ಅಕ್ಕಪಕ್ಕದ್ಮನೆಯವರಿಗೆ ಕೊರೊನಾ ಪಾಸಿಟಿವ್ ಬಂದ್ರೆ ಏನ್ಮಾಡೋದು? ಇಲ್ಲಿದೆ ಟಿಪ್ಸ್

ನವದೆಹಲಿ, ಆಗಸ್ಟ್.27: ಚೀನಾದಲ್ಲಿ ಮೊದಲಿಗೆ ಕಾಣಿಸಿಕೊಂಡ ಕೊರೊನಾವೈರಸ್ ಅಟ್ಟಹಾಸ ಶುರುವಾಗಿ ಈಗಾಗಲೇ 9 ತಿಂಗಳ ಕಳೆದು ಹೋಗಿವೆ. ಈ ಅವಧಿಯಲ್ಲಿ ವಿಶ್ವವ್ಯಾಪಿ ಆವರಿಸಿದ ಮಹಾಮಾರಿ ಸಾಂಕ್ರಾಮಿಕ ಪಿಡುಗಾಗಿದ್ದು 2 ಕೋಟಿ 43 ಲಕ್ಷಕ್ಕಿಂತ ಹೆಚ್ಚು ಜನರಿಗೆ ಅಂಟಿಕೊಂಡಿದೆ.

Recommended Video

      Fixed Deposit ಮೇಲಿನ ಬಡ್ಡಿ ದರ ಇಳಿಕೆ ಮಾಡಿದ HDFC Bank | Oneindia Kannada

      8,29,666 ಜನರ ಪ್ರಾಣವನ್ನು ಬಲಿ ಪಡೆದ ಕೊರೊನಾವೈರಸ್ ಹೆಸರು ಸಾರ್ವಜನಿಕರಲ್ಲಿ ನಡುಕ ಹುಟ್ಟಿಸುತ್ತಿದೆ. ಯಾವಾಗ, ಯಾವ ರೂಪದಲ್ಲಿ, ಯಾರಿಂದ ಯಾರಿಗೆ ಸೋಂಕು ಅಂಟಿಕೊಳ್ಳುತ್ತದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಇದರ ನಡುವೆ ಕೊವಿಡ್-19 ಸೋಂಕಿತನಿಂದ ಅಂತರ ಕಾಯ್ದುಕೊಳ್ಳುವ ಬಗ್ಗೆ ಸಾಂಕ್ರಾಮಿಕ ರೋಗತಜ್ಞರು ಸಲಹೆಗಳನ್ನು ನೀಡಿದ್ದಾರೆ.

      ನಿಮ್ಮ ಮನೆಯ ಪಕ್ಕದಲ್ಲೇ ಇರುವ ನೆರೆಹೊರೆಯವರಿಗೆ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಲ್ಲಿ ಮುನ್ನೆಚ್ಚರಿಕೆ ವಹಿಸುವುದು ಹೇಗೆ. ಯಾವ ರೀತಿ ಜಾಗೃತರಾಗಿ ನಡೆದುಕೊಳ್ಳಬೇಕು, ಕೊರೊನಾವೈರಸ್ ಸೋಂಕಿನಿಂದ ಅಂತರ ಕಾಯ್ದುಕೊಳ್ಳುವ ಬಗೆ ಹೇಗೆ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.

      ತಮ್ಮ ಮತ್ತು ಪ್ರೀತಿಪಾತ್ರರ ಆರೋಗ್ಯದ ಬಗ್ಗೆ ಎಚ್ಚರಿಕೆ

      ತಮ್ಮ ಮತ್ತು ಪ್ರೀತಿಪಾತ್ರರ ಆರೋಗ್ಯದ ಬಗ್ಗೆ ಎಚ್ಚರಿಕೆ

      ಒಂದು ವೇಳೆ ನಿಮ್ಮ ಸುತ್ತಮುತ್ತಲಿನ ಪ್ರದೇಶದ ಮನೆಯಲ್ಲಿ ವಾಸಿಸುವವರಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದಲ್ಲಿ ಆತಂಕ ಸೃಷ್ಟಿಯಾಗುವುದು ಸಹಜ. ಇಂಥ ಸಂದರ್ಭಗಳಲ್ಲಿ ಭೀತಿಗೊಳಗಾಗುವ ಬದಲು ಜಾಗೃತಿ ವಹಿಸುವುದು ಪ್ರಮುಖವಾಗಿರುತ್ತದೆ. ಸಾಮಾನ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ನಿಮ್ಮ ಮತ್ತು ಪ್ರೀತಿಪಾತ್ರರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ.

      ಮನೆಯಿಂದ ಹೊರಹೋಗುವಾಗ ಮಾಸ್ಕ್ ಧರಿಸುವುದು ಕಡ್ಡಾಯ

      ಮನೆಯಿಂದ ಹೊರಹೋಗುವಾಗ ಮಾಸ್ಕ್ ಧರಿಸುವುದು ಕಡ್ಡಾಯ

      ನೆರೆಹೊರೆಯವರಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದಲ್ಲಿ ಯಾವುದೇ ಕಾರಣಕ್ಕೂ ಮಾಸ್ಕ್ ಧರಿಸದೇ ಮನೆಯಿಂದ ಹೊರಗೆ ಹೋಗಬಾರದು. ಏಕೆಂದರೆ ಗಾಳಿಯಲ್ಲಿ ಕೊರೊನಾವೈರಸ್ ಸೋಂಕು ಹರಡುವ ಅಪಾಯವಿದೆ. ಅತಿಹೆಚ್ಚು ಸೋಂಕಿತ ಪ್ರಕರಣಗಳಲ್ಲಿ ಇಂಥದ್ದೇ ಉದಾಹರಣೆಗಳು ಕಂಡು ಬಂದಿರುವ ಬಗ್ಗೆ ಸಾಂಕ್ರಾಮಿಕ ರೋಗ ತಜ್ಞರು ಎಚ್ಚರಿಕೆ ನೀಡಿದ್ದಾರೆ.

      ಎರಡಕ್ಕಿಂತ ಹೆಚ್ಚು ಜನರು ಲಿಫ್ಟ್ ನಲ್ಲಿ ತೆರಳುವಂತಿಲ್ಲ

      ಎರಡಕ್ಕಿಂತ ಹೆಚ್ಚು ಜನರು ಲಿಫ್ಟ್ ನಲ್ಲಿ ತೆರಳುವಂತಿಲ್ಲ

      ಕೊರೊನಾವೈರಸ್ ಸೋಂಕಿನಿಂದ ಸುರಕ್ಷಿತವಾಗಿರಲು ಸಾಮಾಜಿಕ ಅಂತರವೇ ಮೂಲಮಂತ್ರವಾಗಿದೆ. ಹೀಗಾಗಿ ಲಿಫ್ಟ್ ಬಳಕೆಯಿಂದ ಸಾಧ್ಯವಾದಷ್ಟು ದೂರವಿರಬೇಕು. ಅನಿವಾರ್ಯ ಎನಿಸಿದ ಸಂದರ್ಭಗಳಲ್ಲಿ ಎರಡು ಮನೆಗೆ ಸೇರಿದವರು ಇಬ್ಬರಿಗಿಂತ ಹೆಚ್ಚು ಜನರು ಲಿಫ್ಟ್ ನಲ್ಲಿ ತೆರಳುವುದು ಅಪಾಯಕಾರಿ ಎನಿಸುತ್ತದೆ. ಲಿಫ್ಟ್ ನಲ್ಲೂ ಕಡ್ಡಾಯವಾಗಿ ದೈಹಿಕ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಇನ್ನು, ಬಾಗಿಲು, ವಿದ್ಯುತ್ ಸ್ವಿಚ್, ಪ್ರವೇಶ ದ್ವಾರಗಳ ಬಾಗಿಲಿನ ಹ್ಯಾಂಡಲ್ ಸೇರಿದಂತೆ ಅತಿಹೆಚ್ಚು ಜನರು ಸ್ಪರ್ಶಿಸುವ ವಸ್ತುಗಳ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು.

      ಹೊರಪ್ರದೇಶಗಳಲ್ಲಿ ವಸ್ತುಗಳನ್ನು ಸ್ಪರ್ಶಿಸುವ ಮುನ್ನ ಎಚ್ಚರ

      ಹೊರಪ್ರದೇಶಗಳಲ್ಲಿ ವಸ್ತುಗಳನ್ನು ಸ್ಪರ್ಶಿಸುವ ಮುನ್ನ ಎಚ್ಚರ

      ಮನೆ ಬಾಗಿಲಿನಲ್ಲಿ ಹಾಕಿರುವ ಗೇಟ್ ಬಾಕ್ಸ್, ಲಿಫ್ಟ್ ಸ್ವಿಚ್, ಎಸ್ಕಲೇಟರ್ ಸೇರಿದಂತೆ ಅತಿಹೆಚ್ಚು ಜನರು ಸ್ಪರ್ಶಿಸುವ ವಸ್ತುಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಇಂಥ ಪ್ರದೇಶಗಳಲ್ಲಿ ಕೈಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ಸ್ಯಾನಿಟೈಸರ್ ನ್ನು ಬಳಸಿಕೊಳ್ಳುವುದು ಉತ್ತಮ ಎಂದು ಸಾಂಕ್ರಾಮಿಕ ರೋಗತಜ್ಞರು ಸಲಹೆ ನೀಡುತ್ತಾರೆ.

      ಸಾಮಾನ್ಯವಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕು

      ಸಾಮಾನ್ಯವಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕು

      ಕೊರೊನಾವೈರಸ್ ಸೋಂಕಿನಿಂದ ಸುರಕ್ಷಿತವಾಗಿರಲು ಸಾಮಾನ್ಯವಾಗಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಪದೇ ಪದೆ ಮೂಗು, ಬಾಯಿ, ಕಣ್ಣುಗಳನ್ನು ಮುಟ್ಟಿಕೊಳ್ಳಬಾರದು. ಕೆಮ್ಮುವ ಮತ್ತು ಸೀನುವ ಮೊದಲು ಕೈಗಳನ್ನು ಅಡ್ಡ ಹಿಡಿಯಬಾರದು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಇದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸಬೇಕು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+