Get Updates
Get notified of breaking news, exclusive insights, and must-see stories!

ಪಿಎನ್ ಬಿ ಆರೋಪಿಗಳಿಗೆ ಚಿದಂಬರಂ ನೆರವು : ಬಿಜೆಪಿ ಆರೋಪ

ಬೆಂಗಳೂರು, ಮಾರ್ಚ್ 06: 2014ರ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದ ಸಂದರ್ಭದಲ್ಲೇ ಅಂದಿನ ಹಣಕಾಸು ಸಚಿವ ಪಿ.ಚಿದಂಬರಂ ಅವರು, ಹಗರಣದಲ್ಲಿ ಸಿಲುಕಿರುವ ಗೀತಾಂಜಲಿ ಜೆಮ್ಸ್ ಸೇರಿದಂತೆ ಏಳು ಖಾಸಗಿ
ಕಂಪನಿಗಳಿಗೆ ಬಂಗಾರ ಆಮದು ಲಾಭಗಳನ್ನು ವಿತರಿಸಿದ್ದರು ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಈ ಆರೋಪ ಮಾಡಿದ್ದು, ಪ್ರತಿಪಕ್ಷಗಳ ಸುಳ್ಳು ಹಾಗೂ ವಂಚನೆಗಳನ್ನು ಬಯಲು ಮಾಡುವುದಾಗಿ ಹೇಳಿದ್ದಾರೆ.

2014ರ ಮೇ 16ರಂದು ನರೇಂದ್ರ ಮೋದ ನೇತೃತ್ವದಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಿದ್ದ ಸಮಯದಲ್ಲೇ ಚಿದಂಬರಂ ಅವರು ಏಳು ಖಾಸಗಿ ಉದ್ಯಮಗಳಿಗೆ 80:20 ಬಂಗಾರ ಆಮದು ಯೋಜನೆಯಡಿ ಲಾಭ ನೀಡಿದ್ದರು. ಇದರರ್ಥ ಏನು? ಈ ಬಗ್ಗೆ ಚಿದಂಬರಂ ಹಾಗೂ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.

Why did Chidambaram pass gold import benefit order on 2014 Lok Sabha result day?

ಇದೇನೂ ಭ್ರಷ್ಟಾಚಾರವೇ? ಅಥವಾ ಜುಮ್ಲಾ'ವೇ? (ಒಣ ಮಾತು) ಎಂಬುದನ್ನು ಚಿದಂಬರಂ ಉತ್ತರಿಸಬೇಕು ಎಂದವರು ಲೇವಡಿ ಮಾಡಿದ್ದಾರೆ. ಚಿದಂಬರಂ ಹಲವು ಬಾರಿ ಕೇಂದ್ರ ಸರ್ಕಾರವನ್ನು ಜುಮ್ಲಾ' ಎಂದು ಲೇವಡಿ ಮಾಡಿದ್ದಕ್ಕೆ ಪ್ರಸಾದ್ ತಿರುಗೇಟು ನೀಡಿದಂತಿತ್ತು.

ಚಿದಂಬರಂ ತೆಗೆದುಕೊಂಡ ನಿರ್ಧಾರವನ್ನು ಆರ್.ಬಿ.ಐ. ಕೆಲ ದಿನಗಳ ನಂತರ ಅಂಗೀಕರಿಸಿತ್ತು. ಆನಂತರ ಮೋದಿ ಸರ್ಕಾರ 80:20 ಬಂಗಾರದ ಯೋಜನೆಯನ್ನೇ ರದ್ದುಗೊಳಿಸಿತ್ತು ಎಂದವರು ತಿಳಿಸಿದರು.

ಹಿಂದಿನ ಯುಪಿಎ ಸರ್ಕಾರ ಬ್ಯಾಂಕುಗಳಲ್ಲಿ ಒತ್ತಡಕ್ಕೆ ಸಿಲುಕಿದ್ದ ಆಸ್ತಿಗಳ ವಿವರಗಳನ್ನು ದಾಖಲಿಸಲು ಅವಕಾಶ ನೀಡಿರಲಿಲ್ಲ. ಇದರಿಂದಾಗಿ ಬ್ಯಾಂಕುಗಳು ನೀಡಿದ ಸಾಲದ ಪ್ರಮಾಣ 2008ರಲ್ಲಿ 18.06 ಲಕ್ಷ ಕೋಟಿ ರೂ. ಇದ್ದು, ಆರು ವರ್ಷಗಳಲ್ಲೇ 52.15 ಲಕ್ಷ ಕೋಟಿ ರೂ.ಗಳಿಗೆ ತಲುಪಿತ್ತು ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+