Video: 'ಭಾರತ್ ಮಾತಾ ಕೀ' ಜೈ.., 'ಮೋದಿ ಜೀ ಕೀ' ಸೈಲೆಂಟ್..!
ನವದೆಹಲಿ, ಮಾರ್ಚ್ 3: ಉಕ್ರೇನ್ ಯುದ್ಧ ಭೂಮಿಯಿಂದ ಭಾರತಕ್ಕೆ ಆಗಮಿಸಿದ ವಿದ್ಯಾರ್ಥಿಗಳಲ್ಲಿ ಹರ್ಷೋದ್ಘಾರ. ದೇಶಕ್ಕೆ ಮರಳಿದ ಸಂತಸದಲ್ಲಿ ಭಾರತ್ ಮಾತಾ ಕೀ ಜೈ.. ಭಾರತ್ ಮಾತಾ ಕೀ ಜೈ.. ಎಂದು ಘೋಷಣೆ ಕೂಗುತ್ತಾ ಸಂಭ್ರಮಿಸುತ್ತಿದ್ದ ವಿದ್ಯಾರ್ಥಿಗಳು ಮೋದಿ ಜೀ ಕೀ ಎಂದಾಕ್ಷಣ ಮೌನಕ್ಕೆ ಶರಣಾಗಿ ಬಿಟ್ಟರು.
ಮೋದಿ ಜೀ ಕೀ ಎಂಬ ಘೋಷಣೆಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡದೇ ವಿದ್ಯಾರ್ಥಿಗಳು ಮೌನವಾಗಿ ನಿಂತುಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಳೆದ 24 ಗಂಟೆಗಳಲ್ಲಿ ಉಕ್ರೇನ್‌ನಿಂದ 15 ವಿಮಾನಗಳಲ್ಲಿ 3,000 ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ಸರ್ಕಾರ ಹೇಳಿದೆ. "ಆಪರೇಷನ್ ಗಂಗಾ" ಕಾರ್ಯಾಚರಣೆ ಅಡಿಯಲ್ಲಿ ವಿದ್ಯಾರ್ಥಿಗಳನ್ನು ಮನೆಗೆ ತಲುಪಿಸಲು ಹೆಚ್ಚಿನ ವಿಮಾನಗಳನ್ನು ನಿಗದಿಪಡಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಜೋಕ್:
ವಿರೋಧ ಪಕ್ಷಗಳು ಉಪ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿವೆ. ನರೇಂದ್ರ ಮೋದಿಯವರ PR ಕುಸಿದಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ. ನರೇಂದ್ರ ಮೋದಿಯವರು ವಿದ್ಯಾವಂತರು ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಅವರಿಗೆ ಜೈ ಎನ್ನುತ್ತಿಲ್ಲ ಎಂದು ಲೇವಡಿ ಮಾಡಲಾಗುತ್ತಿದೆ.
ಕೇಂದ್ರ ಸರ್ಕಾರವನ್ನು ಟೀಕಿಸಿದ ವಿದ್ಯಾರ್ಥಿ:
ಕಳೆದ ಏಳು ದಿನಗಳಿಂದ ಉಕ್ರೇನ್‌ನ ಸುಮಿಯಲ್ಲಿ ಸಿಕ್ಕಿಬಿದ್ದಿದ್ದು, ಭಾರತೀಯ ರಾಯಭಾರಿ ಕಚೇರಿ ತಮ್ಮನ್ನು ರಕ್ಷಿಸಲು ಏನೂ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಮೆಹ್ತಾಬ್ ಎಂಬ ವಿದ್ಯಾರ್ಥಿ, ತುರ್ತು ಪರಿಸ್ಥಿತಿಯಲ್ಲಿ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅಧಿಕಾರಿಗಳು ಸ್ಪಂದಿಸಲಿಲ್ಲ ಎಂದು ದೂಷಿಸಿದ್ದಾರೆ. ಪೋಷಕರು ಫೋನ್‌ನಲ್ಲಿ ಅಳುತ್ತಿದ್ದಾರೆ. ನಾವು ಸುಮಿಯನ್ನು ಪ್ರೀತಿಸುತ್ತಿದ್ದೆವು. ನಾವು ಉಕ್ರೇನ್‌ನ ಪೂರ್ವ ಭಾಗದಲ್ಲಿದ್ದೇವೆ. ಏಳು ದಿನಗಳಿಂದ ಹೀಗೆಯೇ ಇದೆ. ಯಾರೂ ಸಹಾಯ ಮಾಡುತ್ತಿಲ್ಲ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.












Click it and Unblock the Notifications