ರಾಮ್ ರಹೀಮ್ ವಿರುದ್ಧ ಪತ್ರಕರ್ತನ ಹತ್ಯೆ ಪ್ರಕರಣ: ಇಂದು ತೀರ್ಪು
ಸಿರ್ಸಾ, ಜನವರಿ 11: ಪತ್ರಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಅವರ ವಿರುದ್ಧ ಕೇಳಿಬಂದ ದೂರಿನ ತೀರ್ಪನ್ನು ಹರ್ಯಾಣದ ಪಂಚಕುಳ ನ್ಯಾಯಾಲಯ ಶುಕ್ರವಾರ ಪ್ರಕಟಿಸಲಿದೆ.
ತೀರ್ಪಿನ ನಿಮಿತ್ತ ಇಂದು ಹರ್ಯಾಣದ ಸಿರ್ಸಾ ಮತ್ತು ಪಂಚಕುಳದಲ್ಲಿ ಬಿಗಿಬಂದೋಬಸ್ತ್ ನಿಯೋಜಿಸಲಾಗಿದೆ. 51 ವರ್ಷ ವಯಸ್ಸಿನ ರಾಮ್ ರಹೀಮ್ ಸದ್ಯಕ್ಕೆ ರೋಹ್ಟಕ್ ನ ಸುನಾರಿಯಾ ಜೈಲಿನಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಪತ್ರಕರ್ತ ರಾಮಚಂದ್ರ ಛತ್ರಪತಿ ಎಂಬುವವರನ್ನು ಪಿತೂರಿ ಮಾಡಿ ಕೊಲೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಾಮ್ ರಹೀಮ್ ಇಂದು ಪಂಚಕುಳ ಕೋರ್ಟಿನಲ್ಲಿ ವಿಡಿಯೋ ಕಾನ್ಫಿರೆನ್ಸ್ ಮೂಲಕ ಮಾತನಾಡಲಿದ್ದಾರೆ.

ಡೇರಾ ಸಚ್ಛಾ ಸೌಧ ಆಶ್ರಮಗಳಲ್ಲಿ ಪುರುಷತ್ವ ಹರಣ ಮಾಡಲಾಗುತ್ತಿದೆ ಎಂಬ ಆರೋಪ ಹೊರೆಸಿ ಹಾಕಲಾಗಿದ್ದ ಪ್ರಕರಣ(castration case) ದಲ್ಲಿಇತ್ತೀಚೆಗೆ ರಾಮ್ ರಹೀಮ್ ಗೆ ಜಾಮೀನು ಸಿಕ್ಕಿತ್ತು.











Click it and Unblock the Notifications