Video: ಮಧುಮಗಳನ್ನು ಕಚ್ಚಲು ಮುಂದಾದ ನಾಯಿ- ಟವೆಲ್ ಕಟ್ಟಿಕೊಂಡು ಹುಡುಗಿಯರ ಮೆಟ್ರೋ ಪ್ರಯಾಣ - ವಿಡಿಯೋ
ಮದುವೆಯ ಸೀಸನ್ ಆರಂಭವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಮದುವೆ ವೀಡಿಯೋ ಹಾಗೂ ಫೋಟೋಗಳದ್ದೇ ಕಾರುಬಾರು. ಮದುವೆಗೆ ಸಂಬಂಧಿಸಿದ ಅನೇಕ ರೀಲ್‌ಗಳು ಮತ್ತು ವಿಭಿನ್ನ ವೀಡಿಯೊಗಳು ಹೆಚ್ಚೆಚ್ಚು ವೈರಲ್ ಆಗುತ್ತಿವೆ.
ಕೆಲವು ವೀಡಿಯೋಗಳು ನೋಡುಗರಿಗೆ ನಗೆ ತರಿಸುತ್ತವೆ. ಅಂತಹ ವೀಡಿಯೋಗಳಿಗೆ ನೆಟ್ಟಿಗರು ಪ್ರೀತಿಯ ಸುರಿಮಳೆ ಸುರಿಸುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ವೀಡಿಯೋ ವೈರಲ್ ಆಗಿದ್ದು ಇದನ್ನು ನೋಡಿದರೆ ನೀವು ಆತಂಕ ಪಡುವುದರಲ್ಲಿ ಅನುಮಾನವೇ ಇಲ್ಲ.

ಮದುವೆ ಮನೆಯಲ್ಲಿ ನಾಯಿಯೊಂದು ಸಿಕ್ಕ ಸಿಕ್ಕವರನೆಲ್ಲಾ ಕಚ್ಚಲು ಮುಂದಾಗಿದ್ದರಿಂದ ಮಧುಮಗಳು ಹೆದರಿ ಮನೆ ತುಂಬಾ ಓಡಾಡಿದ ದೃಶ್ಯ ವೈರಲ್ ಆಗಿದೆ. ಮದುವೆ ಮಂಟಪದಲ್ಲಿ ಮದುವೆಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿರುತ್ತದೆ. ವಧು-ವರ ಕೂಡ ಸುಂದರವಾಗಿ ಅಲಂಕಾರಗೊಂಡು ಮಂಟಪದ ಬಳಿ ಬಂದಿರುತ್ತಾರೆ. ಆಗ ನಾಯಿಯೊಂದು ಮಧುಮಗಳಿಗೆ ಕಚ್ಚಲ ಮುಂದಾಗಿದ್ದರಿಂದ ಮಧುಮಗಳು ಹೆದರಿ ಮಂಟಪದ ಸುತ್ತಲು ಓಡಾಡುತ್ತಾಳೆ.
ಈ ವೇಳೆ ಮಂಟಪದಲ್ಲಿ ಇದ್ದ ವಸ್ತುಗಳೆಲ್ಲವೂ ಚಲ್ಲಾಪಿಲ್ಲಿಯಾಗಿ ಬೀಳುತ್ತವೆ. ನಾಯಿಯನ್ನು ಸಮಾಧಾನಪಡಿಸಲು ಇತರರು ಪ್ರಯತ್ನ ಪಡುತ್ತಾರಾದರೂ ನಾಯಿ ಎಲ್ಲರನ್ನು ಹಿಂಬಾಲಿಸುತ್ತದೆ. ಇದರಿಂದ ಮದುವೆ ಮನೆಯಲ್ಲಿ ಕೊಂಚ ಆತಂಕದ ವಾತಾವರಣ ನಿರ್ಮಾಣವಾಗಿರುವುದು ಕಂಡು ಬರುತ್ತದೆ.
ಅದೇ ಸಮಯದಲ್ಲಿ ವರನು ವಧುವನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾನೆ. ಆದರೆ ವರನ ಮಾತು ವಧು ಕೇಳುವುದೇ ಇಲ್ಲ. ಮಧು ಮಾತ್ರವಲ್ಲದೆ ನಾಯಿಯನ್ನು ನೋಡಿದ ಅನೇಕರು ಓಡಿ ಹೋಗುತ್ತಿರುವುದು ವೀಡಿಯೋದಲ್ಲಿ ಕಂಡು ಬಂದಿದೆ. ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಹ್ಯಾಂಡಲ್ @bridal_lehenga_designn ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ ಈ ವೀಡಿಯೋಕ್ಕೆ 4,39,000 ಲೈಕ್‌ಗಳು ಬಮದಿವೆ. ಈ ವೀಡಿಯೋವನ್ನು ಜನವರಿಯಲ್ಲಿ ಶೇರ್ ಮಾಡಲಾಗಿತ್ತು ಆದರೆ ಇದೀಗ ವೈರಲ್ ಆಗುತ್ತಿದೆ.
ಈಗಲೂ ಕ್ಲಿಪ್ 23 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಕ್ಲಿಪ್ ಅನ್ನು ವೀಕ್ಷಿಸಿದ ನಂತರ ಅನೇಕ ನೆಟ್ಟಿಗರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಸಣ್ಣ ನಾಯಿಮರಿಯು ಯಾವುದೇ ಹಾನಿ ಮಾಡುವುದಿಲ್ಲ ಎಂದು ಕೆಲವು ಹೇಳಿದರೆ, ವಧು ತುಂಬಾ ಹೆಚ್ಚು ಪ್ರತಿಕ್ರಿಯಿಸದಿದ್ದರೆ ನಾಯಿ ಸುಮ್ಮನಾಗುತ್ತಿತ್ತು ಎಂದು ಇನ್ನೂ ಕೆಲವರು ಸಲಹೆ ನೀಡಿದ್ದಾರೆ.
ಕಾಮಿಡಿ ಕಾಮೆಂಟ್
ಮೊದಲ ಕಾಮೆಂಟ್ ಹೀಗಿದೆ- 'ಮಧುಮಗಳು ನಾಯಿಯಿಂದಿಗೆ ಸಪ್ತಪದಿ ತುಳಿದಂತಿದೆ'
ಇನ್ನೊಬ್ಬ ನೆಟ್ಟಿಗ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ- 'ನನ್ನ ಮದುವೆಯಲ್ಲಿ ನನ್ನ ಸ್ನೇಹಿತರೂ ಕೂಡ ನಾಯಿಯನ್ನು ಬಿಟ್ಟಿದ್ದರು'
'ನಾಯಿ ಯಾವುದೇ ಹಾನಿ ಮಾಡಲ್ಲ, ವಧು ಸುಮ್ಮನೆ ನಾಟಕವಾಡಿದ್ದಾರೆ' ಎಂದು ಇನ್ನೊಬ್ಬರು ಬರೆದಿದ್ದಾರೆ.
ಟವೆಲ್ ಕಟ್ಟಿಕೊಂಡು ಮೆಟ್ರೋದಲ್ಲಿ ಪ್ರಯಾಣ ಮಾಡಿದ ಹುಡುಗಿಯರು
ಸಾಮಾಜಿಕ ಜಾಲತಾಣದಲ್ಲಿ ಹಲವಾರು ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಹೀಗೆ ಮತ್ತೊಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋದ ಆರಂಭದಲ್ಲಿ ಮೆಟ್ರೋದಲ್ಲಿ ಪ್ರಯಾಣಿಸಲು ಹುಡುಗಿಯರು ಟವೆಲ್ ಕಟ್ಟಿಕೊಂಡು ಬಂದಿರುವ ದೃಶ್ಯ ಕಂಡು ಬಂದಿದೆ. ಇದರಿಂದ ಮೆಟ್ರೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಗಾಬರಿಗೊಂಡಿದ್ದಾರೆ.
ಅಲ್ಲದೆ ಹುಡುಗಿಯರು ಪ್ರಯಾಣಿಕರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ. ಕೆಲ ಪ್ರಯಾಣಿಕರು ಕದ್ದುಮುಚ್ಚಿ ಅವರ ವೀಡಿಯೋ ಮಾಡಲು ಮುಂದಾಗುವುದು ಕಂಡು ಬಂದಿದೆ. ಈ ವೀಡಿಯೋ ಭಾರತ ದೇಶದಲ್ಲ. ಹೀಗಾಗಿ ವಿದೇಶದಲ್ಲಿ ಇದೆಲ್ಲಾ ಕಾಮನ್ ಬಿಡಿ ಎನ್ನುತ್ತಿದ್ದಾರೆ ವೀಡಿಯೋ ನೋಡಿದ ಜನ.












Click it and Unblock the Notifications