ಅತ್ಯಾಚಾರಿ ಬಾಬಾ ರಾಮ್ ರಹೀಮ್ ಜನಪ್ರಿಯತೆಯ ಗುಟ್ಟೇನು?

By: ವಿಕಾಸ್ ನಂಜಪ್ಪ
Subscribe to Oneindia Kannada

ಚಂಡೀಗಢ, ಆಗಸ್ಟ್ 25:ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರಂದು ಘೋಷಿಸಿದೆ.

ಅತ್ಯಾಚಾರ ಸೇರಿದಂತೆ ಹಲವು ಕ್ರಿಮಿನಲ್ ಕೇಸುಗಳನ್ನು ರಾಮ್ ರಹೀಮ್ ಅವರ ಮೇಲೆ ಹೊರೆಸಲಾಗಿದೆ. ಆದರೂ, ರಾಮ್ ರಹೀಮ್ ಅವರಿಗೆ ಲಕ್ಷಾಂತರ ಭಕ್ತರಿದ್ದಾರೆ ಏಕೆ? ಅಪರಾಧ ಪ್ರಕರಣದ ತೀರ್ಪು ಪ್ರಕಟಿಸಲು ಕ್ರಿಕೆಟ್ ಸ್ಟೇಡಿಯಂನ್ನು ಜೈಲಾಗಿ ಪರಿವರ್ತಿಸಲಾಗುತ್ತದೆ.

ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣದ ತೀರ್ಪಿನ ಪ್ರಭಾವ ಪಂಜಾಬ್, ಹರ್ಯಾಣ ಅಲ್ಲದೆ ರಾಜಸ್ಥಾನಕ್ಕೂ ವ್ಯಾಪಿಸಿದೆ. ರಾಜಸ್ಥಾನದಲ್ಲಿಯೂ 48 ಗಂಟೆಗಳ ಕಾಲ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿದೆ. ಇಡೀ ರಾಜಸ್ಥಾನದಾದ್ಯಂತ ಸಿಆರ್'ಪಿಸಿ ಸೆಕ್ಷನ್ 144 ಹೇರಲಾಗಿದೆ.

ಅಗತ್ಯ ಬಿದ್ದರೆ ಶಸ್ತ್ರಾಸ್ತ್ರ ಬಳಸುವಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಹರ್ಯಾಣ ಸರಕಾರಕ್ಕೆ ಸೂಚನೆ ನೀಡಿದೆ. ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಎಫ್ಐಆರ್ ದಾಖಲಿಸುವಂತೆಯೂ ಕೋರ್ಟ್ ಹೇಳಿದೆ.

Why does Dera chief have so many followers

ಜಾತಿ ವ್ಯವಸ್ಥೆ ಅಲ್ಲಾಡಿಸಿದ್ದ ಬಾಬಾ : ಜಾತಿ ವ್ಯವಸ್ಥೆಯಲ್ಲಿ ಮುಳುಗಿರುವ ಪಂಜಾಬ್ ಹಾಗೂ ಹರ್ಯಾಣದಲ್ಲಿ ಡೇರಾ ಸಚ್ಚಾ ಸೌಧಾ ಸಂಸ್ಥೆ ಮೂಲಕ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರು ಹೊಸ ಬೆಳಕು ಮೂಡಿಸಿದ್ದರು. ಜಾತಿ ರಹಿತ ವ್ಯವಸ್ಥೆ ತರಲು ಯತ್ನಿಸಿದರು. ಇದಕ್ಕೆ ಸಾರ್ವಜನಿಕರಿಂದ ಭರಪೂರ ವ್ಯಕ್ತವಾಗಿತ್ತು.

ಸಮಾಜದಲ್ಲಿ ಹಿಂದುಳಿದ ವರ್ಗದವರು ರಾಮ್ ರಹೀಮ್ ಬೆನ್ನಹಿಂದೆ ನಿಂತರು. ಸಬ್ಸಿಡಿ ದರದಲ್ಲಿ ಆಹಾರ ವಿತರಣೆ, ಔಷಧಿ ಪೂರೈಕೆ ಮಾಡುವ ಮೂಲಕ ಜನಪ್ರಿಯತೆ ಗಳಿಸಿದರು. ಸರಿ ಸುಮಾರು 104ಕ್ಕೂ ಅಧಿಕ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿರುವ ರಾಮ್ ರಹೀಮ್ ಅವರು ಪಂಜಾಬಿನ ಬಹುಮುಖ್ಯ ಸಮಸ್ಯೆಯ ವಿರುದ್ಧ ಹೋರಾಟ ನಡೆಸಿದರು.

ಐದು ಕೋಟಿಗೂ ಅಧಿಕ ಮಂದಿಯನ್ನು ಮಾದಕ ವ್ಯಸನದಿಂದ ಮುಕ್ತರಾಗುವಂತೆ ಮಾಡಿ 13ಕ್ಕೂ ಅಧಿಕ ಗಿನ್ನೆಸ್ ಪ್ರಶಸ್ತಿಗೆ ಭಾಜನರಾದರು. ಇದೆಲ್ಲರ ಜತೆಗೆ ಸಿನಿಮಾ, ಸಂಗೀತದ ಮೂಲಕ ಕೂಡಾ ರಾಮ್ ರಹೀಮ್ ಜನರಿಗೆ ಹತ್ತಿರವಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: English
English summary
Gurmeet Ram Rahim Singh the leader of the Dera Sacha Sauda convicted in rape case. This big taint on him has not deterred lakhs of his followers to take to the streets and ensure a complete lockdown in Haryana and Punjab.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ