Get Updates
Get notified of breaking news, exclusive insights, and must-see stories!

Vehicle: ವಾಹನಗಳ ಅಪಘಾತ ತಪ್ಪಿಸಲು ಹೊಸ ತಂತ್ರಜ್ಞಾನ: 2026ರಿಂದಲೇ ಎಲ್ಲಾ ವಾಹನಗಳಲ್ಲೂ ಫಿಕ್ಸ್‌

ನವದೆಹಲಿ: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತದ ಸಂಖ್ಯೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಅಪಘಾತಗಳ ಪ್ರಮಾಣ ತೀವ್ರ ಹೆಚ್ಚಳವಾಗಿದೆ. ಇದೀಗ ಕೇಂದ್ರ ಸರ್ಕಾರವು ದೇಶದಲ್ಲಿ ವಾಹನಗಳಿಂದ ಉಂಟಾಗುವ ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ವೆಹಿಕಲ್ ಟು ವೆಹಿಕಲ್ (ವಿ - ಟು - ವಿ) ಎಂಬ ತಂತ್ರಜ್ಞಾನವನ್ನು ವಾಹನಗಳಲ್ಲಿ ಅಳವಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಲು ಮುಂದಾಗಿದೆ. ಏನಿದು ಹೊಸ ಯೋಜನೆ ಹಾಗೂ ವಾಹನ ಅಪಘಾತವನ್ನು ತಪ್ಪಿಸಲು ಇದು ಹೇಗೆ ಸಹಕಾರಿ ಆಗಲಿದೆ ಎನ್ನುವ ವಿವರ ಇಲ್ಲಿದೆ.

ಕೇಂದ್ರ ಸರ್ಕಾರವು 2026ರ ಅಂತ್ಯದ ವೇಳೆಗೆ ವೆಹಿಕಲ್ ಟು ವೆಹಿಕಲ್ ಸಂವಹನ ತಂತ್ರಜ್ಞಾನವನ್ನು ಜಾರಿಗೆ ತರಲು ಮುಂದಾಗಿದೆ. ಈ ವ್ಯವಸ್ಥೆಯು ವಾಹನಗಳಲ್ಲಿ ನೆಟ್‌ವರ್ಕ್ ಅಗತ್ಯವಿಲ್ಲದೆಯೂ ಕಾರ್ಯ ನಿರ್ವಹಿಸಲಿದೆ. ವಾಹನಗಳಲ್ಲಿ ವೆಹಿಕಲ್ ಟು ವೆಹಿಕಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗಲಿದ್ದು, ಸುಗಮ ವಾಹನ ಸಂಚಾರಕ್ಕೂ ಅನುಕೂಲವಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.

Vehicle-to-Vehicle Technology to Prevent Accidents New Safety System to Be Mandatory in All Vehicles from 2026

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯ ರಸ್ತೆ ಸಾರಿಗೆ ಸಚಿವರೊಂದಿಗಿನ ವಾರ್ಷಿಕ ಸಭೆಯ ನಂತರ ಈ ಹೊಸ ತಂತ್ರಜ್ಞಾನ ಬಳಕೆಯ ಬಗ್ಗೆ ಅಪ್ಡೇಟ್ಸ್‌ ಕೊಟ್ಟಿದ್ದಾರೆ. ಸಭೆಯಲ್ಲಿ ಹೊಸ ತಂತ್ರಜ್ಞಾನದ ಬಗ್ಗೆ ಚರ್ಚೆ ಮಾಡಲಾಗಿದೆ. ಅಲ್ಲದೇ ಈ ತಂತ್ರಜ್ಞಾನ ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಏನಿದು ವೆಹಿಕಲ್ ಟು ವೆಹಿಕಲ್ ತಂತ್ರಜ್ಞಾನ

ಎಲ್ಲಾ ವಾಹನಗಳಲ್ಲೂ 5 ಗಿಗಾ ಹರ್ಟ್ಸ್‌ ರೇಡಿಯೋ ತರಂಗಗಳನ್ನು ಹೊರಡಿಸುವ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಇದರಿಂದ ತರಂಗಗಳು ಹೊರಹೊಮ್ಮಿ ಸುತ್ತಲೂ ಮತ್ತೊಂದು ವಾಹನದೊಂದಿಗೆ ಕಮ್ಯುನಿಕೇಷನ್ ನಡೆಯುತ್ತದೆ. ಮುಖ್ಯವಾಗಿ ಈ ತಂತ್ರಜ್ಞಾನಕ್ಕೆ ಯಾವುದೇ ನೆಟ್‌ವರ್ಕ್ ಅಥವಾ ಸಿಮ್‌ನ ಅವಶ್ಯಕತೆ ಇರುವುದಿಲ್ಲ. ನೀವು ವಾಹನ ಚಾಲನೆ ಮಾಡುವಾಗ ಯಾವುದಾದರೂ ವಾಹನಗಳು ಅಡ್ಡ ಅಥವಾ ತೀರ ಹತ್ತಿರಕ್ಕೆ ಬಂದರೆ ನಿಮಗೆ (ವಾಹನ ಚಾಲಕರಿಗೆ) ಎಚ್ಚರಿಕೆ ಕೊಡಲಿದೆ. ಇದರಿಂದ ವಾಹನ ಚಲಾಯಿಸುತ್ತಿರುವ ಚಾಲಕರಿಗೆ ಅಪಘಾತವನ್ನು ತಪ್ಪಿಸಲು ಹೆಚ್ಚು ಸಮಯ ಸಿಗಲಿದೆ. ತುರ್ತಾಗಿ ವಾಹನ ಅಪಘಾತವಾಗುವುದನ್ನು ತಪ್ಪಿಸಲು ಸಾಧ್ಯವಿದೆ.

ಈ ತಂತ್ರಜ್ಞಾನವು ನಿಲ್ಲಿಸಲಾಗಿರುವ ವಾಹನಗಳು ಮತ್ತು ಹಿಂದಿನಿಂದ ವೇಗವಾಗಿ ಚಲಿಸುವ ವಾಹನಗಳಲ್ಲಿ ಆಗುತ್ತಿರುವ ಅಪಘಾತಗಳನ್ನು ತಪ್ಪಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ಚಳಿಗಾಲದಲ್ಲಿ ದಟ್ಟವಾದ ಮಂಜಿನಿಂದ ಆಗುತ್ತಿರುವ ವಾಹನ ಅಪಘಾತಗಳ ಸಂಖ್ಯೆಯೂ ಇಳಿಕೆಯಾಗಲಿದೆ.

ಬಸ್‌ಗಳ ಅಪಘಾತ ತಪ್ಪಿಸಲು ಕ್ರಮ

ಇನ್ನು ದೇಶದಾದ್ಯಂತ ಇತ್ತೀಚಿನ ದಿನಗಳಲ್ಲಿ ಬಸ್ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ತಪ್ಪಿಸಲು ಕ್ರಮ ವಹಿಸುವುದಾಗಿ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. ಬಸ್‌ಗಳ ಕಳಪೆ ವಿನ್ಯಾಸದಿಂದಾಗಿ ಕನಿಷ್ಠ ಆರು ಪ್ರಮುಖ ಅಪಘಾತಗಳು ಕರ್ನಾಟಕದಲ್ಲಿ ಸಂಭವಿಸಿದ್ದು, 135 ಜನ ಸಾವನ್ನಪ್ಪಿದ್ದಾರೆ. ಈಗಾಗಲೇ ಅಸ್ತಿತ್ವದಲ್ಲಿರುವ ಬಸ್‌ಗಳಲ್ಲಿ ಬೆಂಕಿ ನಂದಿಸುವ ಸಾಧನಗಳು, ಚಾಲಕರಿಗೆ ಅರೆನಿದ್ರಾವಸ್ಥೆ ಪತ್ತೆ ತಂತ್ರಜ್ಞಾನ ಮತ್ತು ಪ್ರಯಾಣಿಕರಿಗೆ ತುರ್ತು ಸುತ್ತಿಗೆ ವ್ಯವಸ್ಥೆ ಸೇರಿದಂತೆ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ವಿ.ಉಮಾಶಂಕರ್ ಅವರು ಮಾತನಾಡಿ, ಈ ಉಪಕ್ರಮವನ್ನು ರಸ್ತೆ ಸುರಕ್ಷತೆಯತ್ತ ಪ್ರಮುಖ ಹೆಜ್ಜೆ ಎಂದು ಹೇಳಿದ್ದಾರೆ. ಈ ತಂತ್ರಜ್ಞಾನವು ಜಗತ್ತಿನ ಕೆಲವೇ ದೇಶಗಳಲ್ಲಿ ಬಳಕೆಯಲ್ಲಿದೆ. ಅಲ್ಲದೇ ಈ ಯೋಜನೆಗೆ ಅಂದಾಜು 5,000 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+