ಮಾಡಬಾರದ್ದನ್ನ ಮಾಡಿದ್ರೆ ಆಗಬಾರದ್ದೇ ಆಗೋದು ಅನ್ನೋದಿಕ್ಕೆ ಈ ವಿಡಿಯೋನೇ ಸಾಕ್ಷಿ
Video Viral: ಮಾಡ್ಬರದ್ದನ್ನ ಮಾಡಿದ್ರೆ, ಆಗ್ಬಾರದ್ದೇ ಆಗೋದು ಎನ್ನುವ ಮಾತಿದೆ. ಹಾಗೆಯೇ ಇಲ್ಲೊಬ್ಬ ಯುವಕ ಚಲಿಸುವ ರೈಲಿನ ಮೇಲೆ ಏರಿ ಹುಚ್ಚಾಟ ಮೆರೆದು ಇದೀಗ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಹಾಗಾದ್ರೆ ಈ ಘಟನೆ ನಡೆದಿದ್ದು ಎಲ್ಲಿ ರೈಲ್ವೆ ಪೊಲೀಸರು ತೆಗೆದುಕೊಂಡ ಕ್ರಮ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರೈಲಿನ ಮೇಲೆ ಯುವಕನ ಹುಚ್ಚಾಟ: ಯುವಕ ಚಲಿಸುವ ರೈಲಿ ಮೇಲೆ ಹುಚ್ಚಾಟ ಮೆರೆದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಗರು ಯುವಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಾಮಾನ್ಯವಾಗಿ ಸೆಲ್ಫೀ, ಫೋಟೋ, ರೀಲ್ಸ್ ಗೀಳಿಗಾಗಿ ಇಂತಹ ದುಸ್ಸಾಹಸಗಳಿಗೆ ಕೈಹಾಕಿದ ಘಟನೆಗಳು ಈ ಹಿಂದೆಯೂ ನಡೆದಿವೆ.

ಹಾಗೆಯೇ ಈ ಯುವಕ ದುಸ್ಸಾಹಸ ಮಾಡಲು ಚಲಿಸುತ್ತಿದ್ದ ರೈಲಿನ ಮೇಲೆ ಏರಿದ್ದಾನೆ. ಈ ವೇಳೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಆದರೆ, ರೈಲ್ವೆ ಪೊಲೀಸರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಉತ್ತರ ಪ್ರದೇಶದ ಪ್ರತಾಪ್‌ಗಢದ "ಮಾ ಬೆಲ್ಹಾ ದೇವಿ ಧಾಮ್' ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಈ ಯುವಕ ಸಾಹಸದ ಮಾಡಲು ಮಾ ಬೇಲ್ಹಾ ದೇವಿ ಧಾಮ್ ರೈಲು ನಿಲ್ದಾಣದ ಮೂಲಕ ನಿಧಾನವಾಗಿ ಚಲಿಸುತ್ತಿದ್ದ ಕಾಶಿ ವಿಶ್ವನಾಥ ಎಕ್ಸ್‌ಪ್ರೆಸ್ ರೈಲಿನ ಮೇಲೆ ಹತ್ತಿದ್ದಾನೆ. ತಕ್ಷಣವೇ ರೈಲು ನಿಲ್ದಾಣದ ಸಿಬ್ಬಂದಿ ಹಾಗೂ ಅಲ್ಲಿದ್ದ ಜನರು ಎಚ್ಚೆತ್ತು ಆತನನನ್ನು ಕೆಳಗಡೆ ಇಳಿಯುವಂತೆ ಕೇಳಿಕೊಂಡಿದ್ದಾರೆ. ಆದರೂ ಕ್ಯಾರೆ ಅನ್ನದೇ ರೈಲು ಬೋಗಿಗಳ ಮೇಲೆ ಜಿಗಿಯುತ್ತಾ ಹುಚ್ಚಾಟ ಮುಂದುವರೆಸಿದ್ದಾನೆ.
ಅದರಲ್ಲೂ ಒವರ್ ಹೆಡ್ ಹೈವೋಲ್ಟೇಜ್ ಕೇಬಲ್ ಕೆಳಗೆ ರೈಲಿನ ಮೇಲೆ ತಿರುಗಾಡುತ್ತುದ್ದ ಯುವಕ ಏನಾದರೂ ಅನಾಹುತ ಮಾಡಿಬಿಡುತ್ತಾನೆ ಎಂದು ರೈಲ್ವೆ ಸಿಬ್ಬಂದಿ ಒವರ್‌ಹೆಡ್ ಹೈವೊಲ್ಟೇಜ್ ಕೇಬಲ್‌ನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಬಳಿಕ ರೈಲ್ವೆ ಪೊಲೀಸ್ ಸಿಬ್ಬಂದಿಯೊಬ್ಬರು ರೈಲು ಏರಿ, ಯುವಕನನ್ನು ಹಿಡಿದುಕೊಳ್ಳಲು ಹೋಗಿದ್ದಾರೆ. ಆಗಲೂ ಆ ಯುವಕ ಮಾತು ಕೇಳಿಲ್ಲ.
ಯುವಕನಿಗೆ ಥಳಿತ: ಯುವಕ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ. ಇದನ್ನು ಕಂಡ ಕೆಳಗಿದ್ದ ಕೆಲವು ಜನರು ಕೂಡು ಬೋಗಿ ಮೇಲೆ ಹತ್ತಿ ಯುವಕನಿಗೆ ಥಳಿಸಿ ಕೆಳಗಿಳಿಸಿದ್ದಾರೆ. ಆಗ ಯವಕ ಪ್ರಜ್ಞೆ ತಪ್ಪಿದ್ದು, ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
उत्तर प्रदेश में शनिवार को एक युवक काशी विश्वनाथ एक्सप्रेस की छत पर चढ़ गया, जिससे रेलवे में हड़कंप मच गया। युवक के ट्रेन से उतरने से इंकार करने पर रेलवे ने तुरंत ओवरहेड लाइन की बिजली बंद कर दी, जिससे बड़ा हादसा टल गया।#Uttarpradesh #pratapgarh #ATReel #AajTakSocial #ViralVideo pic.twitter.com/ElxPWKhAuy
— Er Annu Abhimanyu (@ErAnnuAbhimanyu) December 7, 2025
ಈ ದೃಶ್ಯದಲ್ಲಿ ಯುವಕ ಪೊಲೀಸರಿಗೂ ಬಗ್ಗಿಲ್ಲ. ಆಗ ಅಲ್ಲಿದ್ದ ಕೆಲವರು ಜನ ರೊಚ್ಚಿಗೆದ್ದು ರೈಲು ಏರಿ ಯುವಕರಿಗೆ ಧರ್ಮದೇಟು ಕೊಟ್ಟು ಕೆಳಗಿಳಿಸಿದ್ದಾರೆ. ಈ ಯುವಕನ್ನು ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆ ಮೂಲದ 27 ವರ್ಷದ ಮೊಹ್ಮದ್ ಯೂನಸ್ ಎಂದು ಗುರುತಿಸಲಾಗಿದೆ. ಇನ್ನು ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತದೆ ಎಂದು ಉತ್ತರ ಪ್ರದೇಶದ ಜಿಆರ್‌ಪಿ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ನಡೆದಿವೆ. ಏನೋ ಮಾಡಲು ಹೋಗಿ ಕೊನೆಗೆ ಪಜೀತಿಗೆ ಸಿಲುಕಿಕೊಂಡಿರುವ ಉದಾಹರಣೆಗಳಿವೆ.












Click it and Unblock the Notifications