58 ವರ್ಷದ ಥಾಣೆ 'ಯುವಕ'ನಿಗೆ 20ರ ಕನ್ಯೆ!
ಮುಂಬೈ, ಜ. 2: ಎರಡು ವರ್ಷದಿಂದ ಮಗನಿಗೆ ಮದುವೆ ಮಾಡೋಣ ಅಂಥ ಕನ್ಯೆ ಹುಡುಕುತ್ತಿದ್ದೇನೆ, ಆದರೆ ಹುಡುಗಿ ಸಿಗುತ್ತಿಲ್ಲ, ಸಿಕ್ಕರೂ ಒಂದಿಲ್ಲೊಂದು ಸಮಸ್ಯೆ... ಈ ರೀತಿಯ ಮಾತುಗಳು ನಮ್ಮ ಕಿವಿಗೆ ಬೀಳುತ್ತಲೇ ಇರುತ್ತವೆ. ಇದಕ್ಕೆ ಬಸ್ ನಿಲ್ದಾಣ, ಹಳ್ಳಿ ಕಟ್ಟೆ, ಟ್ರಾಫಿಕ್ ಸಿಗ್ನಲ್ ಎಂಬ ಹಂಗಿಲ್ಲ.
ಹಿಂದೊಮ್ಮೆ ಕನ್ಯಾಪಿತೃಗಳ ಗೋಳು ಹೇಳತೀರದ್ದಾಗಿತ್ತು. ಆದರೆ ಇಂದು ಪರಿಸ್ಥಿತಿಯಲ್ಲಿ ಗಂಭೀರ ಎನ್ನಿಸುವಂಥ ಬದಲಾವಣೆಯಾಗಿದೆ. ಗಂಡು ಮಕ್ಕಳ ಪಾಲಕರು ಕನ್ಯೆಗಾಗಿ ಅಲೆದಾಡಬೇಕಿದೆ.[ಮದುವೆ ಮಂಟಪದಿಂದ ಸಾಫ್ಟ್ ವೇರ್ ವರ ಎಸ್ಕೇಪ್!]

ಅಷ್ಟಕ್ಕೂ ಇಷ್ಟೇಲ್ಲಾ ಪೀಠಿಕೆ ಯಾಕಪ್ಪಾ ಅಂದ್ರೆ ಮಹಾರಾಷ್ಟ್ರದ ಥಾಣೆಯ 58 ವರ್ಷದ 'ಯುವಕ'ನೊಬ್ಬ 20 ವರ್ಷದ ಯುವತಿಯನ್ನು ಮದುವೆಯಾಗಿದ್ದಾನೆ. ಅಲ್ಲದೇ ಸೆಲ್ಫೀ ಕೂಡಾ ಕ್ಲಿಕ್ಕಿಸಿಕೊಂಡಿದ್ದಾನೆ. ಹುಡುಗಿ ಸಿಗಲ್ಲ? ಎಂಬ ಪ್ರಶ್ನೆಗೆ ಈ ಮಹಾಪುರುಷ ತಕ್ಕ ಉತ್ತರವನ್ನೇ ನೀಡಿದ್ದಾನೆ. 20ರ ಚೆಲುವೆ ಲೀಸಾಳನ್ನು ಮದುವೆಯಾದ 58ರ ಚೆಲುವ ಸತೀಶ್ ಆಪ್ಟೆ ಸಂತಸಕ್ಕೆ ಪಾರವೇ ಇಲ್ಲ ಬಿಡಿ.[ಆನ್ ಲೈನ್ ನಕಲಿ ವರರಿಗೆ ಮನೇಕಾ ಗಾಂಧಿ ಬರೆ]
'ಹುಡುಗ' ಮತ್ತು ಹುಡುಗಿ ನಡುವೆ ಬರೋಬ್ಬರಿ 38 ವರ್ಷಗಳ ಅಂತರ. ಇದೇನು ಮಹಾ ಅಂದುಕೊಂಡರೂ ಪರವಾಗಿಲ್ಲ. ಮದುವೆ ಮಾಡಿಕೊಳ್ಳುವುದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿಕೊಳ್ಳೋದು ಸಾಮಾನ್ಯ. ಆದರೆ ಸತೀಶ್ ದಂಪತಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಸಂಚಾರ ಬೆಳೆಸುತ್ತಿದೆ. ಹೊಸ ವರ್ಷದಂದೇ ಹೊಸ ಬಾಳಿಗೆ ಕಾಲಿಟ್ಟ ಸತೀಶ್ ಮತ್ತು ಲೀಸಾ ದಂಪತಿಗೆ ಎಲ್ಲರೂ ಮದುವೆಯ ಶುಭಾಶಯ ಕೋರುತ್ತಿದ್ದಾರೆ.












Click it and Unblock the Notifications