Video Viral: ಚೀನಾ ರಸ್ತೆಗಳಲ್ಲಿ ಡ್ರೈವರ್‌ಲೆಸ್ ಬಸ್ ಓಡಾಡ್ತಿವೆ: ಆದ್ರೆ ಭಾರತದಲ್ಲಿ....?
China Driverless Bus Video: ತಾಂತ್ರಿಕತೆ ಮುಂದುವರಿದಂತೆ ದೇಶ ವಿದೇಶಗಳಲ್ಲಿ ಅದರ ಬಳಕೆ ತೀವ್ರ ಸ್ವರೂಪದಲ್ಲಿದೆ. ಚೀನಾ, ಜಪಾನ್, ಅಮೆರಿಕಾದಂತಹ ದೇಶಗಳು ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವುದು ಗೊತ್ತೇ ಇದೆ. ಇದೀಗ ಚೀನಾದಲ್ಲಿ ಡ್ರವರ್‌ಲೆಸ್ ಬಸ್‌ಗಳು, ಕಾರುಗಳು ಸಂಚರಿಸುತ್ತಿವೆ. ಅದರ ವಿಡಿಯೋಗಳು ವೈರಲ್ ಆಗಿವೆ. ಆದರೆ ನಮ್ಮ ಭಾರತದಲ್ಲಿ ಏನಾಗುತ್ತಿದೆ? ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ತಂತ್ರಜ್ಞಾನ ಪರಿಣಾಮಕಾರಿ ಜಾರಿ ಆಗಬೇಕಿದೆ. ಆ ನಿಟ್ಟಿನಲ್ಲಿ ಕೆಲಸಗಳು ಆಗದೇ ಬರೀ ಜಾತಿ, ಧರ್ಮಾಧಾರಿತ ರಾಜಕಾರಣ ನಡೆಯುತ್ತಿದೆ ಎಂಬ ಬೇಸರವಿದೆ.
ಚೀನಾದ ರಸ್ತೆಗಳಲ್ಲಿ ಚಾಲಕರಹಿತ ಬಸ್ಸುಗಳು ಓಡುತ್ತಿವೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ @RavinderKapur2 ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಎಲೆಕ್ಟ್ರಿಕ್ ಸಣ್ಣ ಬಸ್ ಇದಾಗಿದ್ದು, ಬೀದಿಯಿಂದ ಬೀದಿಗೆ ಸಂಚರಿಸುತ್ತವೆ. ಈ ಬಸ್ ನಿಗದಿತ ನಿಲ್ದಾಣದಲ್ಲಿ ಬಂದು ನಿಂತ ಮೇಲೆ ಯಾರು ಬೇಕಾದರೂ ಹತ್ತಬಹುದು. ವಿಶೇಷವೆಂದರೆ ಈ ಬಸ್‌ನಲ್ಲಿ ಯಾವುದೇ ಚಾಲಕ ಇರುವುದಿಲ್ಲ. ಚಾಲಕ ರಹಿತ ಸ್ವಯಂ ಚಾಲಿತ ಬಸ್ ಇದಾಗಿದ್ದು, ಇಲ್ಲಿ ಪ್ರಯಾಣಿಕರು ಚಿಂತೆ ಇಲ್ಲದೇ ನಿರ್ಭೀತಿಯಿಂದ ಈ ಬಸ್‌ಗಳಲ್ಲಿ ಸಂಚಾರ ಮಾಡುತ್ತಾರೆ.

ಚೀನಾ ದೇಶದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಬೆಳವಣಿಗೆ ಆಗಿದೆ. ಚಾಲಕರು, ನಿರ್ವಾಹಕರ ಅಗತ್ಯವಿಲ್ಲದೇ ಬಸ್‌ಗಳು ಜನರಿಗೆ ಸೇವೆ ನೀಡುತ್ತವೆ. ಜನರು ಸಹ ಅಷ್ಟೇ ಸಹಕಾರಿಯುತವಾಗಿ ವರ್ತಿಸುತ್ತಾರೆ. ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಾರೆ. ಬದಲಾವಣೆಗೆ ಸಹಕರಿಸುತ್ತಾರೆ. ಇಲ್ಲಿ ಸ್ವಚ್ಚತೆ, ಸಂಚಾರ ನಿಯಮಗಳನ್ನು ಪಾಲಿಸುತ್ತಾರೆ. ಇಂತಹ ನಡವಳಿಕೆ ತಂತ್ರಜ್ಞಾನ ಅಳವಡಿಕೆ, ಉತ್ತೇಜನಕ್ಕೆ ಸಹಕಾರಿಯಾಗುತ್ತದೆ. ಆದರೆ ಭಾರತದಲ್ಲಿ ಇಂತಹ ಸ್ಥಿತಿ ಇಲ್ಲ ಎಂಬುದು ಬೇಸರದ ಸಂಗತಿ.
ಭಾರತ ಜಾತಿ, ಧರ್ಮ ರಾಜಕೀಯದಲ್ಲಿ ಮುಂದಿದೆ
ಹೌದು, ಚೀನಾದವರು ತಂತ್ರಜ್ಞಾನದಲ್ಲಿ ಮುಂದಿದ್ದಾರೆ. ಅಲ್ಲಿನ ಸಾರಿಗೆ ವ್ಯವಸ್ಥೆ ಇತರ ದೇಶಗಳಿಗೆ ಮಾದರಿಯಾಗುವಂತಿದೆ. ಆದರೆ ಭಾರತದಲ್ಲಿ ಸಾರಿಗೆ ವ್ಯವಸ್ಥೆಯು ಸದ್ಯ ಬದಲಾಗುವ ಹಂತದಲ್ಲಿದೆ. ಇಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಈಗಷ್ಟೆ ಜಾರಿಯಾಗಿದೆ. ಭಾರತದಲ್ಲಿ ಜಾತಿ ರಾಜಕೀಯ, ಧರ್ಮ, ದೇವಸ್ಥಾನ, ಮಸೀದಿ ಮತ್ತು ಹಿಂದೂ-ಮುಸ್ಲಿಂ ನಡುವಿನ ಅಂತರವನ್ನು ಕುರಿತು ಚರ್ಚೆಗಳು ಆಗುತ್ತಿವೆ. ಆರೋಪ ಪ್ರತ್ಯಾರೋಪಗಳ ಮೇಲೆ ಜನರಿಗೆ ಮಂಕು ಬೂದಿ ಎರಚಿ, ರಾಜಕಾರಣಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.
Driverless buses are running on the roads of China while Indian politics is still busy widening the gap between caste, religion, temple, mosque& Hindu-Muslim. One country is running towards the future, the other is colliding with the walls of the past.
— Ravinder Kapur. (@RavinderKapur2) June 26, 2025
pic.twitter.com/pLdWGEYF8z
ಯೋಜನೆಗಳು, ತಂತ್ರಜ್ಞಾನ ಅಳವಡಿಕೆ ಕೇವಲ ಘೋಷಣೆ ಆಗಿ ಉಳಿಯುತ್ತಿದೆ. ಹಿಂದೂ-ಮುಸ್ಲಿಂ, ಜಾತಿ ಜಗಳ, ಧರ್ಮಾಧಾರಿತ ರಾಜಕೀಯ ಹೆಚ್ಚಿಸುವಲ್ಲಿ ರಾಜಕಾರಣಿಗಳು ನಿರತವಾಗಿದೆ. ಚೀನಾದಂತಹ ದೇಶ ಭವಿಷ್ಯದತ್ತ ಓಡುತ್ತಿದ್ದರೆ, ಇನ್ನೊಂದು ದೇಶವು ಭೂತಕಾಲದ ವಿಷಯಗಳಲ್ಲಿ ಮುಳುಗಿದೆ. ಜನರು ಈ ಬಗ್ಗೆ ಜಾಗೃತರಾಗಬೇಕಿದೆ. ಯಾವುದೇ ಜನಸ್ನೇಹಿ ಯೋಜನೆ, ಕಾರ್ಯಕ್ರಮ ಜಾರಿಗೆ ತಂದರೆ ಅದಕ್ಕೆ ಸಹಕರಿಸುವುದು ನಿಯಮ ಪಾಲಿಸುವುದು, ಅಭಿವೃದ್ಧಿಗೆ ಆದ್ಯತೆ ನೀಡುವ ರಾಜಕಾರಣಗಳನ್ನು ಆಯ್ಕೆ ಮಾಡುವುದು ಜನರ ಆದ್ಯ ಕರ್ತವ್ಯವಾಗಬೇಕಿದೆ.
ಡ್ರೈವರ್‌ಲೆಸ್ ಕಾರಿನಲ್ಲಿ ಯೂಟ್ಯೂಬರ್ ಸಂಚಾರ
ಇತ್ತೀಚೆಗೆ ಚೀನಾದಲ್ಲಿ ಯೂಟ್ಯೂಬರ್ ವೊಬ್ಬರು ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಅವರು ಆನ್‌ಲೈನ್‌ನಲ್ಲಿ ಟ್ಯಾಕ್ಸಿ ಬುಕ್ ಮಾಡುತ್ತಾರೆ. ಅವರು ಇದ್ದಲ್ಲಿಗೆ ಬರುವ ಟ್ಯಾಕ್ಸಿಯಲ್ಲಿ ಯಾರೊಬ್ಬರು ಇರುವುದಿಲ್ಲ. ಅಸಲಿಗೆ ಅದು ಡ್ರವೈರ್‌ಲೆಸ್ ಕಾರು. ಎಲ್ಲವು ಸ್ವಯಂ ಚಾಲಿತ ಕಾರು ಇದಾಗಿತ್ತು. ಯೂಟ್ಯೂಬರ್ ಒಬ್ಬರೇ ಕಾರಿನಲ್ಲಿ ಏಳು ಕಿಲೋ ಮೀಟರ್ ಸಂಚರಿಸಿದ್ದ ವಿಡಿಯೋ ಹಂಚಿಕೊಂಡಿದ್ದರು.












Click it and Unblock the Notifications