Ramadan 2023: ಮುಸ್ಲಿಂ ಹಬ್ಬಗಳು ಪ್ರತಿ ವರ್ಷ ಬೇರೆ ಬೇರೆ ದಿನಗಳಲ್ಲಿ ಬರಲು ಇರುವ ಕಾರಣ ಇಲ್ಲಿವೆ
ಹಿಜ್ರಿ ಕ್ಯಾಲೆಂಡರ್ ಅನ್ನು ಈ ಜಗತ್ತಿನಲ್ಲಿ ಸುಮಾರು 2 ಬಿಲಿಯನ್ ಮುಸ್ಲಿಮರು ಅನುಸರಿಸುತ್ತಾರೆ.
ನವದೆಹಲಿ, ಮಾರ್ಚ್ 17: 2023 ರ ರಂಜಾನ್ ತಿಂಗಳು ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದೆ. ರಂಜಾನ್ ಪವಿತ್ರ ತಿಂಗಳು ಮಾರ್ಚ್ 22 ರಂದು ಪ್ರಾರಂಭವಾಗುತ್ತದೆ . ಚಂದ್ರನ ಉಲ್ಲೇಖವನ್ನು ಅವಲಂಬಿಸಿ ಏಪ್ರಿಲ್ 22 ಅಥವಾ 23 ರಂದು ಈದ್ ಅಲ್-ಫಿತರ್‌ನೊಂದಿಗೆ ಕೊನೆಗೊಳ್ಳುತ್ತದೆ.
ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳು ಮತ್ತು ಇದನ್ನು ಉಪವಾಸ, ದಾನ ಮತ್ತು ಪ್ರಾರ್ಥನೆಯಿಂದ ಗುರುತಿಸಲಾಗುತ್ತದೆ. ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್‌ನ ಮೊದಲ ಶ್ಲೋಕಗಳು ಈ ಸಮಯದಲ್ಲಿ ಪ್ರವಾದಿ ಮೊಹಮದ್‌ರಿಂದ ಬರೆಯಲಾಗಿದೆ ಎಂದು ನಂಬಲಾಗಿದೆ. ಚಳಿಗಾಲ, ಬೇಸಿಗೆ ಮತ್ತು ಮಳೆಗಾಲದಲ್ಲಿ ರಂಜಾನ್ ಆಚರಿಸುವುದನ್ನು ನಾವು ನೋಡುತ್ತೇವೆ. ಹಾಗಾದರೇ ರಂಜಾನ್ ಯಾಕೆ ಪ್ರತಿ ಬಾರಿ ಬೇರೆ ಬೇರೆ ದಿನಗಳಲ್ಲಿ ಬರುತ್ತದೆ ಎಂಬ ಬಗ್ಗೆ ತಿಳಿದುಕೊಳ್ಳೋಣ.

ಕ್ಯಾಲೆಂಡರ್‌ಗಳು ಧರ್ಮದಿಂದ ಧರ್ಮಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುವ ಲೆಕ್ಕವಿಲ್ಲದಷ್ಟು ಆವೃತ್ತಿಗಳಿವೆ. ಒಬ್ಬ ಸಾಮಾನ್ಯ ವ್ಯಕ್ತಿಗೆ, ಅವುಗಳನ್ನು ಅರ್ಥಮಾಡಿಕೊಳ್ಳಲು ಅಥವಾ ಆಚರಣೆಗೆ ತರಲು ಕಷ್ಟವಾಗುತ್ತದೆ. ಆದರೆ ಕ್ಯಾಲೆಂಡರ್‌ಗಳಲ್ಲಿ ಇರುವಾಗಿರುವುದು ಋತುಗಳಿಗೆ ಸಂಬಂಧಿಸಿವೆ. ಉದಾಹರಣೆಗೆ, ಹಿಂದೂ ಹಬ್ಬವಾದ ದಸರಾವನ್ನು ಯಾವಾಗಲೂ ಗ್ರೆಗೋರಿಯನ್ ಕ್ಯಾಲೆಂಡರ್‌ನ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಆಚರಿಸಲಾಗುತ್ತದೆ. ಆದರೂ ಹಿಂದೂ ಕ್ಯಾಲೆಂಡರ್ ಪ್ರತ್ಯೇಕವಾಗಿದೆ ಮತ್ತು ಅದರದ್ದೇ ವಿಶಿಷ್ಟ ತತ್ವಗಳನ್ನು ಹೊಂದಿದೆ.
ಆದರೆ ಇದು ಇಸ್ಲಾಮಿಕ್ ಹಿಜ್ರಿ ಕ್ಯಾಲೆಂಡರ್‌ನಂತಲ್ಲ. ಹಿಜ್ರಿ ಕ್ಯಾಲೆಂಡರ್ ಅನ್ನು ಈ ಜಗತ್ತಿನಲ್ಲಿ ಸುಮಾರು 2 ಬಿಲಿಯನ್ ಮುಸ್ಲಿಮರು ಅನುಸರಿಸುತ್ತಾರೆ. ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮೊಹಮ್ಮದ್ ಅವರ ಪವಿತ್ರ ವಲಸೆ ನಡೆದ ವರ್ಷದಿಂದ ಎಣಿಸುವ ಈ ಕ್ಯಾಲೆಂಡರ್ ಋತುಗಳೊಂದಿಗೆ ಸಂಬಂಧ ಹೊಂದಿಲ್ಲ. ಹಿಜ್ರಿ ಎಂಬುದು "ಹಿಜ್ರಾ" ಎಂಬ ಪದದಿಂದ ಬಂದಿದೆ. ಇದು ಅರೇಬಿಕ್ ಭಾಷೆಯಲ್ಲಿ ನಿರ್ಗಮನ ಅಥವಾ ವಲಸೆ ಎಂದರ್ಥ, ಪ್ರವಾದಿ ಮೊಹಮ್ಮದ್ ಮತ್ತು ಅವರ ಅನುಯಾಯಿಗಳು ಮದೀನಾಕ್ಕೆ ವಲಸೆ ಹೋಗುವುದನ್ನು ಈ ಪದ ಉಲ್ಲೇಖಿಸುತ್ತದೆ.

ರಂಜಾನ್ ಪವಿತ್ರ ತಿಂಗಳು ಚಂದ್ರನ ಕ್ಯಾಲೆಂಡರ್ ಅನ್ನು ಆಧರಿಸಿದೆ, ಇದು ಸುಮಾರು 354 ದಿನಗಳ 12 ತಿಂಗಳ ವರ್ಷವನ್ನು ಒಳಗೊಂಡಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಋತುಗಳಿಂದ ಸ್ವತಂತ್ರವಾಗಿ ತನ್ನದೇ ಆದ ನಿಯಮಗಳನ್ನು ಅನುಸರಿಸುತ್ತದೆ. ಈ ಕಾರಣದಿಂದಾಗಿ ಕೆಲವೊಮ್ಮೆ ಚಳಿಗಾಲದಲ್ಲಿ, ಕೆಲವೊಮ್ಮೆ ಮಳೆಗಾಲದಲ್ಲಿ ರಂಜಾನ್ ಬರುತ್ತದೆ.
ಧಾರ್ಮಿಕ ಉದ್ದೇಶಗಳಿಗಾಗಿ ಎಲ್ಲಾ ಮುಸ್ಲಿಮರು ಅನುಸರಿಸುವ ಹಿಜ್ರಿ ಕ್ಯಾಲೆಂಡರ್ 12 ತಿಂಗಳುಗಳನ್ನು ಹೊಂದಿದೆ. ಇದು ಚಂದ್ರನ ಚಕ್ರವನ್ನು ಆಧರಿಸಿದೆ, ಅಂದರೆ, ಚಂದ್ರನ ಚಲನೆಗಳ ಮೇಲೆ ರಚಿತವಾಗಿದೆ. ಕ್ಯಾಲೆಂಡರ್ ಮೊಹರಂ ತಿಂಗಳಿನಿಂದ ಪ್ರಾರಂಭವಾಗುತ್ತದೆ ಮತ್ತು ಧು ಅಲ್ ಹಿಜ್ಜಾದೊಂದಿಗೆ ಕೊನೆಗೊಳ್ಳುತ್ತದೆ. ಮುಸ್ಲಿಂ ಸಮುದಾಯಕ್ಕೆ ಈ ರಂಜಾನ್ ತಿಂಗಳು ಅತ್ಯಂತ ಪ್ರಮುಖವಾದದ್ದು.

ಗ್ರೆಗೋರಿಯನ್ ಕ್ಯಾಲೆಂಡರ್ ಮತ್ತು ಇತರ ಪ್ರಮುಖ ಕ್ಯಾಲೆಂಡರ್‌ಗಳು ಸೂರ್ಯನ ಚಲನೆಯನ್ನು ಅವಲಂಬಿಸಿರುತ್ತದೆ ಅಥವಾ ಕೆಲವು ನಿದರ್ಶನಗಳಲ್ಲಿ, ಸೂರ್ಯ ಮತ್ತು ಚಂದ್ರನ ಎರಡೂ ಚಲನೆಗಳನ್ನು ಲೂನಿಸೋಲಾರ್ ಎಂದು ಕರೆಯಲಾಗುತ್ತದೆ. ಹೀಗಿರುವಾಗ, ಹಿಜ್ರಿ ಕ್ಯಾಲೆಂಡರ್ ಚಂದ್ರನ ಚಕ್ರವನ್ನು ಅವಲಂಬಿಸಿರುತ್ತದೆ. ಅಂದರೆ, ಚಂದ್ರನ ಸ್ಥಾನ ಮಾತ್ರ ಅವಲಂಬಿಸಿರುತ್ತದೆ.
ಚಂದ್ರನ ಚಕ್ರವು 29 ದಿನಗಳವರೆಗೆ ಇರುತ್ತದೆ. ಇದು ಹಿಜ್ರಿ ಕ್ಯಾಲೆಂಡರ್‌ನಲ್ಲಿ ಒಂದು ತಿಂಗಳು ಅಂದರೆ 29 ದಿನ ಇರುತ್ತದೆ. ಆದರೆ ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಒಂದು ತಿಂಗಳು 30 ರಿಂದ 31 ದಿನಗಳನ್ನು ಹೊಂದಿರುತ್ತದೆ. ಹೀಗಾಗಿ ಪ್ರತಿ ತಿಂಗಳು 1 ರಿಂದ 2 ದಿನಗಳ ಈ ಕೊರತೆಯಿಂದಾಗಿ ಹಿಜ್ರಿ ಕ್ಯಾಲೆಂಡರ್‌ನಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ 365 ರಿಂದ 366 ದಿನಗಳಿಗೆ ವಿರುದ್ಧವಾಗಿ ಕೇವಲ 354 ರಿಂದ 355 ದಿನಗಳು ಇರುತ್ತವೆ.
ಈ ಹಿನ್ನಲೆಯಲ್ಲಿ 2022 ರ ಏಪ್ರಿಲ್ 2 ರಂದು ರಂಜಾನ್ ಪ್ರಾರಂಭವಾದರೆ ಈಗ 2023 ರಲ್ಲಿ ಮಾರ್ಚ್ 22 ರಂದು ರಂಜಾನ್ ಪ್ರಾರಂಭವಾಗುತ್ತಿದೆ. 2024 ರ ರಂಜಾನ್ ಮಾರ್ಚ್ 10 ರಂದು ಪ್ರಾರಂಭವಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ನಂತೆ ಇಸ್ಲಾಮಿಕ್ ಕ್ಯಾಲೆಂಡರ್ ಸಂಪೂರ್ಣವಾಗಲು 33 ವರ್ಷಗಳು ಬೇಕಾಗುತ್ತವೆ. ಅಂದರೆ, ರಂಜಾನ್ ಮತ್ತೆ 2023 ರ ದಿನಾಂಕದಂದು ಬರಬೇಕು ಅಂದತರೆ ಇನ್ನೂ 33 ವರ್ಷಗಳನ್ನು ತೆಗೆದುಕೊಳ್ಳುತ್ತದೆ.
ಹಿಜ್ರಿ ಕ್ಯಾಲೆಂಡರ್‌ನ ಈ ವಿಶಿಷ್ಟ ಕಾರಣದಿಂದಾಗಿಯೇ ಕೆಲವು ಇಂಗ್ಲಿಷ್ ಕ್ಯಾಲೆಂಡರ್ ವರ್ಷಗಳಲ್ಲಿ ಒಂದೇ ವರ್ಷದಲ್ಲಿ ಎರಡು ಇಸ್ಲಾಮಿಕ್ ಹಬ್ಬಗಳು ಬರಲು ಕಾರಣವಾಗುತ್ತದೆ. ಉದಾಹರಣೆಗೆ, 2033 ರಲ್ಲಿ ನಾವು ಈದ್ ಅನ್ನು ಜನವರಿ ಮತ್ತು ಡಿಸೆಂಬರ್‌ನಲ್ಲಿ ಎರಡು ಬಾರಿ ಆಚರಿಸುತ್ತೇವೆ.
ಪ್ರಪಂಚದಾದ್ಯಂತದ 2 ಶತಕೋಟಿಗೂ ಹೆಚ್ಚು ಮುಸ್ಲಿಮರು ಪ್ರತಿ ದಿನ ಮುಂಜಾನೆ ಮತ್ತು ಸೂರ್ಯಾಸ್ತದ ನಡುವೆ ಆಹಾರ, ಪಾನೀಯ ಮತ್ತು ಲೈಂಗಿಕ ಸಂಬಂಧಗಳ:ನ್ನು ಬಿಟ್ಟು ಉಪವಾಸದಲ್ಲಿ ತೊಡಗುತ್ತಾರೆ. ಈ ಉಪವಾಸದ ಅವಧಿಗಳು ದಿನಕ್ಕೆ 11 ರಿಂದ 16 ಗಂಟೆಗಳವರೆಗೆ ಇರಬಹುದು. ಪ್ರತಿದಿನ ಉಪವಾಸ ಮಾಡುವ ಮೊದಲು, ಮುಸ್ಲಿಮರು ಸುಹೂರ್ ಎಂಬ ಮುಂಜಾನೆಯ ಊಟದಿಂದ ಪ್ರಾರಂಭಿಸುತ್ತಾರೆ. ದಿನದ ಮೊದಲ ಪ್ರಾರ್ಥನೆಯಾದ ಫಜ್ರ್ ಅನ್ನು ಪ್ರಾರಂಭಿಸುತ್ತಾರೆ.
ಮುಸ್ಸಂಜೆಯಲ್ಲಿ, ಸೂರ್ಯಾಸ್ತದ ಪ್ರಾರ್ಥನೆ ಅಥವಾ ಮಗ್ರೆಬ್ ಅನ್ನು ಮುಗಿಸಿದ ನಂತರ, ಮುಸ್ಲಿಮರು ಇಫ್ತಾರ್ ಎಂದು ಕರೆಯಲ್ಪಡುವ ಊಟದೊಂದಿಗೆ ಆಚರಿಸುತ್ತಾರೆ. ಇಫ್ತಾರ್ ಎಂದರೆ ಇದರರ್ಥ "ಉಪವಾಸವನ್ನು ಮುರಿಯುವುದು" . ಊಟವನ್ನು ಸಾಮಾನ್ಯವಾಗಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಲಾಗುತ್ತದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications