ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1947ರ ಆಗಸ್ಟ್ 15 ರಂದು ಮಹಾತ್ಮಾ ಗಾಂಧೀಜಿ ಎಲ್ಲಿದ್ದರು?

|
Google Oneindia Kannada News

ಸ್ವಾತಂತ್ರ್ಯ ಸಿಕ್ಕು ಇಡೀ ದೇಶವೇ ಖುಷಿಯಿಂದ ಸಂಭ್ರಮಿಸುತ್ತಿರುವಾಗ ಮಹಾತ್ಮ ಗಾಂಧೀಜಿ ಮಾತ್ರ ಕೋಲ್ಕತ್ತದಲ್ಲಿ ಉಪವಾಸ ಆಚರಿಸುತ್ತಿದ್ದರಂತೆ.

ಈ ಕುರಿತು ಜನರು ಗಾಂಧೀಜಿಯವರ ಮುಂದೆ ಪ್ರಶ್ನೆಯನ್ನಿಟ್ಟಾಗ ಇದು ಸಂಭ್ರಮ ಎಂದು ನನಗೆ ಅನ್ನಿಸುತ್ತಿಲ್ಲ, ಸಂಭ್ರಮಿಸುವ ಮನಸೂ ಇಲ್ಲ ಎಂದಿದ್ದರಂತೆ.

ಹಾಗಾದರೆ ಆ ಸಂದರ್ಭದಲ್ಲಿ ಏನು ನಡೆದಿತ್ತು, ಗಾಂಧೀಜಿ ಯಾಕಾಗಿ ಹಾಗೆ ಹೇಳಿದ್ದರು ಎನ್ನುವ ಕುರಿತು ಮಾಹಿತಿ ಇಲ್ಲಿದೆ.ದೇಶವಿಭಜನೆಯ ಕಾವು ಹೆಚ್ಚಾಗಿತ್ತು, ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಮತ್ತು ಹಿಂದೂಗಳ ನಡುವೆ ಕೋಮುಗಲಭೆಯೂ ಶುರುವಾಗಿತ್ತು. ಹಿಂಸೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ಮುಸ್ಲಮರೇ ಹೆಚ್ಚಿನ ಸಂಖ್ಯೆಯಲ್ಲಿರುವ ಹೈದೇರಿ ಮಂಜಿಲ್ ಎಂಬಲ್ಲಿ ಕೆಲವು ದಿನಗಳ ಕಾಲ ಗಾಂಧೀಜಿ ಉಳಿದುಕೊಂಡಿದ್ದರು.

Where Was Mahatma Gandhi On 15 August, 1947

ಈ ಸ್ವಾತಂತ್ರ್ಯ ದಿನ ಎಂಬುವುದು ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷವನ್ನು ಬಿತ್ತುತ್ತಿದೆ. ಇಂತಹ ಸಂದರ್ಭಲ್ಲಿ ಇದನ್ನು ಹಬ್ಬ ಎಂದು ಕರೆಯಲು ಹೇಗೆ ಸಾಧ್ಯ ಎಂದು ಗಾಂಧೀಜಿ ಹೇಳಿದ್ದರಂತೆ.

ಹಾಗಾಗಿ ಇಡೀ ದಿನ ಉಪವಾಸವಿದ್ದು, ಚರಕದಲ್ಲಿ ನೂಲು ನೇಯ್ದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇನೆ ಎಂದು ಹೇಳಿದ್ದರು.

ಆಗಸ್ಟ್ 9 ರಂದು ಗಾಂಧೀಜಿಯವರು ಕೊಲ್ಕತ್ತಕ್ಕೆ ಬಂದಿದ್ದರು. ನಾವೋಖಲಿಗೆ ತೆರಳಲು ಯೋಚಿಸಿದ್ದರು. ಗಾಂಧೀಜಿ ಕೊಲ್ಕತ್ತದಿಂದ ದೆಹಲಿ, ಪಂಜಾಬ್, ಲಾಹೋರ್ ಹೀಗೆ ಹಲವು ಕಡೆ ಸಂಚರಸಿ ಶಾಂತಿ ಮರು ಸ್ಥಾಪನೆ ಮಾಡಿದ್ದರು.

English summary
On 15 August 1947, when the day of independence finally arrived, it was celebrated with gusto all over the country. Gandhi refused to participate in any festivities - along with his protege Abdul Ghaffar Khan, he was the last person to fight Partition till the very end. I cannot rejoice on August 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X