Video: ಹಾವನ್ನು ಕಟ್ಟಿಗೆಯಿಂದ ಉಷ್.. ಎಂದು ಓಡಿಸಿದ ಮಹಿಳೆ- ನಡು ರಸ್ತೆಯಲ್ಲಿ ಜೋಡಿ ಹಾವುಗಳ ಕಾದಾಟ
ಹಾವುಗಳೆಂದರೆ ಯಾರಿಗೆ ತಾನೆ ಭಯ ಆಗೋದಿಲ್ಲ ಹೇಳಿ? ಇದಕ್ಕೆ ಕಾರಣ ಹಾವು ತುಂಬಾ ವಿಷಕಾರಿ. ಅದು ಕಚ್ಚಿದರೆ ಬದುಕುವುದು ತುಂಬಾ ಕಷ್ಟ. ಹೀಗಾಗಿ ಜನ ಹಾವು ಅಂದರೆ ಸಾಕು ಮಾರುದ್ದ ದೂರ ಹೋಗಿ ನಿಲ್ಲುತ್ತಾರೆ. ಮತ್ತದರ ಸೇಡು ಕೂಡ 12 ವರ್ಷ ಎಂದು ಹೇಳಲಾಗುತ್ತದೆ.
ಒಮ್ಮೆ ಹಾವಿಗೆ ತೊಂದರೆ ಕೊಟ್ಟರೆ ಎಲ್ಲೇ ಇದ್ದರೂ ಕೂಡ ಹುಡುಕಿಕೊಂಡು ಬಂದು ಕಚ್ಚುತ್ತದೆ ಎಂದು ನಮ್ಮ ಹಿರಿಯರು ಹೇಳಿರುವುದನ್ನು ನಾವು ಕೇಳಿಸಿಕೊಂಡಿದ್ದೇವೆ. ಅಂತಹ ಘಟನೆಗಳು ಕೂಡ ನಮ್ಮ ನಡುವೆ ನಡೆದಿವೆ. ಹೀಗಾಗಿ ಹಾವು ಅಂದರೆ ನಿದ್ದೆಯಲ್ಲೂ ಜನ ಬೆಚ್ಚಿ ಬೀಳುತ್ತಾರೆ. ಸಾಮಾಜಿಕ ಜಾಲತಾಣದಲ್ಲೂ ಹಾವಿಗೆ ಸಂಬಂಧಿಸಿದ ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಹೀಗೊಂದು ವೀಡಿಯೋದಲ್ಲಿ ಜೋಡಿ ಹಾವುಗಳು ರಸ್ತೆ ಬದಿ ಹೆಡೆ ಎತ್ತಿ ಆಡುತ್ತಿರುವುದು ಕಂಡು ಬಂದಿದೆ.

ವೀಡಿಯೋದಲ್ಲಿ ಹಾವುಗಳು ಪೊದೆಯಲ್ಲಿ ಇರುವುದು ಕಂಡುಬರುತ್ತದೆ. ನಂತರ ಹಾವುಗಳು ರಸ್ತೆಗೆ ಬರುವುದನ್ನು ರಸ್ತೆಯಲ್ಲಿ ಹೋಗುವ ಜನ ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಎರಡೂ ಹಾವುಗಳು ಅರ್ಧ ಭಾಗದಷ್ಟು ದೇಹವನ್ನು ಮೇಲೆತ್ತುವುದು ಕಂಡು ಬಂದಿದೆ.
रियल नाग नागिन का नृत्य 👌 pic.twitter.com/HPEWYvMj8i
— Disha Rajput (@DishaRajput24) December 9, 2024
ಇದನ್ನು ನೋಡಿದರೆ ಕೆಲವೊಮ್ಮೆ ಕುಣಿಯುತ್ತಿರುವಂತೆಯೂ ಕೆಲವೊಮ್ಮೆ ಕೋಪದಿಂದ ಜಗಳವಾಡುತ್ತಿರುವಂತೆಯೂ ತೋರುತ್ತದೆ. ಈ ವೀಡಿಯೋ ಭಾರೀ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು X ನ ಹ್ಯಾಂಡಲ್ @DishaRajput24 ನಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ 'ರಿಯಲ್ ನಾಗ್ ನಾಗಿನ್ಸ್ ಡ್ಯಾನ್ಸ್' ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಇದು ಇಲ್ಲಿಯವರೆಗೆ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ನೂರಾರು ಕಾಮೆಂಟ್‌ಗಳನ್ನು ಸ್ವೀಕರಿಸಿದೆ.

ಅನೇಕ ಬಳಕೆದಾರರು ಈ ಕ್ಲಿಪ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಕೆಲವು ಬಳಕೆದಾರರು ಗಂಡು ಹಾವುಗಳು ಸಂತೋಷವಾಗಿರುವಾಗ ಹೆಣ್ಣು ಹಾವುಗಳನ್ನು ಈ ರೀತಿ ಓಲೈಸಲು ಪ್ರಯತ್ನಿಸುತ್ತವೆ ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬರು 'ಇದು ಅವರಿಗೆ ರೆಕಾರ್ಡ್ ಮಾಡಲು ಸಿಕ್ಕಿರುವ ಅಪರೂಪದ ಕ್ಷಣವಾಗಿದೆ' ಎಂದು ಬರೆದಿದ್ದಾರೆ. ಇನ್ನೂ ಕೆಲ ಬಳಕೆದಾರರು ಹಾವುಗಳು ಯಾಕೆ ರಸ್ತೆಗೆ ಬಂದವು ಎಂದು ವಿವರಿಸಿದ್ದಾರೆ.
ನಾಯಿಯನ್ನು ಓಡಿಸುವಂತೆ ಹಾವನ್ನು ಕಟ್ಟಿಗೆಯಿಂದ ಉಷ್.. ಎಂದು ಓಡಿಸಿದ ಮಹಿಳೆ
ನಾಗರಹಾವು ಅಪಾಯಕಾರಿ ಮತ್ತು ವಿಷಕಾರಿ ಕೂಡ ಹೌದು. ಕಾಡಿನಲ್ಲಿ ಮನುಷ್ಯರನ್ನು ಕಂಡರೆ ಪ್ರಾಣಿಗಳು ಹೆದರಿ ಆಕ್ರಮಣಕ್ಕೆ ಬರುವಂತೆ, ಮನುಷ್ಯರು ತಮ್ಮ ಪ್ರದೇಶದಲ್ಲಿ ಪ್ರಾಣಿಗಳನ್ನು ನೋಡಿದ ನಂತರ ಅದೇ ರೀತಿ ಆಕ್ರಮಣಕ್ಕೆ ಮುಂದಾಗುತ್ತಾರೆ. ಅದೇ ರೀತಿ ಇಲ್ಲೊಬ್ಬ ಆಂಟಿ ತನ್ನ ಮನೆಯ ಹೊರಗೆ ಹಾವನ್ನು ನೋಡಿದ ತಕ್ಷಣ ಅದರ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಗೇಟ್‌ನಲ್ಲಿ ನಾಗರಹಾವನ್ನು ನೋಡಿದ ಆಂಟಿ ಕೋಲಿನೊಂದಿಗೆ ಅದನ್ನು ಉಷ್... ಉಷ್.. ಎಂದು ಓಡಿಸಿದ್ದಾರೆ. ಹಾವು ತಮ್ಮ ಮನೆ ಒಳಗೆ ಪ್ರವೇಶ ಮಾಡುವುದನ್ನು ಅವರು ತಡೆದಿದ್ದಾರೆ.
Kalesh b/w Aunties and a Cobra
— Ghar Ke Kalesh (@gharkekalesh) December 11, 2024
pic.twitter.com/N7i7iytrto
ಸುಮಾರು 34 ಸೆಕೆಂಡುಗಳ ಈ ವೀಡಿಯೊ ಇದರೊಂದಿಗೆ ಕೊನೆಗೊಳ್ಳುತ್ತದೆ. Xನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡುವಾಗ @gharkekalesh 'ಕೋಬ್ರಾ ಮತ್ತು ಆಂಟಿ ನಡುವೆ ಘರ್ಷಣೆ' ಎಂದು ಬರೆದಿದ್ದಾರೆ. ಇಲ್ಲಿಯವರೆಗೆ ಈ ಪೋಸ್ಟ್ 20 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 300 ಕ್ಕೂ ಹೆಚ್ಚು ಬಳಕೆದಾರರು ಇದನ್ನು ಇಷ್ಟಪಟ್ಟಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಜನರು ಈ ಘಟನೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
'ಅದು ನಾಯಿ ಅಲ್ಲ ಹಾವು' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ಹಾವಿಗೆ ಹೊಡೆದರೆ ಅದು ಸೇಡು ಇಟ್ಟುಕೊಳ್ಳುತ್ತದೆ' ಎಂದು ಕಾಮೆಂಟ್ ಮಾಡಿದ್ದಾರೆ.
-
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Love Mocktail 3: ಲವ್ ಮಾಕ್ಟೇಲ್ 3 ಸಿನಿಮಾ ಕದ್ದ ಕಥೆ: ಮಾರಿ ಗೋಲ್ಡ್ ನಿರ್ದೇಶಕ ರಾಘವೇಂದ್ರ ನಾಯ್ಕ್ ಗಂಭೀರ ಆರೋಪ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications