1 ಕೋಟಿ ದಾನ ಮಾಡಿ ಮೆಗಾಸ್ಟಾರ್‌ ಚಿರಂಜೀವಿ ಹೇಳಿದ್ದೇನು ?

ಮೆಗಾ ಸ್ಟಾರ್‌ ಚಿರಂಜೀವಿ ಅವರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೆಗಾಸ್ಟಾರ್‌ ಚಿರಂಜೀವಿಗೆ ತೆಲುಗುರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಮಾತ್ರವಲ್ಲದೇ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಅಭಿಮಾನಿಗಳು ಇದ್ದಾರೆ. ಇದೀಗ ಚಿರಂಜೀವಿ ಅವರು ಮಾಡಿರುವ ಈ ಕಾರ್ಯಕ್ಕೆ ಅವರ ಅಭಿಮಾನಿಗಳು ಹಾಗೂ ಸಾರ್ವಜನಿಕ ವಲಯದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ತೆಲುಗು ಫಿಲ್ಮ್‌ ಇಂಡಸ್ಟ್ರೀಯಲ್ಲಿ ನಟ ಹಾಗೂ ಮೆಗಾಸ್ಟಾರ್‌ ಚಿರಂಜೀವಿ ಅವರು ಇಂದಿಗೂ ಸೂಪರ್‌ ಸ್ಟಾರ್‌. ಬಹುಬೇಡಿಕೆಯ ನಟ ಸಹ ಹೌದು. ಕೆಲವು ವರ್ಷಗಳ ಹಿಂದೆ ರಾಜಕೀಯಕ್ಕೆ ಧುಮುಕಿದ್ದ ಅವರು ಅಲ್ಲಿ ನಿರೀಕ್ಷೆಯಂತೆ ಸಕ್ಸಸ್‌ ಆಗಲಿಲ್ಲ. ಸಿನಿಮಾದಂತೆ ರಾಜಕೀಯ ಜರ್ನಿ ಇರಲಿಲ್ಲ. ಈ ಕಾರಣಕ್ಕಾಗಿ ಅವರು ರಾಜಕೀಯದಿಂದ ಹಿಂದೆ ಸರಿದಿದ್ದರು. ಇದೀಗ ಸಿನಿಮಾಗಳಲ್ಲಿ ಸಂಪೂರ್ಣವಾಗಿ ತೊಡಗಿದ್ದು. ಸಮಾಜ ಸೇವೆ ಹಾಗೂ ಅಗತ್ಯವಿರುವವರಿಗೆ ದಾನ ಮಾಡುತ್ತಿದ್ದಾರೆ.

What did Megastar Chiranjeevi say after donating 1 crore

ಇದೀಗ ನಟ ಚಿರಂಜೀವಿ ಅವರು ಬರೋಬ್ಬರಿ 1 ಕೋಟಿ ರೂಪಾಯಿ ದಾನ ನೀಡುವ ಮೂಲಕ ಸುದ್ದಿಯಲ್ಲಿ ಇದ್ದಾರೆ. ಚಿರಂಜೀವಿ ಅವರು ಬಡವರು ಹಾಗೂ ಹಣಕಾಸಿನ ಅಗತ್ಯ ಇರುವವರಿಗೆ ದಾನ ಮಾಡುವ ಮೂಲಕ ಸದಾ ಸುದ್ದಿಯಲ್ಲಿ ಇರುತ್ತಾರೆ. ಕೋವಿಡ್‌ ಸಂದರ್ಭದಲ್ಲೂ ಇವರು ಜನರ ನೆರವಿಗೆ ಧಾವಿಸಿದ್ದರು. ಕೋವಿಡ್‌ನಿಂದ ತೆಲುಗು ಭಾಷೆಯ ಎರಡು ರಾಜ್ಯಗಳಲ್ಲಿ ಸಂಕಷ್ಟ ಎದುರಾದಾಗಾ ಸರ್ಕಾರದೊಂದಿಗೆ ಕೈಜೋಡಿಸಿದ್ದರು. ಆಕ್ಸಿಜನ್‌ ಪೂರೈಕೆ ಸೇರಿದಂತೆ ಹಲವು ಸೇವೆಗಳನ್ನು ನೀಡಿದ್ದರು. ಇದೀಗ ಆಂಧ್ರ ಪ್ರದೇಶ ಸರ್ಕಾರಕ್ಕೆ ಚಿರಂಜೀವಿ ಅವರು ಒಂದು ಕೋಟಿ ಕೊಟ್ಟಿದ್ದಾರೆ.

1 ಕೋಟಿ ಚೆಕ್‌ ಹಸ್ತಾಂತರಿಸಿದ ಚಿರಂಜೀವಿ: ಮೆಗಾ ಸ್ಟಾರ್‌ ಚಿರಂಜೀವಿ ಅವರು 1 ಕೋಟಿ ರೂಪಾಯಿ ಮೊತ್ತದ ಚೆಕ್‌ ಅನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಹಸ್ತಾಂತರಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಈಚೆಗೆ ಭಾರೀ ಮಳೆಯಾಗಿತ್ತು. ಧಾರಾಕಾರ ಮಳೆಯಿಂದ ಆಂಧ್ರಪ್ರದೇಶದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂತ್ರಸ್ತರ ಪರಿಹಾರಕ್ಕಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಪರಿಹಾರ ನಿಧಿಗೆ ಈ ಹಣ ನೀಡಿದ್ದಾರೆ. ಭಾನುವಾರ (ಅಕ್ಟೋಬರ್‌ 13)ದಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ಚಿರಂಜೀವಿ 1 ಕೋಟಿ ಮೊತ್ತದ ಚೆಕ್‌ ಹಸ್ತಾಂತರ ಮಾಡಿದ್ದಾರೆ. ಇದರಲ್ಲಿ ತಲಾ 50 ಲಕ್ಷ ರೂಪಾಯಿಗಳ ಎರಡು ಚೆಕ್‌ ನೀಡಲಾಗಿದ್ದು, ಒಂದನ್ನು ಮೆಗಾಸ್ಟಾರ್‌ ಚಿರಂಜೀವಿ ನೀಡಿದರೆ ಮತ್ತೊಂದನ್ನು ತೆಲುಗು ನಟ ಹಾಗೂ ಚಿರಂಜೀವಿ ಅವರ ಮಗ ರಾಮ್‌ಚರಣ್‌ ನೀಡಿದ್ದಾರೆ.

What did Megastar Chiranjeevi say after donating 1 crore

ಚಂದ್ರಬಾಬು ನಾಯ್ಡು ಟ್ವೀಟ್‌: ಆಂಧ್ರಪ್ರದೇಶದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಚಿರಂಜೀವಿ ಹಾಗೂ ರಾಮ್‌ಚರಣ್‌ ದೇಣಿಗೆ ನೀಡಿರುವುದಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಧನ್ಯವಾದ ಹೇಳಿದ್ದಾರೆ. ಮುಖ್ಯಂತ್ರಿಗಳ ಪರಿಹಾರ ನಿಧಿಗೆ ಚಿರಂಜೀವಿ ಹಾಗ ರಾಮ್‌ಚರಣ್‌ ಅವರು ಉದಾರ ದೇಣಿಗೆ ನೀಡಿದ್ದೀರಿ. ಅವರ ನೀಡಿದ ದೇಣಿಗೆಯು ಪ್ರವಾಹದಿಂದ ಸಂತ್ರಸ್ತರಾಗಿರುವ ಜನರಿಗೆ ಪುನರ್‌ವಸತಿ ಕಲ್ಪಿಸಲು ಸಹಾಯವಾಗಲಿದೆ ಎಂದು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ.

ಚಿರಂಜೀವಿ ಟ್ವೀಟ್‌: ಇನ್ನು ಚಂದ್ರಬಾಬು ನಾಯ್ಡು ಅವರ ಟ್ವೀಟ್‌ಗೆ ವಿನಯದಿಂದಲೇ ಚಿರಂಜೀವಿ ಅವರು ಧನ್ಯವಾದ ತಿಳಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರೇ ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯವಾದ.

ಸಂಕಷ್ಟದ ಸಮಯದಲ್ಲಿ ನಮ್ಮವರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ. ನಿಮ್ಮ ಮುಂದಾಳತ್ವ ಹಾಗೂ ಪರಿಹಾರ ಕಾರ್ಯಗಳು ಅನುಕರಣೀಯವಾಗಿವೆ ಎಂದು ಚಂದ್ರಬಾಬು ನಾಯ್ಡು ಅವರನ್ನು ಹೊಗಳಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+