Beef: ಪರೋಟ ಇಲ್ಲದೆ ಬೀಫ್ ಸೇವಿಸುವುದು ಹೇಗೆ; ಕೇರಳ 2 ಸ್ಟೋರಿ ದೃಶ್ಯಕ್ಕೆ ಸೋಷಿಯಲ್ ಮೀಡಿಯಾ ಟ್ರೋಲ್

The Kerala Story 2 Teaser: ದಿ ಕೇರಳ: ಸ್ಟೋರಿ 2: ಗೋಸ್ ಬಿಯಾಂಡ್ ಇದೀಗ ಕೇರಳ ಸೇರಿದಂತೆ ಭಾರತದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಮುಖ್ಯವಾಗಿ ಈ ಸಿನಿಮಾದ ಟ್ರೇಲರ್‌ನಲ್ಲಿ ಒತ್ತಾಯಪೂರ್ವಕವಾಗಿ ಬೀಫ್ ತಿನ್ನಿಸುತ್ತಿರುವ ದೃಶ್ಯವು ಇದೀಗ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ.

ದಿ ಕೇರಳ ಸ್ಟೋರಿ 2ನ ಟೀಸರ್‌ನಲ್ಲಿ ಗೋಮಾಂಸ ತಿನ್ನುವ ದೃಶ್ಯವು ಕೇರಳಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದು, ಬೀಫ್‌ಗೆ ಸಂಬಂಧಿಸಿದಂತೆ ಟ್ರೋಲ್‌ಗಳು ಶುರುವಾಗಿವೆ. ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್‌ನ ಟೀಸರ್ ಹೊಸ ವಿವಾದವನ್ನು ಹುಟ್ಟುಹಾಕಿದೆ. ನಿರ್ದಿಷ್ಟವಾಗಿ ಗೋಮಾಂಸ ತಿನ್ನುವ ದೃಶ್ಯವು ಸೋಷಿಯಲ್ ಮೀಡಿಯಾಗಳಲ್ಲಿ ಹೊಸ ಟ್ರೋಲ್, ಮೀಮ್ಸ್‌ಗಳನ್ನು ಸೃಷ್ಟಿ ಮಾಡಿದೆ. ಯೂಟ್ಯೂಬ್ ನಿಂದ ಇನ್‌ಸ್ಟಾಗ್ರಾಮ್ ರೀಲ್‌ಗಳ ವರೆಗೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವೇ ಸದ್ದು ಮಾಡುತ್ತಿದೆ. ಕೇರಳ 2 ಸ್ಟೋರಿಯು 2023ರಲ್ಲಿ ಬಿಡುಗಡೆಯಾದ ದಿ ಕೇರಳ ಸ್ಟೋರಿ ಚಿತ್ರದ ಮುಂದುವರಿದ ಭಾಗವಾಗಿದೆ. ಮೊದಲು ಬಿಡುಗಡೆಯಾದ ಕೇರಳ ಸ್ಟೋರಿಗೂ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈಗಲೂ ವಿರೋಧ ವ್ಯಕ್ತವಾಗುತ್ತಿದೆ.

Viral Beef Scene in The Kerala Story 2 Teaser Triggers Nationwide Debate Kannadigas support malayalis

ದಿ ಕೇರಳ 2 ಸ್ಟೋರಿಯ ಟೀಸರ್‌ನಲ್ಲಿ ಪ್ರಮುಖ ಪಾತ್ರಧಾರಿಯು ಬೀಫ್ ತಿನ್ನಲು ಒತ್ತಾಯಿಸುವ ಒಂದು ದೃಶ್ಯವು ವೈರಲ್ ಆಗಿದೆ. ಅನೇಕ ಮಲಯಾಳಿ ವೀಕ್ಷಕರು ಕೇರಳದ ಜನಪ್ರಿಯ ಆಹಾರವಾದ ಬೀಫ್ ಸೇವನೆ ಮಾಡುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಇದು ಟ್ರೋಲ್‌ಗೂ ಕಾರಣವಾಗಿದೆ. ಪರೋಟ ಇಲ್ಲದೆ ಹೇಗೆ ಬೀಫ್ ಸೇವಿಸುವುದು, ಕೇರಳದಲ್ಲಿ ಹೆಚ್ಚಿನ ಜನರ ನೆಚ್ಚಿನ ಆಹಾರವೆಂದರೆ ಪರೋಟ ಮತ್ತು ಗೋಮಾಂಸ. ಯಾರಾದರೂ ನನ್ನನ್ನು ಗೋಮಾಂಸ ತಿನ್ನಲು ಒತ್ತಾಯಿಸಿದರೆ, ನಾನು ಒಂದೇ ಒಂದು ವಿಷಯವನ್ನು ಕೇಳುತ್ತೇನೆ. ಅದರಲ್ಲಿ ತೆಂಗಿನಕಾಯಿ ತುಂಡುಗಳಿವೆಯೇ ಎನ್ನುವ ಟ್ರೋಲ್‌ಗಳು ಟ್ರೆಂಡ್ ಆಗಿವೆ.

ಉತ್ತರ ಭಾರತೀಯರ ಟ್ರೋಲ್

ಇನ್ನು ಕೇರಳ ಸ್ಟೋರಿ 2 ಚರ್ಚೆ ಆಗುತ್ತಿರುವಾಗಲೇ ಕೇರಳಿಗರು ಹಾಗೂ ಕೆಲವು ದಕ್ಷಿಣ ಭಾರತೀಯರು ಉತ್ತರ ಭಾರತೀಯರನ್ನು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಕೇರಳದ ಸ್ಟೋರಿ ತಿರುಗುಬಾಣವಾದಂತೆ ಕಾಣುತ್ತಿದೆ ಎಂದು ಉತ್ತರ ಭಾರತೀಯರು ಗುಟ್ಕಾ ಸೇವಿಸುವುದನ್ನು ಟ್ರೋಲ್ ಮಾಡಲಾಗುತ್ತಿದೆ.

ಕನ್ನಡಿಗರಿಂದಲೂ ಬೆಂಬಲ

ಕೇರಳವನ್ನು ರಾಜಕೀಯ ಅಜೆಂಡಾಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಜನರು ಕುರಿ ಮಾಂಸ ತಿನ್ನುವುದನ್ನು ತೋರಿಸುವ ಚಲನಚಿತ್ರಗಳನ್ನು ನೀವು ಸಹಿಸಿಕೊಳ್ಳಬಲ್ಲಿರಾದರೆ, ಗೋಮಾಂಸ ತಿನ್ನುವುದನ್ನು ನೋಡಿ ನಿಮಗೆ ಏಕೆ ನೋವುಂಟಾಗುತ್ತದೆ ? ಕುರಿಗಿಂತ ಹಸು ಏಕೆ ಪವಿತ್ರ. ಒಬ್ಬ ಕನ್ನಡಿಗ ಹಿಂದೂವಾಗಿ, ಮಲಯಾಳಿಗಳು ಗೋಮಾಂಸ ತಿನ್ನುವುದನ್ನು ನೋಡಿ ನನಗೆ ನೋವಾಗುವುದಿಲ್ಲ. ಅದು ಅವರ ಆಹಾರ ಪದ್ಧತಿ ಎಂದು Ethnic Kannadiga ಎನ್ನುವ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಕೇರಳ ಸ್ಟೋರಿ 2ರ ವಿರುದ್ಧದ ಈ ಗೋಮಾಂಸ ಸೇವಿಸುವ ಪ್ರತಿಭಟನೆಯಿಂದ ಹಿಂದೆ ಸರಿಯಬೇಕು. ಇದೇ ಅವರಿಗೆ ಬೇಕಾಗಿರುವುದು. ಇದು ದೊಡ್ಡ ಸಮಸ್ಯೆಯಾಗಬೇಕೆಂದು ಅವರು ಬಯಸುತ್ತಾರೆ. ಆದ್ದರಿಂದ ಅವರು ಉಚಿತ ಪ್ರಚಾರವನ್ನು ಪಡೆಯುತ್ತಿದ್ದಾರೆ. ನೀವು ಬಲೆಗೆ ಬೀಳುತ್ತಿದ್ದೀರಿ. ಗೋಮಾಂಸವನ್ನು ಹೊರತುಪಡಿಸಿ ಕೇರಳದ ಬಗ್ಗೆ ತೋರಿಸಲು ಬಹಳಷ್ಟು ಇದೆ. ಗೋಮಾಂಸ ಮತ್ತು ಕೇರಳ ಸ್ಟೋರಿಯ ಬಗ್ಗೆ ಈಗ ಮಾತನಾಡುವುದನ್ನು ನಿಲ್ಲಿಸಿ. ಅವರಿಗೆ ಜಾಗ ಕೊಡಬೇಡಿ ಎಂದೂ ಕೆಲವು ಕನ್ನಡಿಗರು ಹೇಳಿದ್ದಾರೆ.

ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್ ಏನಿದು ವಿವಾದ

ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್ (The Kerala Story 2: Goes Beyond) ಸಿನಿಮಾವು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. 2023ರಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆಯಾಗಿತ್ತು. ಇದು ಮತಾಂತರ ಮತ್ತು ಐಸಿಸ್ (ISIS) ಉಗ್ರಗಾಮಿ ಸಂಘಟನೆಯ ಸೇರ್ಪಡೆಯ ಬಗ್ಗೆಯಾಗಿತ್ತು. ಇದರ ಮುಂದುವರಿದ ಭಾಗ ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್ ಆಗಿದೆ.

ಗೋಮಾಂಸ ಸೇವನೆಯ ದೃಶ್ಯ ವಿವಾದ

ಇನ್ನು ಈ ಸಿನಿಮಾದ ಟೀಸರ್‌ನಲ್ಲಿ ಪ್ರಮುಖ ಪಾತ್ರಧಾರಿಗೆ ಒತ್ತಾಯಪೂರ್ವಕವಾಗಿ ಗೋಮಾಂಸ (Beef) ತಿನ್ನಿಸುವ ದೃಶ್ಯ ಇದೆ. ಇದು ಕೇರಳಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕೇರಳದಲ್ಲಿ ಗೋಮಾಂಸ ಸೇವನೆಯು ಒಂದು ಸಾಮಾನ್ಯ ಆಹಾರ ಪದ್ಧತಿಯಾಗಿದೆ. ಆದರೆ, ಇದನ್ನು ಯಾವುದೇ ಒಂದು ಧರ್ಮಕ್ಕೆ ಅಥವಾ ಒತ್ತಾಯದ ಮತಾಂತರದ ಪ್ರಕ್ರಿಯೆಗೆ ಸೇರಿಸುವುದು ರಾಜಕೀಯ ಅಜೆಂಡಾವನ್ನು ಒಳಗೊಂಡಿದೆ ಎಂದು ಮಲಯಾಳಿಗಳು ವಿರೋಧಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+