ಭವಿಷ್ಯದಲ್ಲಿ ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳಲಿದೆ ಕೊರೊನಾ; ತಜ್ಞರ ಎಚ್ಚರಿಕೆ

ನವದೆಹಲಿ, ಜುಲೈ 10: ಕೊರೊನಾ ಸೋಂಕು ಪತ್ತೆಯಾದ ಒಂದು ವರ್ಷದ ನಂತರ ಸೋಂಕಿನ ರೂಪಾಂತರಗಳು ಸೃಷ್ಟಿಯಾಗುತ್ತಿವೆ. ಹಲವು ಅವತಾರಗಳಲ್ಲಿ ಮತ್ತೆ ಮತ್ತೆ ಸೋಂಕು ಮುನ್ನೆಲೆಗೆ ಬರುತ್ತಿದೆ.

ಡೆಲ್ಟಾ, ಆಲ್ಫಾ, ಕಪ್ಪಾ, ಡೆಲ್ಟಾ ಪ್ಲಸ್, ಲ್ಯಾಂಬ್ಡಾ... ಹೀಗೆ ಭಿನ್ನ ಭಿನ್ನ ರೂಪಾಂತರಗಳು ಒಂದರ ನಂತರ ಒಂದರಂತೆ ಸೃಷ್ಟಿಯಾಗುತ್ತಿವೆ. ಭವಿಷ್ಯದಲ್ಲಿ ಇನ್ನಷ್ಟು ರೂಪಾಂತರಗಳು ಜನ್ಮತಳೆಯುವ ಸಾಧ್ಯತೆ ಇದೆ ಎಂದು ಈಗಾಗಲೇ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ನವದೆಹಲಿಯ ಸೇಂಟ್ ಸ್ಟೀಫನ್ ಆಸ್ಪತ್ರೆಯ ಮಾಜಿ ನಿರ್ದೇಶಕ ಹಾಗೂ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಮ್ಯಾಥ್ಯೂ ವರ್ಗೀಸ್ ಮಾಹಿತಿ ನೀಡಿದ್ದಾರೆ. ಕೊರೊನಾ ಸೋಂಕಿನ ರೂಪಾಂತರಗಳ ಕುರಿತು ವಿವರಣೆ ನೀಡಿದ್ದಾರೆ. ಮುಂಜಾಗ್ರತಾ ಕ್ರಮಗಳ ಕುರಿತು ಮಾತನಾಡಿದ್ದಾರೆ. ಮುಂದೆ ಓದಿ...

ರೂಪಾಂತರ ಸಹಜ ಪ್ರಕ್ರಿಯೆ

ರೂಪಾಂತರ ಸಹಜ ಪ್ರಕ್ರಿಯೆ

"ಭವಿಷ್ಯದಲ್ಲಿ ಕೊರೊನಾ ಸೋಂಕಿನ ಇನ್ನಷ್ಟು ರೂಪಾಂತರಗಳು ಸೃಷ್ಟಿಯಾಗಬಹುದು. ರೂಪಾಂತರ ಎಂಬುದು ಸೋಂಕಿನ ಸಹಜ ಪ್ರಕ್ರಿಯೆ. ಹೀಗಾಗಿ ರೂಪಾಂತರವನ್ನು ತಡೆಯಲು ಸಾಧ್ಯವಿಲ್ಲ" ಎಂದು ಮ್ಯಾಥ್ಯೂ ಹೇಳಿದ್ದಾರೆ. ರೂಪಾಂತರಗಳ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದು, "ರೂಪಾಂತರಗಳ ಸ್ವರೂಪ ಬೇರೆ ಬೇರೆಯಾಗಿರಬಹುದು. ಅವು ಇನ್ನಷ್ಟು ಪ್ರಬಲವಾಗಿರಬಹುದು. ಹೀಗಾಗಿ ಜಾಗರೂಕತೆಯಿಂದ ಇರುವುದು ಅವಶ್ಯಕ" ಎಂದಿದ್ದಾರೆ.

"ಸೋಂಕು ಇರುವವರೆಗೂ ರೂಪಾಂತರ ತಪ್ಪಿದ್ದಲ್ಲ"

"ಎಲ್ಲಿಯವರೆಗೆ ಸೋಂಕಿನ ಸಂಖ್ಯೆ ಹೆಚ್ಚುತ್ತಿರುತ್ತದೋ, ಎಲ್ಲಿಯವರೆಗೆ ಸೋಂಕಿನ ಉಪಸ್ಥಿತಿಯಿರುತ್ತದೋ ಅಲ್ಲಿಯವರೆಗೂ ರೂಪಾಂತರವೂ ಸಹಜವೇ ಆಗಿರುತ್ತದೆ. ಇದಕ್ಕೆಲ್ಲ ನಾವು ಸಿದ್ಧರಾಗಿರಬೇಕಿದೆ. ಕೊರೊನಾ ಸೋಂಕಿನ ನಿಯಂತ್ರಣದ ಹೊರತು ಬೇರೆ ಆಯ್ಕೆಯೇ ಇಲ್ಲ. ಜೊತೆಗೆ ಕೊರೊನಾ ಲಸಿಕೆ ಪ್ರಮಾಣದ ಕುರಿತು ಗಮನ ಹರಿಸಲೇಬೇಕಿದೆ" ಎಂದು ಹೇಳಿದ್ದಾರೆ.

"ಈಗಷ್ಟೇ ದೇಶ ಚೇತರಿಸಿಕೊಳ್ಳುತ್ತಿದೆ"

"ಅಮೆರಿಕ ಹಾಗೂ ಲಂಡನ್‌ಗೆ ಹೋಲಿಸಿದರೆ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ನೀಡಲಾಗಿಲ್ಲ. ಅಮೆರಿಕದಲ್ಲಿ ಈಗಾಗಲೇ ಜನಸಂಖ್ಯೆಯ ಅರ್ಧದಷ್ಟು ಪ್ರಮಾಣಕ್ಕೆ ಕೊರೊನಾ ಲಸಿಕೆ ನೀಡಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಳ್ಳಿ. ಕೊರೊನಾ ಎರಡನೇ ಅಲೆಯ ಪ್ರಭಾವ ನಮ್ಮ ಕಣ್ಣಮುಂದೆಯೇ ಇದೆ. ಈಗಷ್ಟೇ ದೇಶ ಎರಡನೇ ಅಲೆಯಿಂದ ಚೇತರಿಸಿಕೊಳ್ಳುತ್ತಿದೆ. ಇಂಥ ಹೊತ್ತಿನಲ್ಲಿ ಎಲ್ಲರೂ ಜಾಗೃತರಾಗಿರಬೇಕಿದೆ. ಲಸಿಕಾ ಕಾರ್ಯಕ್ರಮವನ್ನು ಶೀಘ್ರದಲ್ಲಿ ನಡೆಸಬೇಕಿದೆ" ಎಂದು ಮನವಿ ಮಾಡಿದ್ದಾರೆ.

"ಬೇಕಾಬಿಟ್ಟಿ ಓಡಾಡಬೇಡಿ"

"ಕೊರೊನಾ ನಿಯಮಗಳನ್ನು ಸಡಿಲಗೊಳಿಸಿದ್ದರಿಂದ ಬೇಕಾಬಿಟ್ಟಿ ಓಡಾಡುವುದನ್ನು ತಪ್ಪಿಸಿ. ಜನಜಂಗುಳಿ ಇರುವ ಕಡೆ ನಾವು ಜಾಗರೂಕತೆಯಿಂದ ಇರಬೇಕಿದೆ. ಕೊರೊನಾ ನಿಯಮಗಳನ್ನು ಪಾಲಿಸಲೇಬೇಕು. ಮಾಸ್ಕ್‌ ಅನ್ನು ಪದೇ ಪದೇ ಮುಟ್ಟಿಕೊಳ್ಳಬೇಡಿ. ಸ್ಯಾನಿಟೈಸ್ ಮಾಡಿಕೊಳ್ಳಿ. ಸಾಮಾಜಿಕ ಅಂತರ ನಿಯಮ ಮರೆಯಬೇಡಿ" ಎಂದು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+