ವಿಡಿಯೋ: ಮಹಾಬಲೇಶ್ವರದ ಮಹಿಳೆಯ ಮಧುರ ಕಂಠಕ್ಕೆ ಮಾರು ಹೋದ ನೆಟ್ಟಿಗರು
ನಮ್ಮ ದೇಶದಲ್ಲಿ ಪ್ರತಿಭೆಗಳ ಕೊರತೆಯಿಲ್ಲ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಕ್ಕೆ ಸುಲಭ ಪ್ರವೇಶದೊಂದಿಗೆ ಪ್ರತಿಭಾವಂತ ವ್ಯಕ್ತಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಪಡೆಯುತ್ತಿದ್ದಾರೆ. ಸದ್ಯ ಮಹಾಬಲೇಶ್ವರದ ಬೀದಿಗಳಲ್ಲಿ ಮಹಿಳೆಯೊಬ್ಬರು ಲತಾ ಮಂಗೇಶ್ಕರ್ ಅವರ 'ಸುನೋ ಸಜ್ನಾ ಪಾಪಿಹೆ ನೇ' ಹಾಡನ್ನು ಹಾಡುವ ವೀಡಿಯೊ ಆನ್‌ಲೈನ್‌ನಲ್ಲಿ ಅಧಿಕವಾಗಿ ವೈರಲ್ ಆಗುತ್ತಿದೆ. ನೀವು ಸಂಗೀತ ಪ್ರೇಮಿಯಾಗಿದ್ದರೆ, ಮಹಿಳೆ ಹಾಡುವ ಈ ವಿಡಿಯೊವನ್ನು ನೀವು ಖಂಡಿತವಾಗಿ ಇಷ್ಟಪಡುತ್ತೀರಿ.
ಈ ವೈರಲ್ ವಿಡಿಯೊವನ್ನು ಸೈಯದ್ ಸಲ್ಮಾನ್ ಎಂಬ ಬಳಕೆದಾರರು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಕಿರು ಕ್ಲಿಪ್‌ನಲ್ಲಿ, ಮಹಿಳೆಯು 1966 ರ 'ಆಯೆ ದಿನ್ ಬಹಾರ್' ಚಿತ್ರದ ಹಾಡನ್ನು ಹಾಡುತ್ತಿರುವುದನ್ನು ಕಾಣಬಹುದು. ಆಕೆಯ ಧ್ವನಿಯು ಎಷ್ಟು ಮಧುರವಾಗಿದೆ ಎಂದರೆ ಅದು ಮನಸ್ಸನ್ನು ಶಾಂತಗೊಳಿಸುವುದರಲ್ಲಿ ಅನುಮಾನವೇ ಇಲ್ಲ.

ಮಹಾಬಲೇಶ್ವರದ ಪಂಚಗಣಿಯಲ್ಲಿರುವ ಪಾರ್ಸಿ ಪಾಯಿಂಟ್ ಬಳಿ ಮಹಿಳೆ ನಿಂತು ಹಾಡುತ್ತಿರುವ ವೈರಲ್ ವಿಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ 600ಕೆ ಬಾರಿ ವೀಕ್ಷಿಸಲಾಗಿದೆ. ಜನರು ಆಕೆಯ ಧ್ವನಿಯಿಂದ ಪ್ರಭಾವಿತರಾಗಿದ್ದಾರೆ. "ಶುದ್ಧ್ ಟ್ಯಾಲೆಂಟ್", "ಅದ್ಭುತ ಧ್ವನಿ", "This lady nailed it" ಮತ್ತು ಇನ್ನೂ ಅನೇಕ ಕಾಮೆಂಟ್‌ಗಳ ಮೂಲಕ ಅವರನ್ನು ಹೊಗಳಿದ್ದಾರೆ.












Click it and Unblock the Notifications