Viral Video: ಡಿವೋರ್ಸ್‌ಗೂ ಮುನ್ನವೇ ಪತಿಯ ಎರಡನೇ ಮದುವೆ : ಮಂಟಪಕ್ಕೇ ಬಂದು ಪತ್ನಿ ರಂಪಾಟ

Viral Video: ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯ ಆಗುತ್ತಂತೆ. ಯಾರಿಗೆ ಯಾರು ಜೋಡಿ ಅನ್ನೋದನ್ನ ದೇವರು ಮೊದಲೇ ನಿರ್ಧಾರ ಮಾಡಿ ಕಳೀಸ್ತಾನೆ ಅಂತ ನಮ್ಮ ಹಿರಿಯರು ಆವಾಗಾವಾಗ ಹೇಳ್ತಾ ಇರ್ತಾರೆ. ಆದ್ರೆ ಸ್ವರ್ಗದಲ್ಲೇ ನಿಶ್ವಯ ಆದ ಜೋಡಿ ಕೆಲವೊಮ್ಮೆ ಈ ಭೂಮಿ ಮೇಲೆ ಮುರಿಯೋದಿದೆ. ಈ ರೀತಿ ಮದುವೆ ಮುರಿಯೋದಕ್ಕೆ ಸಾವಿರ ಕಾರಣ ಇರಬಹುದು. ಮದುವೆಯಾದ ನಂತರ ಕೆಲವು ವರ್ತನೆ, ನಡವಳಿಕೆಗಳು ಇಷ್ಟವಾಗದೆ ಇರಬಹುದು, ಪರಸ್ಪರರ ಯೋಚನೆ ರೀತಿ ಮ್ಯಾಚ್‌ ಆಗದೇ ಇರಬಹುದು, ಅಥವಾ ಮನೆ ಮಂದಿಯ ಒತ್ತಡವೂ ಇರಬಹುದು. ಏನೇ ಆದ್ರೂ ಸಂಬಂಧ ಮುರಿಯೋದು ಅಥವಾ ಕಡಿದುಕೊಳ್ಳೋದು ಅಷ್ಟು ಸುಲಭ ಅಲ್ಲ. ಅದು ಒಂದು ರೀತಿಯಲ್ಲಿ ನರಕ ಯಾತನೆ.

ಕೆಲವೊಮ್ಮೆ ಈ ಡಿವೋರ್ಸ್‌ ಅನ್ನೋದು ಇಬ್ಬರ ಒಪ್ಪಿಗೆ ಮೇಲೆ ಆಗಿ ಬಿಡಬಹುದು. ಇನ್ನು ಕೆಲವೊಮ್ಮೆ ವಿಚ್ಚೇದನ ಗಂಡನಿಗೆ ಬೇಕಿರಬಹುದು ಆದ್ರೆ ಹೆಂಡ್ತಿ ಅದಕ್ಕೆ ಒಪ್ಪಲಿಕ್ಕಿಲ್ಲ, ಇಲ್ಲಾ ಹೆಂಡತಿಗೆ ಬೇಕಿರಬಹುದು ಆದ್ರೆ ಗಂಡನಿಗೆ ಇಷ್ಟ ಇರಲಿಕ್ಕಿಲ್ಲ. ಹೀಗಾದಾಗ ಕೋರ್ಟ್‌ ಕಚೇರಿಗಳಲ್ಲಿ ಈ ಕೇಸ್‌ ತಿಂಗಳುಗಟ್ಟಲೆ ಕೆಲವೊಮ್ಮೆ ವರ್ಷಗಟ್ಟಲೆ ಎಳೆಯುತ್ತದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ.

Viral Video

ಇಬ್ಬರ ಡಿವೋರ್ಸ್‌ ಕೇಸ್‌ ಕೋರ್ಟ್‌ನಲ್ಲಿ ನಡೆಯುತ್ತಿತ್ತು. ಆದ್ರೆ ಕೇಸ್‌ ಕ್ಲೋಸ್‌ ಆಗುವುದಕ್ಕೆ ಮೊದಲೇ ಪತಿ ಎರಡನೇ ಮದುವೆಗೆ ರೆಡಿ ಆಗಿದ್ದಾನೆ. ತನ್ನ ಗಂಡ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದಾನೆ ಎನ್ನುವ ಮಾಹಿತಿ ಸಿಕ್ಕಿದ್ದೇ ತಡ ಮೊದಲ ಪತ್ನಿ ಮದುವೆ ಮನೆಗೆ ಓಡೋಡಿ ಬಂದಿದ್ದಾಳೆ. ತನಗೆ ಮೋಸ ಆಗುತ್ತಿದೆ ಎಂದು ಗೋಗರೆದಿದ್ದಾಳೆ. ಪತಿ ಮತ್ತು ಪತಿಯ ಮನೆಯವರ ಮೇಲೆ ಕೂಗಾಡಿದ್ದಾಳೆ.

ವೇದಿಕೆ ಮೇಲೆ ಹತ್ತಿ ಅಲ್ಲಿ ವಧುವಿನ ರೂಪದಲ್ಲಿ ಕುಳಿತಿದ್ದ ಹುಡುಗಿಯನ್ನು ಕೂಡಾ ಅಂಗಲಾಚಿದ್ದಾಳೆ. ತಾನು ೨೦೨೨ರಲ್ಲಿಯೇ ಮದುವೆಯಾಗಿದ್ದು, ತನ್ನದು ಲವ್‌ ಮ್ಯಾರೇಜ್‌ ಆಗಿತ್ತು. ನನಗೆ ನನ್ನ ಗಂಡ ಬೇಕು, ನನಗೆ ಮೋಸ ಮಾಡಬೇಡಿ ಎಂದು ಅತ್ತಿದ್ದಾಳೆ. ಅಲ್ಲಿದ್ದವರು ಮಹಿಳೆಯನ್ನು ವೇದಿಕೆಯಿಂದ ಕೆಳಗೆ ಕರೆದುಕೊಂಡು ಬರುವುದಕ್ಕೆ ತುಂಬಾ ಪ್ರಯತ್ನ ಪಟ್ಟಿದ್ದಾರೆ. ಈ ಮಹಿಳೆಯ ಪತಿ ಇಂಟಿರಿಯರ್‌ ಡಿಸೈನರ್‌ ಅಂತೆ.

ಮದುವೆ ಮನೆಯಲ್ಲಿ ನಡೆದ ಈ ನಾಟಕದ ವಿಡಿಯೋವನ್ನು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಶೇರ್‌ ಮಾಡಲಾಗಿದೆ. ಈ ವೀಡಿಯೊ ವೈರಲ್‌ ಕೂಡಾ ಆಗಿದೆ. ಎರಡನೇ ಮದುವೆಯ ಸುದ್ದಿ ಗೊತ್ತಾಗ್ತಾ ಇದ್ದ ಹಾಗೆ ಪೊಲೀಸರು ಕೂಡಾ ಸ್ಥಳಕ್ಕೆ ಬಂದಿದ್ದಾರೆ. ಮೊದಲ ಪತ್ನಿ,ಪತಿ ಮತ್ತು ಆತನ ಮನೆಯವರನ್ನು ವಿಚಾರಿಸಿದ್ದಾರೆ. ಪೊಲೀಸರೆದುರು ಕೂಡಾ ಮೊದಲ ಪತ್ನಿಯದ್ದು ಒಂದೇ ಗೋಳಾಟ, ನಾನು ಆತನಿಗೆ ಬೇಡದೆ ಇರಬಹುದು ಆದ್ರೆ ನನಗೆ ಆತ ಬೇಕು. ನಾನು ಅವನೊಂದಿಗೆಯೇ ಸಂಸಾರ ನಡೆಸಬೇಕು ಎಂದು.

ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಗಮನಿಸಿದ ಪೊಲೀಸರು ಪತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಇಲ್ಲಿ ನಡೆಯುತ್ತಿದ್ದದ್ದು ಮದುವೆಯಲ್ಲ ರಿಸೆಪ್ಶನ್‌ ಎಂದು ಗೊತ್ತಾಗಿದೆ. ಮದುವೆ ನಡೆಯುತ್ತಿರಲಿಲ್ಲ ಹಾಗಾಗಿ ಯಾರನ್ನೂ ಬಂಧಿಸಲಾಗಿಲ್ಲ, ಅದಲ್ಲದೆ ಇದು ಎರಡು ಕುಟುಂಬಗಳ ನಡುವಿನ ಆಂತರಿಕ ವಿಚಾರ. ಇವರೇ ಅದನ್ನು ಸರಿಪಡಿಸಿಕೊಳ್ಳಬೇಕು ಎಂದಿದ್ದಾರೆ.

ವೈರಲ್‌ ಆಗಿರುವ ವಿಡಿಯೋವನ್ನು ನೋಡಿ ಸೋಶಿಯಲ್‌ ಮೀಡಿಯಾದಲ್ಲಿ ಜನ ಬೇರೆ ಬೇರೆ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಯಾರ ಜೀವನದಲ್ಲಿಯೂ ಇಂಥ ಪರಿಸ್ಥಿತಿ ಬರಬಾರದು ಎಂದು ಕೆಲವರು ಹೇಳಿದ್ದಾರೆ. ಮೊದಲ ಪತ್ನಿಯ ಬಗ್ಗೆ ಅನುಕಂಪದ ಮಾತನ್ನು ತುಂಬಾ ಜನ ಆಡಿದ್ದಾರೆ. ಲವ್‌ ಮ್ಯಾರೇಜ್‌ ಆಗಿದ್ದರೂ ಈ ದಿನ ನೋಡಬೇಕಾಯಿತು ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+