ಬಿಜೆಪಿ ಆಡಳಿತದಲ್ಲಿ ಮಹಿಳಾ ದೌರ್ಜನ್ಯ ಅತಿ ಹೆಚ್ಚು: ರಾಹುಲ್ ಗಾಂಧಿ
ರಾಯಪುರ, ಆಗಸ್ಟ್ 10: 3000 ಸಾವಿರ ವರ್ಷದಲ್ಲಿ ಭಾರತದ ಮಹಿಳೆಯರ ಮೇಲೆ ಆಗದಿದ್ದ ದೌರ್ಜನ್ಯ, ಬಿಜೆಪಿ ಆಡಳಿತದ ಕೇವಲ 4 ವರ್ಷದಲ್ಲಿ ಆಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದರು.
ಚತ್ತೀಸ್‌ಘಡದ ರಾಯಪುರದಲ್ಲಿ ರಾಜೀವ್ ಗಾಂಧಿ ಭವನ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ಬೆಂಕಿ ಉಗುಳಿದರು. ರಫೆಲ್ ಹಗರಣದ ಬಗ್ಗೆಯೂ ಅವರು ಮತ್ತೆ ಪ್ರಶ್ನೆಗಳನ್ನು ಎತ್ತಿದರು.
'ಸಂಸತ್‌ನಲ್ಲಿ ನಾನು ರಫೆಲ್ ಹಗರಣದ ಬಗ್ಗೆ ಮಾತನಾಡುವಾಗ ಮೋದಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಿಲ್ಲ, ನಾನು ಮಾತನಾಡುವಾಗ ಅವರು ಅತ್ತಿತ್ತ ನೋಡುತ್ತಿದ್ದುದನ್ನು ನೀವು ಟಿವಿಯಲ್ಲಿ ನೋಡಿದ್ದೀರಿ, ಅವರಿಗೆ ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುವ ಧೈರ್ಯವಿಲ್ಲ' ಎಂದು ಅವರು ಹೇಳಿದರು.

ದೇಶದ ಜನರಿಗೆ ರಕ್ಷಣಾ ಸಚಿವರು ಸುಳ್ಳು ಹೇಳಿದ್ದಾರೆ, ಇದನ್ನೇ ನಾನು ಪ್ರಶ್ನೆ ಮಾಡುತ್ತಿದ್ದೇನೆ, ತಮ್ಮನ್ನು ತಾವು 'ಚೌಕೀದಾರ್' ಎಂದು ಕರೆದುಕೊಳ್ಳುವ ಮೋದಿ ಹಗರಣದಲ್ಲಿ 'ಭಾಗೀದಾರ'ರಾಗಿದ್ದಾರೆ ಎಂದು ಅವರು ಆರೋಪಿಸಿದರು. ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯದ ದಿನ ಎತ್ತಿದ್ದ ಪ್ರಶ್ನೆಗಳನ್ನೇ ರಾಹುಲ್ ಅವರು ಇಂದು ಕೂಡ ಎತ್ತಿದರು.
ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಪ್ ಹೆಸರು ಪನಾಮಾ ಪೇಪರ್ಸ್ ಹಗರಣದಲ್ಲಿ ಕೇಳಿ ಬಂದಿತು ಕೂಡಲೇ ಅವರನ್ನು ಆರೋಪಿಯನ್ನಾಗಿ ಮಾಡಲಾಯಿತು. ಇಲ್ಲಿನ ಬಿಜೆಪಿ ಮುಖ್ಯಮಂತ್ರಿಯ ಮಗನ ಹೆಸರು ಪನಾಮಾ ಪೇಪರ್ಸ್‌ನಲ್ಲಿ ಕೇಳಿ ಬಂತು ಆದರೆ ಇಲ್ಲಿ ತನಿಖೆ ಸಹ ಪ್ರಾರಂಭವಾಗಲಿಲ್ಲ ಎಂದು ಹೇಳಿದರು.












Click it and Unblock the Notifications