ಶ್ರೀ ಗಂಗಾನಗರ - 101.84 - 93.77

ಅನುಪ್ಪುರ್ - 101.59 - 91.97

ನವದೆಹಲಿ - 91.17 - 81.47

ಮುಂಬೈ - 97.57 - 88.60

ಕೋಲ್ಕತ್ತಾ - 91.35 - 84.35

ಚೆನ್ನೈ - 93.11 - 86.45

ಬೆಂಗಳೂರು - 94.22 - 86.37

ಹೈದ್ರಾಬಾದ್- 94.70 - 88.86

ಪಾಟ್ನಾ - 93.48 - 86.73

ಲಕ್ನೋ - 89.31 - 81.85

English summary
Why Petrol, Diesel Rate Crosses Rs.100 Mark: Here Read The Reason For Oil Rate Hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X