ಗುಜರಾತ್ ಫಲಿತಾಂಶ: ಗೆಲ್ಲೋದು ಇವರು, ಸೋಲೋದು ಅವರು!

Recommended Video

      ಗುಜರಾತ್ ವಿಧಾನಸಭಾ ಚುನಾವಣೆ 2017 : ಗೆಲ್ಲೋದು ಇವರೇ | Oneindia Kannada

      ಅಹ್ಮದಾಬಾದ್, ಡಿಸೆಂಬರ್ 18: ಸಮಸ್ತ ಭಾರತೀಯರ ಚಿತ್ತ ಇಂದು ಗುಜರಾತಿನ ಮೇಲೆ ನೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ತವರು ಎಂಬ ಕಾರಣಕ್ಕೆ ಗುಜರಾತ್ ಚುನಾವಣೆ ಮತ್ತಷ್ಟು ಕುತೂಹಲ ಕೆರಳಿಸಿದೆ. ಈಗಾಗಲೇ ಮತಎಣಿಕೆ ಆರಂಭವಾಗಿದ್ದು, ಟ್ವಿಟ್ಟರ್ ನಲ್ಲಿ ಸೋಲು ಯಾರಿಗೆ, ಗೆಲುವು ಯಾರಿಗೆ ಎಂಬ ಕುರಿತು ಚರ್ಚೆ ಆರಂಭವಾಗಿದೆ.

      ಡಿ.9 ಮತ್ತು 14 ರಂದು ನಡೆದ ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು (ಡಿ.18) ಹೊರಬೀಳಲಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿಯವರ ಗುಣಗಾನವೂ ಶುರುವಾಗಿದೆ. ಅಕಸ್ಮಾತ್ ಕಾಂಗ್ರೆಸ್ ಸೋತರೂ, ರಾಹುಲ್ ಗಾಂಧಿ ನಮ್ಮೆಲ್ಲರ ಮನಸ್ಸು ಗೆದ್ದಿದ್ದಾರೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು 22 ವರ್ಷಗಳ ಯಶಸ್ವೀ ಆಡಳಿತವನ್ನು ಮತ್ತೆ ಬಿಜೆಪಿ ಮುಂದುವರಿಸಿಕೊಂಡು ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

      ಯಾರು ಏನೇ ಅಂದರೂ ಇಂದು ಮಧ್ಯಾಹ್ನದ ಹೊತ್ತಿಗೆ ಗುಜರಾತಿನ ಐದು ವರ್ಷಗಳ ಭವಿಷ್ಯ ಏನು ಎಂಬುದು ತಿಳಿಯಲಿದೆ. ಈಗಾಗಲೇ ಟ್ವಿಟ್ಟಿಗರು, ಗೆಲ್ಲೋದು ಇವರು, ಸೋಲೋದು ಅವರು ಎನ್ನುತ್ತ ಚರ್ಚೆ ಆರಂಭಿಸಿದ್ದಾರೆ. ಅವುಗಳಲ್ಲಿ ಕೆಲವು ಟ್ವೀಟ್ ಗಳು ಇಲ್ಲಿವೆ.

      Array

      ಮೂರು ಸಂಗತಿಗಳು ಸತ್ಯ

      ಗುಜರಾತ್ ಫಲಿತಾಂಶದಲ್ಲಿ ಮೂರು ಸಂಗತಿಗಳಂತೂ ಸತ್ಯವಾಗಲಿವೆ.
      1. ಬಿಜೆಪಿ - 130 + ಸ್ಥಾನಗೆಲ್ಲಲಿದೆ
      2. ಐಎನ್ ಸಿ - 50 ಸ್ಥಾನ ಗೆಲ್ಲಲಿದೆ.
      3. ಇವಿಎಂ ಹ್ಯಾಕ್ ಆಗಿದೆ, ಪ್ರಜಾಪ್ರಭುತ್ವ ಸತ್ತಿದೆ, ಅಸಹಿಷ್ಟುತೆ ಹೆಚ್ಚುತ್ತಿದೆ ಎಂಬಿತ್ಯಾದಿ ನಾಟಕಗಳು ಸೋತವರಿಂದ ಶುರುವಾಗುತ್ತದೆ! ಎಂದು ಜಗೈಶರ್ಮಾ ಎಂಬುವವರು ಟ್ವೀಟ್ ಮಾಡಿದ್ದಾರೆ.

      ನನ್ನ ಅಭಿಪ್ರಾಯದ ಪ್ರಕಾರ...

      ಗುಜರಾತ್ ಚುನಾವಣೆಯ ಫಲಿತಾಂಶದಲ್ಲಿ ನನ್ನ ಪ್ರಕಾರ ಬಿಜೆಪಿ 93 ಸ್ಥಾನ ಪಡೆಯಲಿದೆ. ಕಾಂಗ್ರೆಸ್ 88 ಸ್ಥಾನ ಮತ್ತು ಇತರರು 1 ಸ್ಥಾನ ಗೆಲ್ಲಲಿದ್ದಾರೆ ಎಂದು ಸುಜಿತ್ ಚೌಧರಿ ಎಂಬುವವರು ಟ್ವೀಟ್ ಮಾಡಿದ್ದಾರೆ.

      ರಾಹುಲ್ ಗಾಂಧಿ ಘನತೆ ಹೆಚ್ಚಿದೆ!

      ನಾವು ಗೆಲ್ಲುತ್ತೇವೋ ಬಿಡುತ್ತೇವೋ, ಆದರೆ ರಾಹುಲ್ ಗಾಂಧಿಯವರು ಎಷ್ಟು ಸಂಭಾವಿತ ವ್ಯಕ್ತಿ ಎಂಬುದನ್ನು ಸಾಬೀತುಪಪಡಿಸಿದ ಗುಜರಾತ್ ಚುನಾವಣೆಗೆ ನಾನು ಋಣಿಯಾಗಿದ್ದೇನೆ. ತಮ್ಮ ಘನತೆಯನ್ನು ಕಳೆದುಕೊಳ್ಳದೆ, ಗೆಲುವಿಗಾಗಿ ಬಿಜೆಪಿಯಂತೆ ಕೀಳುಮಟ್ಟಕ್ಕಿಳಿಯದೆ ಸ್ಪರ್ಧೆ ನೀಡಿದ ರಾಹುಲ್ ಗಾಂಧಿಯವರಿಗೆ ನಮ್ಮ ಸಲಾಂ ಎಂದು ಐಶ್ವರ್ಯ ಮಹಾದೇವ್ ಎಂಬುವವರು ಟ್ವೀಟ್ ಮಾಡಿದ್ದಾರೆ.

      ಗುಜರಾತ್ ವರ್ಡಿಕ್ಟ್!

      ನನ್ನ ಪ್ರಕಾರ ಗುಜರಾತ್ ವರ್ಡಿಕ್ಟ್ ಹೀಗಿರುತ್ತೆ.
      ಬಿಜೆಪಿ 150 ಸ್ಥಾನಗಳಲ್ಲಿ ಗೆದ್ದರೆ, ಕಾಂಗ್ರೆಸ್ 29 ಸ್ಥಾನ ಗೆಲ್ಲಲಿದೆ. ಇತರರು 1 ಸ್ಥಾನ ಗೆಲ್ಲಲಿದ್ದಾರೆ ಎಂದು ಶಾಲಿನಿ ಶಾಲು ಎಂಬುವವರು ಟ್ವೀಟ್ ಮಾಡಿದ್ದಾರೆ. ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳನ್ನೂ ಮೀರಿ ಬಿಜೆಪಿಗೆ 150 ಸ್ಥಾನವನ್ನು ಶಾಲಿನಿ ನೀಡಿದ್ದಾರೆ!

      ಮೋದಿಯಿಂದಾಗಿ ಬಿಜೆಪಿಗೆ ಹಿನ್ನೆಡೆ

      ನನ್ನ ಪ್ರಕಾರ ಗುಜರಾತಿನಲ್ಲಿ ಕಾಂಗ್ರೆಸ್ 95 ಸ್ಥಾನ ಗೆದ್ದರೆ, ಬಿಜೆಪಿ 80 ಸ್ಥಾನ ಗೆಲ್ಲಲಿದೆ. ಆದೂ ಮೋದಿ ಕಾರಣಕ್ಕೆ! ಇತರರು 7 ಸ್ಥಾನ ಗೆಲ್ಲಲಿದ್ದಾರೆ. ಆದರೂ ಬಿಜೆಪಿಯೇ ಸರ್ಕಾರ ನಡೆಸಲಿದೆ! ಹೇಗೆ ಎಂಬುದು ನಿಮಗೇ ಗೊತ್ತು ಎಂದು ಸೌರಭ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

      ಸಂಜೆ ಹೊತ್ತಿಗೆ ಗೂಂಡಾಗಿರಿ ಶುರುವಾಗುತ್ತೆ!

      ನನ್ನ ಅಂದಾಜಿನ ಪ್ರಕಾರ ಬಿಜೆಪಿ ಗೆಲ್ಲುತ್ತೆ. ಆದರೆ ಮಧ್ಯಾಹ್ನದ ಹೊತ್ತಿಗೆ ಕಾಂಗ್ರೆಸ್ ಮತ್ತು ಪಾಸ್ ಇವಿಎಂ ಅನ್ನು ಬೈಯ್ಯುವುದಕ್ಕೆ ಆರಂಭಿಸುತ್ತಾರೆ. ನಂತರ ಸಂಜೆ ಹೊತ್ತಿಗೆ ಪಾಸ್ ಗೂಂಡಾಗಿರಿ ಆರಂಭಿಸಲಿದೆ. ಏಕೆಂದರೆ ಕಾಂಗ್ರೆಸ್, ಗುಜರಾತಿನಲ್ಲಿ ಅಶಾಂತಿಯನ್ನು ಸೃಷ್ಟಿಸಲು ಪಾಸ್ ಅನ್ನು ಛೂಬಿಟ್ಟಿದೆ ಎಂದು ಅತಿಂದ್ರ ಶುಕ್ಲಾ ಎಂಬುವವರು ಟ್ವೀಟ್ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+