ವಿಡಿಯೋ: ತೆಲಂಗಾಣದಲ್ಲಿ ಚಾಟಿ ಬೀಸಿ ಬೋನಾಲು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ
ಹೈದರಾಬಾದ್, ನವೆಂಬರ್ 03; ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ 57 ನೇ ದಿನಕ್ಕೆ ಕಾಲಿಟ್ಟಿದೆ. ಈ ದಿನ ರಾಹುಲ್ ಗಾಂಧಿ ಅವರು ತೆಲಂಗಾಣದ ಸಾಂಪ್ರದಾಯಿಕ ಬೋನಾಲು ಹಬ್ಬದಲ್ಲಿ ಭಾಗವಹಿಸಿದರು. ಬುಧವಾರ 'ಪೋತರಾಜು' ಭಾರವಾದ ಹಗ್ಗವನ್ನು ಎತ್ತಿಕೊಂಡು ಸ್ವತಃ ಚಾಟಿ ಬೀಸುವ ವಿಡಿಯೋ ವೈರಲ್ ಆಗಿದೆ.
ಬೋನಾಲು ಹಬ್ಬದ ಪ್ರಮುಖ ವ್ಯಕ್ತಿಯಾದ ಪೋತರಾಜು ಮಹಾಂಕಾಳಿ ದೇವಿಯ ಭಯಂಕರ ಸಹೋದರನಾಗಿದ್ದು ದೇವಿಯನ್ನು ರಕ್ಷಿಸಲು ಚಾವಟಿಯನ್ನು ಹಿಡಿಯುತ್ತಾನೆ.
ಬೋನಾಲು ಸಮಯದಲ್ಲಿ ಹಬ್ಬದ ಸಮಯದಲ್ಲಿ ಮಹಿಳೆಯರು 'ಪೋತರಾಜು' ಅವತಾರದ ಪುರುಷರೊಂದಿಗೆ ದೇವಸ್ಥಾನಗಳಿಗೆ ಮೆರವಣಿಗೆಯಲ್ಲಿ ನಡೆದುಕೊಂಡು ಹೋಗುತ್ತಾರೆ. 'ಪೋತರಾಜು' ಅವತಾರದ ಪುರುಷ ಜೋರಾಗಿ ಡೋಲು ಬಾರಿಸುತ್ತಿದ್ದಂತೆ ಮೈಯಿಗೆ ಚಾವಟಿಯಿಂದ ಹೊಡೆದುಕೊಂಡು ಹಿಂಸಾತ್ಮಕವಾಗಿ ನೃತ್ಯ ಮಾಡುತ್ತಾರೆ. ಪೋತರಾಜು ಏಳು ಸಹೋದರಿ ದೇವತೆಗಳ ಸಹೋದರ ಎಂದು ಪರಿಗಣಿಸಲಾಗಿದೆ. ಇವು ಮಹಾಂಕಾಳಿ ದೇವಿಯ ವಿವಿಧ ರೂಪಗಳಾಗಿವೆ.

ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು ನವೆಂಬರ್ 7 ರಂದು ಮಹಾರಾಷ್ಟ್ರವನ್ನು ಪ್ರವೇಶಿಸಲಿದೆ. ಈಗಾಗಲೇ ತೆಲಂಗಾಣದಲ್ಲಿ ಒಟ್ಟು 375 ಕಿಮೀ ದೂರವನ್ನು ವ್ಯಾಪಿಸಿದೆ. ತೆಲಂಗಾಣ 19 ಅಸೆಂಬ್ಲಿ ಮತ್ತು 7 ಸಂಸದೀಯ ಕ್ಷೇತ್ರಗಳನ್ನು ಒಳಗೊಂಡಿದೆ. ಯಾತ್ರೆಗೆ ನವೆಂಬರ್ 4 ರಂದು ಒಂದು ದಿನದ ವಿರಾಮವನ್ನು ನೀಡಲಾಗುತ್ತದೆ.
ರಾಜ್ಯದಲ್ಲಿ ಪಕ್ಷದ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರು ಬುದ್ಧಿಜೀವಿಗಳು, ಕ್ರೀಡೆ, ವ್ಯಾಪಾರ ಮತ್ತು ಮನರಂಜನಾ ಕ್ಷೇತ್ರದ ವ್ಯಕ್ತಿಗಳು ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ. ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಕಳೆದ ವಾರ ಯಾತ್ರೆಯ ತೆಲಂಗಾಣ ಹಂತವನ್ನು ಪ್ರಾರಂಭಿಸುವ ಮೊದಲು ರಾಹುಲ್ ಗಾಂಧಿ ಕೇರಳ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಯಾತ್ರೆ ಪೂರ್ಣಗೊಳಿಸಿದರು. ಯಾತ್ರೆಯನ್ನು ಸಂಘಟಿಸಲು ತೆಲಂಗಾಣ ರಾಜ್ಯ ಕಾಂಗ್ರೆಸ್ 10 ವಿಶೇಷ ಸಮಿತಿಗಳನ್ನು ರಚಿಸಿದೆ.

ನಟಿ-ಚಿತ್ರ ನಿರ್ಮಾಪಕಿ ಪೂಜಾ ಭಟ್ ಬುಧವಾರ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಈ ಮೂಲಕ ನಟಿ-ಚಿತ್ರ ನಿರ್ಮಾಪಕಿ ಪೂಜಾ ಭಟ್ ಯಾತ್ರೆಗೆ ಸೇರಿದ ಮೊದಲ ಬಾಲಿವುಡ್ ಸೆಲೆಬ್ರಿಟಿ ಆಗಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸುತ್ತಾ ಪೂಜಾ ಭಟ್ ನಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಗಾಂಧಿಯವರೊಂದಿಗೆ ಪೂಜಾ ಭಟ್ ವೇಗವಾಗಿ ಸ್ವಲ್ಪ ದೂರ ನಡೆಯುತ್ತಿದ್ದಂತೆ ಜನರು ಹರ್ಷೋದ್ಗಾರ ಮಾಡಿದರು.












Click it and Unblock the Notifications