Digital arrest: ಸೈಬರ್ ಪೊಲೀಸರಿಗೇ "ಯುವರ್ ಡಿಜಿಟಲ್ ಅರೆಸ್ಟ್" ಅಂತ ಕಾಲ್ ಮಾಡಿದ, ವೈರಲ್ ವಿಡಿಯೋ ನೋಡಿ!
ಡಿಜಿಟಲ್ ಅರೆಸ್ಟ್ ಎನ್ನುವುದು ದೇಶದಲ್ಲಿ ನಡೆಯುತ್ತಿರುವ ಹೊಸ ಸ್ಕ್ಯಾಮ್. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಈಚೆಗೆ ಜಾಗೃತಿ ಮೂಡಿಸಿದ್ದಾರೆ. ಆದರೆ, ಇಷ್ಟಾದರೂ ದೇಶದಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚನೆ ಮಾಡುವುದು ತಪ್ಪುತ್ತಿಲ್ಲ. ಇದೀಗ ಇಲ್ಲೊಬ್ಬ ಸೈಬರ್ ಖದೀಮ ಸೈಬರ್ ಪೊಲೀಸರಿಗೇ ಕರೆ ಮಾಡಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗುತ್ತಿದ್ದಾನೆ ಎಂದಿದ್ದಾನೆ. ಇದಕ್ಕೆ ಸೈಬರ್ ಪೊಲೀಸರು ಸಹ ಮಜವಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೈಬರ್ ಅರೆಸ್ಟ್ ಅಂತ ಹೇಳುವುದು. ಈ ಹೆಸರಲ್ಲಿ ಲಕ್ಷಾಂತರ ರೂಪಾಯಿ ಮೋಸ ಮಾಡಿರುವುದು ಹಾಗೂ ಖಾಸಗಿತನವನ್ನು ವಿಡಿಯೋ ಮಾಡಿಕೊಂಡು ಬ್ಲಾಕ್‌ಮೇಲ್ ಮಾಡುವುದೆಲ್ಲ ಹಳೆಯ ಕೇಸ್ ಆಯ್ತು. ಇದೀಗ ಇಲ್ಲೊಬ್ಬ ಸೈಬರ್ ಖದೀಮ ಸೈಬರ್ ಪೊಲೀಸರಿಗೇ ಕಾಲ್ ಮಾಡಿ, ನಿಮ್ಮನ್ನು ಸೈಬರ್ ಅರೆಸ್ಟ್ ಮಾಡ್ತಾ ಇದ್ದೀವಿ. ಯುವರ್ ಅಂಡರ್ ಅರೆಸ್ಟ್ ಅಂತ ಡೈಲಾಗ್ ಬಿಟ್ಟಿದ್ದಾನೆ. ಇದನ್ನು ಕೇಳಿದ ಪೊಲೀಸರು ಆತಂಕಕ್ಕೆ ಒಳಗಾಗುವಂತೆ ಮೊದಲು ಮಜಾ ತೆಗೆದುಕೊಂಡು ಆ ಮೇಲೆ ವಿಡಿಯೋ ಆನ್ ಮಾಡಿದ್ದಾರೆ.

ಸೈಬರ್ ಪೊಲೀಸರಿಗೆ ಕರೆ ಮಾಡಿ ನಿಮ್ಮನ್ನು ಬಂಧಿಸಲಾಗಿದೆ. ಪೋನ್ ಕ್ಯಾಮೆರಾ ಆನ್ ಮಾಡಿ ಎಂದು ಸೈಬರ್ ಕಳ್ಳ ಹೇಳಿದ್ದಾನೆ. ಆದರೆ, ಸೈಬರ್ ಪೊಲೀಸರು ನನ್ನ ಕ್ಯಾಮೆರಾ ಸ್ವಲ್ಪ ವರ್ಕ್ ಆಗ್ತಿಲ್ಲ ಎಂದಿದ್ದಾರೆ. ಅದಕ್ಕೆ ಸೈಬರ್ ಕಳ್ಳ ಇಲ್ಲ ನೀವು ಕ್ಯಾಮೆರಾ ಆನ್ ಮಾಡಲೇಬೇಕು ಎಂದಿದ್ದಾರೆ. ಆಗ ಸೈಬರ್ ಪೊಲೀಸರು ದಯವಿಟ್ಟು ಇರಿ ಅಂತ ಎರಡು ನಿಮಿಷ ತೆಗೆದುಕೊಂಡು ಸೈಬರ್ ಕಳ್ಳನ ಜಾತಕ ಕಲೆಕ್ಟ್ ಮಾಡಿಕೊಂಡಿದ್ದಾರೆ. ಆ ಮೇಲೆ ಕ್ಯಾಮೆರಾ ಆನ್ ಮಾಡಿ ಹೇಳಪ್ಪಾ ಈಗ ವಾಟ್‌ಯು ಡೂ (ನೀನು ಎನ್ ಮಾಡ್ತೀಯಾ) ಅಂತ ಕೇಳಿದ್ದಾರೆ.
ಸೈಬರ್ ಪೊಲೀಸರು ಕ್ಯಾಮೆರಾ ಆನ್ ಮಾಡ್ತಿದ್ದಂತೆಯೇ ಸೈಬರ್ ಕಳ್ಳನಿಗೆ ಬೆವರು ಇಳಿದಿದೆ. ನಿಜವಾದ ಯೂನಿಫಾರ್ಮ್‌ನಲ್ಲಿದ್ದ ಪೊಲೀಸರನ್ನು ನೋಡಿ ಬಾಯಿ ಒಣಗಿದಂತೆ ಆಗಿದೆ. ಆಗ ಸೈಬರ್ ಪೊಲೀಸು ಏ ಚೋಡ್ದೋ ಬಾಯ್ (ಇದನ್ನು ಬಿಟ್ಟು ಬಿಡು) ಅಂತ ಹೇಳಿದ್ದಾರೆ. ವಿಡಿಯೋ ತೋರಿಸಿ, ನೋಡಿಲ್ಲಿ. ನೀನು ಎಲ್ಲಿಂದ ಕಾಲ್ ಮಾಡ್ತಿದ್ದೀಯಾ, ನಿನ್ನ ಹೆಸರು ಏನು ಎನ್ನುವ ಸಂಪೂರ್ಣ ಜಾತಕ ನಮ್ಮ ಬಳಿ ಇದೆ ಎಂದಿದ್ದಾರೆ.
ಈ ಕೆಲಸ ಬಿಟ್ ಬಿಡು ಇದು ನಿಂಗೆ ಒಳ್ಳೆಯದಲ್ಲ ಅಂತ ನಗುತ್ತಲ್ಲೇ ಹೇಳಿದ್ದಾರೆ. ಅರ್ಥ ಆಯ್ತ ನಿನ್ನ, ಲೊಕೇಶನ್ ಹಾಗೂ ಮಾಹಿತಿ ಎಲ್ಲಾ ಇಲ್ಲೇ ಇದೆ. ಇದು ಸೈಬರ್ ಸೆಲ್ ಕಣೋ ಅಂದಿದ್ದಾರೆ. ಕೇರಳದಲ್ಲಿ ಈ ಘಟನೆ ನಡೆದಿದ್ದು, ಕೇರಳ ಸೈಬರ್ ಪೊಲೀಸರು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದೆ.
ಟ್ರೋಲ್ ವಿಡಿಯೋ: ಈ ವಿಡಿಯೋವನ್ನು ಕೇರಳದ ಸೈಬರ್ ಪೊಲೀಸರೇ ಟ್ರೋಲ್ ಮಾದರಿಯ ವಿಡಿಯೋವನ್ನಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೇರಳದ ತ್ರಿಶೂರ್ ಸೈಬರ್ ಸೆಲ್‌ನಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಹಾಸ್ಯಪ್ರಜ್ಞೆ ಹಾಗೂ ವ್ಯಂಗ್ಯ ಹಾಗೂ ಖಡಕ್ ಎಚ್ಚರಿಕೆಗೆ ಜನ ಫಿದಾ ಆಗಿದ್ದಾರೆ.












Click it and Unblock the Notifications