ಬಿಗ್ ಬಾಸ್ ಮನೆಯಲ್ಲಿ ಹನಿಪ್ರೀತ್ 'ಧ್ಯಾನ'ದ ರಹಸ್ಯ
ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋನಂತೆಯೇ ಗುಹೆಯಲ್ಲಿ ಸೆಟ್ಟಿಂಗ್ ಹಾಕಲಾಗಿತ್ತು. ಆರು ದಂಪತಿಗಳನ್ನು ಈ ರಿಯಾಲಿಟಿ ಆಟಕ್ಕಾಗಿ ಆಯ್ಕೆ ಮಾಡಲಾಗಿತ್ತು. ಥೇಟ್ ಹಿಂದಿ ಬಿಗ್ ಬಾಸ್ ನಂತೆಯೇ ಎಲ್ಲ ಚಟುವಟಿಕೆಗಳು ಇರುತ್ತಿದ್ದವು. ಆದರೆ, ಒಂದೇ ವಿಶೇಷವೆಂದರೆ ತಪ್ಪು ಮಡದಿದ್ದರೆ ಆಯಿತು.
ಆದರೆ, ಅದ್ಭುತ ಅಂಗಸೌಷ್ಟವ ಇರುವ ಆ ಸುಂದರಿ ತಪ್ಪು ಮಾಡುತ್ತಲಿದ್ದಳು. ರಿಯಾಲಿಟಿ ಶೋಗಳಲ್ಲಿ ತಪ್ಪುಗಳಾಗುವುದು ಸಹಜ. ಆದರೆ, ಆ ಚೆಲುವೆ ಬೇಕಂತೆಲೇ ತಪ್ಪು ಮಾಡುತ್ತಿದ್ದಳು. ಹೀಗೆ ತಪ್ಪು ಮಾಡುತ್ತಲಿದ್ದರೆ ಸಿಗುತ್ತಿದ್ದ ಶಿಕ್ಷೆ ಏನು ಗೊತ್ತೆ?
ಆ ರಹಸ್ಯ ಕೋಣೆಯಲ್ಲಿ ಇಡೀ ದಿನ ಬಾಗಿಲು ಹಾಕಿಕೊಂಡು 'ಧ್ಯಾನ'ಮಗ್ನರಾಗಿ ಬಿಗ್ ಬಾಸ್ ಬಾಬಾನೊಂದಿಗೆ ಕಾಲ ಕಳೆಯಬೇಕು. 'ಧ್ಯಾನ'ಮಗ್ನರಾಗುವುದೆಂದರೆ ಆ ಬಾಬಾನ ಎದಿರು ಹೆಂಡತಿ ಸಂಪೂರ್ಣವಾಗಿ ನಗ್ನಳಾಗಿ ಕಾಲ ಕಳೆಯುತ್ತಿದ್ದಾಳೆ ಎಂದು ಆ ಬೆಪ್ಪ ಗಂಡನಿಗೆ ಗೊತ್ತೇ ಇರಲಿಲ್ಲ. ಗೊತ್ತಾಗುವುದರಷ್ಟರಲ್ಲಿ ಕಾಲ ಮಿಂಚಿತ್ತು.
ಬಾಬಾನೊಂದಿಗೆ ನಗ್ನಳಾಗಿ ಕೋಣೆಯಲ್ಲಿರುತ್ತಿದ್ದ ಆ ಸುಂದರಿ ಬಾಬಾ ಗುರ್ಮೀತ್ ರಾಮ್ ರಹೀಂನ 'ಸಾಕು ಮಗಳು' ಎಂದೇ ಜನಜನಿತಳಾಗಿರುವ ಹನಿಪ್ರೀತ್. ಆಕೆಯ ಗಂಡ ಹನಿಪ್ರೀತ್ ಳೊಂದಿಗೆ ಹನ್ನೊಂದು ವರ್ಷ ಸಂಸಾರ ಮಾಡಿ, ಇವರ ರಹಸ್ಯ ಆಟಗಳನ್ನು ಕಣ್ಣಾರೆ ಕಂಡು ವಿಚ್ಛೇದನ ಕೊಟ್ಟಿರುವ ವಿಶ್ವಾಸ್ ಗುಪ್ತಾ.
ವಿಶ್ವಾಸ್ ಗುಪ್ತಾ ಅವರು ಶುಕ್ರವಾರ ಹನಿಪ್ರೀತ್ ಮತ್ತು ರಾಮ್ ರಹೀಂ ಅವರ ರಾಸಲೀಲೆಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ, ಡೇರಾ ಸಚ್ಚಾ ಸೌಧಾದ ಗುಹೆಯಲ್ಲಿ, ಬಾಬಾನ ಬೆಂಬಲಿಗರೇ ಬೆಚ್ಚಿಬೀಳುವಂಥ, ಆತನ ಸಹಸ್ರಾರು ಅನುಯಾಯಿಗಳು ಅಸಹ್ಯದಿಂದ ತಲೆತಗ್ಗಿಸುವಂಥ ವಿವರಗಳನ್ನು ನೀಡಿದ್ದಾರೆ.

ರಾಮ್ ರಹೀಂ ಮತ್ತು ಹನಿಪ್ರೀತ್ ರಾಸಲೀಲೆ
ಜೈಲು ಸೇರಿರುವ ಬಾಬಾ ರಾಮ್ ರಹೀಂ ಅಪ್ಪ, ತಲೆಮರೆಸಿಕೊಂಡಿರುವ ಹನಿಪ್ರೀತ್ ಇನ್ಸಾನ್ ಆತನ ಮಗಳು ಎಂಬ ವ್ಯಾಖ್ಯಾನವನ್ನು ವಿಶ್ವಾಸ್ ಗುಪ್ತಾ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಅಪ್ಪ ಮಗಳು ಎಂದು ಹೇಳಿಕೊಂಡು ಅವರಾಡುತ್ತಿದ್ದ ರಾಸಲೀಲೆಗಳ ಅಧ್ಯಾಯವನ್ನು ಮಾಧ್ಯಮದ ಎದಿರು ತೆರೆದಿಟ್ಟಿದ್ದಾರೆ.

ಮೇಲಿಂದ ಮೇಲೆ ತಪ್ಪು ಮಾಡುತ್ತಿದ್ದುದೇಕೆ?
ಬಿಗ್ ಬಾಸ್ ನಂತೆ ವರ್ತಿಸುತ್ತಿದ್ದ ರಾಮ್ ರಹೀಂ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಿದ್ದ. ಅತಿಹೆಚ್ಚು ತಪ್ಪು ಮಾಡಿದವಳು ಹನಿಪ್ರೀತ್ ಇನ್ಸಾನ್. ಬಾಬಾನೊಂದಿಗೆ ಕೋಣೆಯಲ್ಲಿ ಏಕಾಂತದ 'ಶಿಕ್ಷೆ' ಮಾಡಿದವಳೂ ಅವಳೇ. ಕಡೆಗೆ ಬಿಗ್ ಬಾಸ್ ರಿಲಾಯಿಟಿ ಶೋ ಗೆದ್ದಿದ್ದು ಇದೇ ಹನಿಪ್ರೀತ್.

ಇಲ್ಲಿಂದ ಹೊರಬಿದ್ದರೆ ನನ್ನ ಕೊಲೆ ಖಚಿತ
ಡೇರಾ ಸಚ್ಚಾ ಸೌಧಾದ ಗುಹೆಯಲ್ಲಿ ಹಾಕಲಾಗಿದ್ದ ಬಿಗ್ ಬಾಸ್ ಸೆಟ್ ನಲ್ಲಿ ದಂಪತಿಗಳು 28 ದಿನಗಳನ್ನು ಕಳೆಯಬೇಕಾಗಿತ್ತು. ಆದರೆ, ಅಲ್ಲಿ ನಡೆಯುತ್ತಿದ್ದ ಅನಾಚಾರವನ್ನು ಹೇಳಿದರೆ ನನ್ನ ಕೊಲೆಯಾಗುತ್ತದೆ ಎಂಬ ಭಯದಿಂದ ಯಾವುದೇ ವಿವರಗಳನ್ನು ನೀಡಿರಲಿಲ್ಲ ಎಂದು ವಿಶ್ವಾಸ್ ಹೇಳಿದ್ದಾರೆ.

ದತ್ತು ಪಡೆಯುವ ಪ್ರಕ್ರಿಯೆ ನಡೆದೇ ಇಲ್ಲ
ಹನಿಪ್ರೀತ್ ಳನ್ನು ಮಗಳೆಂದು ದತ್ತು ಪಡೆಯುವ ಯಾವುದೇ ಕಾನೂನಾತ್ಮಕ ಪ್ರಕ್ರಿಯೆಗಳು ನಡೆದಿಲ್ಲ. ಅವರು ಹೇಳುತ್ತಿರುವುದೆಲ್ಲವೂ ಶುದ್ಧ ಸುಳ್ಳು. ಆಕೆ 2009ರಿಂದಲೇ ಬಾಬಾ ರಾಮ್ ರಹೀಂ ಹೆಂಡತಿಯಂತೆ ನಡೆದುಕೊಳ್ಳುತ್ತಿದ್ದಾಳೆ. ಅವರಿಬ್ಬರೂ ಅಪ್ಪ ಮಗಳಂತೆ ಯಾವತ್ತೂ ನಡೆದುಕೊಂಡಿಲ್ಲ ಅಂತಾರೆ ವಿಶ್ವಾಸ್.

ಕಣ್ಣೀರುಗರೆಯುತ್ತಲೇ ಎದ್ದುಹೋದ ವಿಶ್ವಾಸ್
ರಾಮಾ ರಹೀಂ ಜೈಲಲ್ಲಿದ್ದರೂ ಅಷ್ಟೇ ಪ್ರಭಾವಿ ಮನುಷ್ಯ. ಈ ಪತ್ರಿಕಾಗೋಷ್ಠಿಯಿಂದ ಹೊರಹೋದ ಮೇಲೆ ನಾನು ಬದುಕಿ ಉಳಿಯುತ್ತೇನೋ ಗೊತ್ತಿಲ್ಲ. ನನ್ನ ಕುಟುಂಬಕ್ಕೆ ರಾಮ್ ರಹೀಂ ಮತ್ತು ಹನಿಪ್ರೀತ್ ಹಲವಾರು ಬಾರಿ ಬೆದರಿಕೆ ಹಾಕಿದ್ದಾರೆ ಎಂದು ಅಳುತ್ತಲೇ ಪತ್ರಿಕಾಗೋಷ್ಠಿಯಿಂದ ಅವರು ಎದ್ದು ಹೋದರು.

ತಲೆಮರೆಸಿಕೊಂಡಿರುವ ಹನಿಪ್ರೀತ್ ಇನ್ಸಾನ್
ಬಾಬಾ ರಾಮ್ ರಹೀಂ ಇಡೀ ಆಸ್ತಿಪಾಸ್ತಿಯ ಚುಕ್ಕಾಣಿ ಹಿಡಿದಿರುವ ಹನಿಪ್ರೀತ್ ತಲೆಮರೆಸಿಕೊಂಡಿದ್ದು, ಆಕೆ ಎಲ್ಲಿದ್ದಾಳೆ ಎಂದು ತಿಳಿಯುವುದು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಹನಿಪ್ರೀತ್ ನೇಪಾಳಕ್ಕೆ ಪರಾರಿಯಾಗಿರಬಹುದು ಎಂದು ಅನುಮಾನಿಸಲಾಗಿದೆ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications