• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಡಿಯಾ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಎಂದರೇನು? ಇದರ ಲಾಭಗಳೇನು?

By Manjunatha
|
   ನರೇಂದ್ರಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ದೇಶದಾದ್ಯಂತ ಜಾರಿ | Oneindia kannada

   ನವದೆಹಲಿ, ಸೆಪ್ಟೆಂಬರ್ 01: ಪ್ರಧಾನಿ ನರೇಂದ್ರ ಮೋದಿ ಅವರ ಮತ್ತೊಂದು ಮಹಾತ್ವಾಕಾಂಕ್ಷಿ ಯೋಜನೆ ಐಪಿಪಿಬಿ ಇಂದಿನಿಂದ (ಸೆಪ್ಟೆಂಬರ್ 01) ರಿಂದ ಜಾರಿ ಆಗಲಿದೆ. ಮನೆ ಬಾಗಿಲಿಗೆ ಬ್ಯಾಂಕಿಂಗ್ ವ್ಯವಸ್ಥೆ ತಲುಪಿಸುವ ಈ ಯೋಜನೆ ಭಾರಿ ನಿರೀಕ್ಷೆ ಹುಟ್ಟಿಸಿದೆ.

   ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್ (ಭಾರತೀಯ ಅಂಚೆ ಬ್ಯಾಂಕ್) ಅನ್ನು ಮೋದಿ ಅವರು ಇಂದು ನವದೆಹಲಿಯಲ್ಲಿ ಲೋಕಾರ್ಪಣೆ ಮಾಡಿದ್ದಾರೆ.

   ಐಪಿಪಿಬಿಯು ಭಾರತದ ಅತಿದೊಡ್ಡ ಬ್ಯಾಂಕಿಂಗ್ ವ್ಯವಸ್ಥೆ ಎನಿಸಿಕೊಳ್ಳಲಿದ್ದು. ಇದು ಪ್ರಸ್ತುತ ಇರುವ ಬ್ಯಾಂಕ್‌ಗಳ ವ್ಯಾಪ್ತಿಗಿಂತಲೂ 2.5 ರಷ್ಟು ಹೆಚ್ಚಿನ ವ್ಯಾಪ್ತಿಯನ್ನು ತಲುಪುತ್ತದೆ. ಆ ಮೂಲಕ ಪ್ರತಿ ಹಳ್ಳಿಗೂ, ಪ್ರತಿ ಮನೆಗೂ ಬ್ಯಾಂಕಿಂಗ್ ಸೇವೆಯನ್ನು ಐಪಿಪಿಬಿಯು ಕಲ್ಪಿಸುತ್ತದೆ.

   ಲೋಕಸಭೆ-ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆಸಲು ಮೂರು ಆಯ್ಕೆ

   ದೇಶದ ಪ್ರತಿ ವ್ಯಕ್ತಿಯೂ ಬ್ಯಾಂಕಿಂಗ್ ವ್ಯವಸ್ಥೆಯ ಲಾಭ ಪಡೆದುಕೊಳ್ಳಬೇಕೆಂಬ ಬೃಹತ್ ಆಲೋಚನೆಯೊಂದಿಗೆ ಐಪಿಪಿಬಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದ್ದು ಈ ಯೋಜನೆ ಮೂಲಕ ಬ್ಯಾಂಕ್‌ ಸೇವೆಯು ಗ್ರಾಹಕನ ಮನೆ ಬಾಗಿಲಿಗೆ ಬಂದು ಸೇರಲಿದೆ.

   ಐಪಿಪಿಬಿ ಯೋಜನೆಯ ಪ್ರಮುಖ ಅಂಶಗಳು ಇಲ್ಲಿವೆ ನೋಡಿ...

   1.50 ಲಕ್ಷ ಪೋಸ್ಟ್‌ ಆಫೀಸ್‌ಗಳಿಂದ ಬ್ಯಾಂಕಿಂಗ್ ಸೇವೆ

   1.50 ಲಕ್ಷ ಪೋಸ್ಟ್‌ ಆಫೀಸ್‌ಗಳಿಂದ ಬ್ಯಾಂಕಿಂಗ್ ಸೇವೆ

   ದೇಶದ 1.5 ಲಕ್ಷ ಪೋಸ್ಟ್‌ ಆಫೀಸ್‌ಗಳು ಐಪಿಪಿಬಿ ಬ್ಯಾಂಕಿಂಗ್ ಸೇವೆಯನ್ನು ಕೊಡಲಿವೆ. ಎಲ್ಲಾ ಅಂಚೆ ಕಚೇರಿಗಳನ್ನು ಒಂದು ಸಂಪರ್ಕಕ್ಕೆ ತರಲಾಗುತ್ತದೆ. 3 ಲಕ್ಷ ಅಂಚೆಯವರು ಮತ್ತು ಗ್ರಾಮೀಣ ಡಾಕ್ ಸೇವಕ್‌ಗಳು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಬ್ಯಾಂಕಿಂಗ್ ಸೇವೆಯನ್ನು ಮನೆಗೆ ತಲುಪಿಸಲಿದ್ದಾರೆ.

   ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರಿಕೆಯಿಂದಿರಿ: ಮೋದಿ

   ಮನೆಯಲ್ಲೇ ಕುಳಿತು ಠೇವಣಿ ಕಟ್ಟಿ

   ಮನೆಯಲ್ಲೇ ಕುಳಿತು ಠೇವಣಿ ಕಟ್ಟಿ

   ಮನೆ ಬಾಗಿಲಿಗೆ ಬರುವ ಅಂಚೆ ಅಣ್ಣಂದಿರ ಕೈಗೆ ಠೇವಣಿ ಹಣ ಕಟ್ಟಿ ರಶೀದಿ ಪಡೆಯಬಹುದಾಗಿದೆ. ಪೋಸ್ಟ್‌ಮನ್‌ಗಳು ತರುವ ಡಿಜಿಟಲ್ ಪ್ಯಾಡ್‌ನಲ್ಲಿ ನಿಮ್ಮ ಬೆರಳಚ್ಚು ಒತ್ತಿ ಹಣವನ್ನು ಡ್ರಾ ಸಹ ಮಾಡಬಹುದು. ಬೇರೆಯವರಿಗೆ ಹಣ ಕಳುಹಿಸಲು ಕೂಡಾ ಇದೇ ಮಾದರಿ ಅನುಸರಿಸಬೇಕು. ಮನೆ ಬಾಗಿಲಿಗೆ ಬರುವ ಅಂಚೆ ಅಣ್ಣನೇ ನಿಮ್ಮ ಬ್ಯಾಂಕ್‌ ಆಗಲಿದ್ದಾನೆ ಐಪಿಪಿಬಿಯಿಂದ.

   ಅಪನಗದೀಕರಣವನ್ನು ಅನಾಹುತ ಎಂದು ಕರೆದು ಅಂಕಿ-ಅಂಶ ತೆರೆದಿಟ್ಟ ಚಿದಂಬರಂ

   ಆರ್‌ಬಿಐ ನಿಯಮಗಳಿಗೆ ಬದ್ಧ

   ಆರ್‌ಬಿಐ ನಿಯಮಗಳಿಗೆ ಬದ್ಧ

   ಐಪಿಪಿಬಿಯು ಭಾರತೀಯ ಅಂಚೆ ಇಲಾಖೆ ಮತ್ತು ಪ್ರಸಾರ ಮತ್ತು ಸಂವಹನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಮತ್ತು ಐಪಿಪಿಬಿಯು ಆರ್‌ಬಿಐ ನಿಯಮಗಳ ಅನ್ವಯ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಶೇ 100 ಸರ್ಕಾರಿ ಸ್ವಾಮ್ಯದ ಶೇರುಗಳೇ ಇದೆ. ಯಾವುದೇ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಯು ಶೇರುದಾರರಾಗಿಲ್ಲ.

   ಒಂದು ಲಕ್ಷ ಠೇವಣಿ ಸ್ವೀಕಾರ

   ಒಂದು ಲಕ್ಷ ಠೇವಣಿ ಸ್ವೀಕಾರ

   ಈ ಫೊಸ್ಟ್‌ ಪೇಮೆಂಟ್‌ ಬ್ಯಾಂಕ್‌ಗಳು ಒಂದು ಲಕ್ಷದ ವರೆಗೆ ಠೇವಣಿಯನ್ನು ಸ್ವೀಕರಿಸುತ್ತವೆ. ಉಳಿತಾಯ ಖಾತೆಗೆ 4% ಬಡ್ಡಿಯನ್ನು ಈ ಐಪಿಪಿಬಿ ಬ್ಯಾಂಕ್ ನೀಡುತ್ತಿದೆ. ಸಾಲಗಳನ್ನೂ ಸಹ ನೀಡುತ್ತದೆ. ಆದರೆ ಸಾಲವನ್ನು ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ನ ಸಹಕಾರದೊಂದಿಗೆ ನೀಡುತ್ತದೆ.

   ಹಲವು ಬ್ಯಾಂಕಿಂಗ್ ಸೌಲಭ್ಯ ಲಭ್ಯ

   ಹಲವು ಬ್ಯಾಂಕಿಂಗ್ ಸೌಲಭ್ಯ ಲಭ್ಯ

   ಐಪಿಪಿಬಿಯಲ್ಲಿ ಉಳಿತಾಯ ಖಾತೆ, ಠೇವಣಿ, ಹಣ ವರ್ಗಾವಣೆ, ಚಾಲ್ತಿ ಖಾತೆ, ನೇರ ಲಾಬ ವರ್ಗಾವಣೆ, ಬಿಲ್ ಮತ್ತು ಯುಟಿಲಿಟಿ ಪಾವತಿಗಳು, ಬಿಲ್ ಪಾವತಿ ಮುಂತಾದ ಸೇವೆಗಳು ಲಭ್ಯವಿವೆ. ಐಪಿಪಿಬಿಯು ಎಸ್‌ಎಂಎಸ್‌, ಇ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೌಲಭ್ಯಗಳನ್ನೂ ನೀಡುತ್ತದೆ.

   17 ಕೋಟಿ ಅಂಚೆ ಉಳಿತಾಯ ಖಾತೆ ಇದೆ

   17 ಕೋಟಿ ಅಂಚೆ ಉಳಿತಾಯ ಖಾತೆ ಇದೆ

   ಈಗಾಗಲೇ ಚಾಲ್ತಿಯಲ್ಲಿರುವ 17 ಕೋಟಿ ಅಂಚೆ ಉಳಿತಾಯ ಖಾತೆಗಳನ್ನು ಐಪಿಪಿಬಿ ಲಿಂಕ್ ಮಾಡಿಕೊಳ್ಳಲಿದೆ. ಜೊತೆಗೆ ಹಲವು ಹೊಸ ಖಾತೆಗಳನ್ನು ತೆರೆಯಲಿದೆ. ಮೂರು ಲಕ್ಷ ಅಂಚೆಅಣ್ಣಂದಿರು ಮನೆ ಬಾಗಿಲಿಗೆ ತೆರಳಿ ಬ್ಯಾಂಕಿಂಗ್ ಸೇವೆ ನೀಡಲಿದ್ದಾರೆ.

   English summary
   PM Narendra Modi going to launch IPPB scheme today in New Delhi. It will be the largest banking network in India. it will be 2.5 times bigger that present banking networks. IPPB will provide door step banking to rural and urban area. whats is Inidan postal payment baking.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X