ವೈರಲ್ ವಿಡಿಯೋ: ಟಿಆರ್ ಎಸ್ ಮುಖಂಡನಿಂದ ಮಹಿಳೆಗೆ ಒದೆ!

Recommended Video

      Viral Video : ತೆಲಂಗಾಣದಲ್ಲಿ ಮಹಿಳೆಗೆ ಒದ್ದ ಟಿ ಆರ್ ಎಸ್ ಮುಖಂಡ | Oneindia Kannada

      ನಿಜಾಮಾಬಾದ್, ಜೂನ್ 18: ಆಸ್ತಿ ವಿವಾದಕ್ಕೆ ಸಂಬಂಧಿಸಿದ ಜಗಳವೇ ಉಲ್ಬಣಕ್ಕೆ ತಿರುಗಿ ತೆಲಂಗಣ ರಾಷ್ಟ್ರ ಸಮಿತಿಯ ಮಂಡಲ ಪರಿಷತ್ ಅಧ್ಯಕ್ಷರೊಬ್ಬರು ಮಹಿಳೆಗೆ ಒದ್ದಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ನಲ್ಲಿ ನಡೆದಿದೆ.

      ತಮ್ಮ ಸ್ಥಾನವನ್ನು ಮರೆತು ಮಹಿಳೆಯೊಬ್ಬರಿಗೆ ಅವರು ಒದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ.

      ಇಮ್ಮಾಡಿ ಗೋಪಿ ಎಂಬ ಹೆಸರಿನ ಈ ನಾಯಕ ಮಹಿಳೆಯೊಬ್ಬರಿಗೆ 33 ಲಕ್ಷ ರೂ ಬೆಲೆಬಾಳುವ ಆಸ್ತಿಯೊಂದನ್ನು ಮಾರಿದ್ದರು. ಹಣ ಪಡೆದು ನಂತರ ಆಸ್ತಿಯನ್ನು ಮಹಿಳೆಗೆ ಹಸ್ತಾಂತರಿಸಲು ಒಪ್ಪದೆ, ಮತ್ತಷ್ಟು ಹಣ ನೀಡುವಂತೆ ಪೀಡಿಸುತ್ತಿದ್ದರು. ಇದರಿಂದ ಬೇಸೆತ್ತ ಮಹಿಳೆ ತಮ್ಮ ಸಮುದಾಯದ ಕೆಲವು ಜನರೊಂದಿಗೆ ಗೋಪಿ ಮನೆ ಬಳಿ ತೆರಳಿ ಆಸ್ತಿಯನ್ನು ಹಸ್ತಾಂತರಿಸುವಂತೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಒಪ್ಪದಿದ್ದಾಗ ಅವರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಕೋಪಗೊಂಡ ಗೋಪಿ ತಮ್ಮ ಕಾಲಿನಿಂದ ಮಹಿಳೆಯನ್ನು ಬಲವಾಗಿ ಒದ್ದಿದ್ದಾರೆ.

      Viral video: TRS leader booked for kicking woman

      ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಗೋಪಿ ಅವರ ಮನಗೆ ನುಗ್ಗಿ ಪೀಟೋಪಕರಣಗಳನ್ನು ಧ್ವಂಸ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆ ಮತ್ತು ಇನ್ನಿತರರ ವಿರುದ್ಧವೂ ದೂರು ದಾಖಲಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+