ಆಂಧ್ರಪ್ರದೇಶ: ಟಿಡಿಪಿ ನಾಯಕನ ಮೇಲೆ ಪೂಜಾರಿ ವೇಷಧಾರಿಯಿಂದ ಭೀಕರ ದಾಳಿ
ಕಾಕಿನಾಡ ನವೆಂಬರ್ 17: ತೆಲುಗು ದೇಶಂ ಪಕ್ಷದ ಮುಖಂಡ ಹಾಗೂ ಮಾಜಿ ಸಂಸದ ಶೇಷಗಿರಿರಾವ್ ಪೋಲ್ನಾಟಿ ಅವರ ಮೇಲೆ ಪೂಜಾರಿ ವೇಷಧಾರಿ ವ್ಯಕ್ತಿಯೊಬ್ಬ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ. ನವೆಂಬರ್ 17ರ ಗುರುವಾರ ಬೆಳಗ್ಗೆ 6.30ಕ್ಕೆ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.
ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ತುನಿ ನಗರದ ಶೇಷಗಿರಿ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ. ದಾಳಿಕೋರನ ಗುರುತು ಪತ್ತೆ ಹಚ್ಚಲು ಪೊಲೀಸ್ ಅಧಿಕಾರಿಗಳು ಇನ್ನೂ ಮುಂದಾಗಿಲ್ಲ. ಇದರಿಂದ ಪೊಲೀಸರ ವಿರುದ್ಧ ಕುಡುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

"ಗುರುವಾರ ಬೆಳಿಗ್ಗೆ 6:30 ರ ಸುಮಾರಿಗೆ, ಪುರೋಹಿತರಂತೆ ವೇಷಧರಿಸಿದ ವ್ಯಕ್ತಿಯೊಬ್ಬರು ಟಿಡಿಪಿ ಮುಖಂಡ ಮತ್ತು ಮಾಜಿ ಸಂಸದ ಶೇಷಗಿರಿರಾವ್ ಪೋಲ್ನಾಟಿ ಅವರ ಮನೆಗೆ ನುಗ್ಗಿ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ. ಹಲ್ಲೆಯ ಬಳಿಕ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತ್ತೆಯ ಕಾರ್ಯ ನಡೆದಿದೆ'' ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications