Viral Video: ಮಗುವಿಗಾಗಿ ಬಾಳೆಹಣ್ಣಿನ ಸಿಪ್ಪೆ ಸುಲಿದ ಕೋತಿ!

ನವದೆಹಲಿ, ಅಕ್ಟೋಬರ್ 04: ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋ ತತ್ವದ ಮೇಲೆ ಈ ಕೋತಿಗಳಿಗೆ ಅದೇನೋ ಅಪಾರವಾದ ನಂಬಿಕೆ ಅನಿಸುತ್ತೆ. ಸಾಮಾಜಿಕ ಜೀವಿಗಳಂತೆ ಬದುಕುವ ಕೋತಿಗಳು ತಮ್ಮ ಮರಿ ಕೋತಿಗಳಿಂದ ದೂರವಾದರೆ ಖಿನ್ನತೆಗೆ ಒಳಗಾಗುತ್ತವೆ. ಹೀಗಾಗಿಯೇ ತಮ್ಮ ಮರಿ ಕೋತಿಗಳಿಗೆ ರಕ್ಷಾ ಕವಚದಂತೆ ಇರುತ್ತವೆ.

ಮರಿ ಕೋತಿಗಳು ಸಹ ಹೆತ್ತ ಕೋತಿಯ ತೋಳು ಅಗಲಿ ಹೋಗುವುದಿಲ್ಲ. ಬದುಕಿನ ಕೌಶಲ್ಯವನ್ನು ಕಲಿಸುವವರೆಗೂ ಕೋತಿಗಳು ತಮ್ಮ ಮರಿಯನ್ನು ತೋಪಾನ ಮಾಡುತ್ತವೆ. ಈ ಹಂತದಲ್ಲಿ ಕೋತಿಯು ತನ್ನ ಮರಿಗೆ ಕಲಿಸುತ್ತಿರುವ ಪಾಠದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಆರಾಧ್ಯ ವಿಡಿಯೋವೊಂದು ವೈರಲ್ ಆಗುತ್ತಿದ್ದು, ತಾಯಿ ಕೋತಿಯು ತನ್ನ ಮಗುವಿಗೆ ಬಾಳೆಹಣ್ಣನ್ನು ತಿನ್ನುವ ಮೊದಲು ಸಿಪ್ಪೆ ತೆಗೆಯಲು ಸಹಾಯ ಮಾಡುವುದನ್ನು ಕಾಣಬಹುದು. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ 'ಮಂಕಿಯಾದೋರ್' ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ.

Viral Video: How Monkey Helps Peel Banana For Baby Monkey

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ:

ಈ ವಿಡಿಯೋವನ್ನು 2.68 ಲಕ್ಷ ಮಂದಿ ನೋಡುತ್ತಿದ್ದು, 8,300 ಜನರು ಲೈಕ್‌ ಅನ್ನು ಮಾಡಿದ್ದಾರೆ. ಈ ವಿಡಿಯೋದಲ್ಲಿ ಮರಿ ಕೋತಿಯು ತನ್ನ ತಾಯಿಯ ಕೈಯಿಂದ ಬಾಳೆಹಣ್ಣನ್ನು ತಿನ್ನುವುದಕ್ಕಾಗಿ ತೆಗೆದುಕೊಳ್ಳುವುದನ್ನು ಕಾಣಬಹುದು.

ನೆಟ್ಟಿಗರ ಕಾಮೆಂಟ್ ನಲ್ಲಿ ಏನಿದೆ?:

ತನ್ನ ಮರಿ ಕೋತಿಗಾಗಿ ತಾಯಿ ಕೋತಿಯು ಬಾಳೆಹಣ್ಣಿನ ಸಿಪ್ಪೆಯನ್ನು ತುಲಿದು ಕೊಡುತ್ತಿರುವ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಜನರು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಮರಿ ಕೋತಿಯನ್ನು ತಾಯಿ ಹೇಗೆ ಪ್ರೀತಿಯಿಂದ ಸಾಕುತ್ತಿದೆ ಎಂದು ನೆಟ್ಟಿಗರು ಖುಷಿ ಪಟ್ಟಿದ್ದಾರೆ. "ಸರಳವಾದ ವಿಷಯವಾದರೂ ವೀಕ್ಷಿಸಲು ತುಂಬಾ ಸುಂದರವಾಗಿರುತ್ತದೆ" ಎಂದು ಬಳಕೆದಾರರು ಬರೆೆದಿದ್ದರೆ, "ತುಂಬಾ ಸ್ಮಾರ್ಟ್," ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+