• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮ್ಮ ಆಯ್ಕೆಯ ನಾಯಕ ಯಾರು? ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿ?

|
   ನರೇಂದ್ರ ಮೋದಿ ರಾಹುಲ್ ಗಾಂಧಿ | ನಿಮ್ಮ ನೆಚ್ಚಿನ ನಾಯಕನ ಆಯ್ಕೆ ಯಾವುದು? | Oneindia Kannada

   ಈ ದೇಶವನ್ನು ಮುನ್ನಡೆಸಲು ಯಾವ ನಾಯಕನಿಗೆ ಹೆಚ್ಚಿನ ಸಾಮರ್ಥ್ಯವಿದೆ? ಒಂದು ಅವಧಿ ಮುಗಿಸುತ್ತಿರುವ ನರೇಂದ್ರ ಮೋದಿಯವರ ಮೇಲಿನ ನಿಮ್ಮ ನಂಬಿಕೆ ಈಗ ಯಾವ ರೀತಿ ಇದೆ? ಅವರ ಮೇಲಿನ ನಂಬಿಕೆ ಇನ್ನೂ ಹಾಗೆಯೇ ಇದೆಯಾ, ಹುಸಿಯಾಗಿದೆಯಾ? ಮೋದಿಗೆ ಮತ್ತೊಂದು ಅವಕಾಶ ಕೊಡಲು ನೀವು ಸಿದ್ಧರಿದ್ದೀರಾ?

   ಪ್ರಧಾನಿ ನರೇಂದ್ರ ಮೋದಿಯವರಿಗೆ, ಪ್ರಧಾನಿಯಾಗುವ ಕನಸು ಕಾಣುತ್ತಿರುವ ರಾಹುಲ್ ಗಾಂಧಿ ಪರ್ಯಾಯ ನಾಯಕರಾಗುತ್ತಾರಾ? ಅಥವಾ ಮಾಯಾವತಿ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್, ಶರದ್ ಪವಾರ್ ಮುಂತಾದವರು ದೇಶದ ನೊಗ ಹೊರಲು ಸಿದ್ಧರಿದ್ದಾರಾ?

   ಡೇಲಿಹಂಟ್ ನಿಂದ ದೇಶದ ಅತೀದೊಡ್ಡ ಚುನಾವಣಾ ಸಮೀಕ್ಷೆ!

   ಇತ್ಯಾದಿ ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಡೇಲಿಹಂಟ್ ಮತ್ತು ಒನ್ಇಂಡಿಯಾ ಜನಮತದ ಹಂಟಿಂಗ್ ಆರಂಭಿಸಿದೆ. ಭ್ರಷ್ಟಾಚಾರದ ನಿಗ್ರಹ, ರಾಷ್ಟ್ರೀಯ ವಿಪ್ಪತ್ತು ನಿರ್ವಹಣೆ, ಸಮರ್ಥ ವಿದೇಶಾಂಗ ನೀತಿ ರೂಪಿಸುವ ಸಾಮರ್ಥ್ಯ ಯಾರಿಗಿದೆ ಎಂಬುದನ್ನು ಮನವರಿಕೆ ಮಾಡಿಕೊಂಡು ಮತದಾರರು ಮತ ಚಲಾಯಿಸಬಹುದಾಗಿದೆ.

   ಇಲ್ಲಿ ಬಿಎಸ್‌ಪಿ ನಾಯಕಿ ಮಾಯಾವತಿ, ತೃಣಮೂಲ ಕಾಂಗ್ರೆಸ್ ನ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಆಪ್ ನ ಅರವಿಂದ್ ಕೇಜ್ರಿವಾಲ್, ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಕೂಡ ಸ್ಪರ್ಧೆಯಲ್ಲಿದ್ದಾರಾದರೂ, ನೇರವಾಗಿ ಹೋರಾಟವಿರುವುದು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವೆ.

   ನಿಮ್ಮ ನಂಬಿಕೆ ಯಾರ ಮೇಲೆ? ಯಾರು ಪ್ರಧಾನಿಯಾದರೆ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದು? ವಿಚಾರ ಮಾಡಿ ಮತ ಚಲಾಯಿಸಿ, ನಿಮ್ಮ ಸ್ನೇಹಿತರಿಗೂ ತಿಳಿಸಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ. ದೇಶದ ಭವಿತವ್ಯ ನಿರ್ಮಿಸುವ ಹರಿಕಾರರು ನೀವೇ ಆಗಿರಿ.

   English summary
   Who do you trust more? Narendra Modi or Rahul Gandhi? Who is capable of leading India better? India's Largest ever political poll by Dailyhunt and Oneindia. Participate and cast your valuable vote.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X