• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎಲ್, ಆರ್‌ಸಿ ಅವಧಿ ವಿಸ್ತರಿಸಿ ಕೇಂದ್ರ ಸರ್ಕಾರದ ಆದೇಶ

|
Google Oneindia Kannada News

ನವದೆಹಲಿ, ಮಾರ್ಚ್ 26: ವಾಹನಗಳ ಚಾಲನಾ ಪರವಾನಗಿ, ಫಿಟ್ನೆಸ್ ಪ್ರಮಾಣಪತ್ರ, ನೋಂದಣಿ ಪ್ರಮಾಣ ಪತ್ರ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ದಾಖಲೆಗಳ ಮಾನ್ಯತೆಯನ್ನು ಜೂನ್ 30, 2021ರವರೆಗೂ ವಿಸ್ತರಿಸಿರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಕೊರೊನಾ ಕಾರಣದಿಂದಾಗಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.

ಡಿಎಲ್, ಪರವಾನಗಿ, ನೋಂದಣಿ, ಮರು ನೋಂದಣಿ ಹೀಗೆ ವಾಹನಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳ ಅವಧಿ ಮುಗಿದಿದ್ದರೂ ಆ ದಾಖಲೆಗಳನ್ನು ಜೂನ್ 31ರವರೆಗೂ ಮಾನ್ಯತೆ ನೀಡಿ ಎಂದು ಪ್ರತಿ ರಾಜ್ಯಗಳಿಗೂ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ನೀಡಿದೆ. ಮುಂದೆ ಓದಿ...

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ: ಇಂದಿನಿಂದ ಹೊಸ ನಿಯಮ ಜಾರಿ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ: ಇಂದಿನಿಂದ ಹೊಸ ನಿಯಮ ಜಾರಿ

 ಅವಧಿ ಮುಗಿದಿರುವ ದಾಖಲೆಗಳ ಮಾನ್ಯತೆ

ಅವಧಿ ಮುಗಿದಿರುವ ದಾಖಲೆಗಳ ಮಾನ್ಯತೆ

ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿರುವ ಕಾರಣ ಈ ನಿರ್ಣಯ ತೆಗೆದುಕೊಂಡಿದ್ದು, ಫೆಬ್ರವರಿ 1, 2020ರ ಬಳಿಕ ಅವಧಿ ಮುಗಿದಿರುವ ಹಾಗೂ ಕೊರೊನಾ ಲಾಕ್‌ಡೌನ್ ಕಾರಣವಾಗಿ ಈ ದಾಖಲೆಗಳನ್ನು ನವೀಕರಣಗೊಳಿಸಲು ಸಾಧ್ಯವಾಗಿರದ ದಾಖಲೆಗಳನ್ನು ಜೂನ್ 30ರವರೆಗೂ ಅವಧಿ ವಿಸ್ತರಣೆ ಮಾಡಲು ಸೂಚಿಸಿದೆ.

"ಸಾರ್ವಜನಿಕರಿಗ ತೊಂದರೆಯಾಗಬಾರದು"

ವಾಹನಕ್ಕೆ ಸಂಬಂಧಿಸಿದ ದಾಖಲೆಗಳ ಅವಧಿಯನ್ನು ವಿಸ್ತರಿಸಲಾಗಿದ್ದು, ಸಾರಿಗೆ ಸಂಬಂಧ ಸೇವೆಗಳಲ್ಲಿ ವ್ಯತ್ಯಯವಾಗಬಾರದು. ಇದರಿಂದ ಸಾರ್ವಜನಿಕರಿಗೆ, ಸಾರಿಗೆ ಸೇವೆ ಸಲ್ಲಿಸುವವರಿಗೆ ಯಾವುದೇ ಸಮಸ್ಯೆಯಾಗಬಾರದು ಎಂದು ಹೇಳಲಾಗಿದೆ. ಇದೇ ಕೊನೆ ನಿರ್ದೇಶನ ಎಂದೂ ಸಚಿವಾಲಯ ತಿಳಿಸಿದೆ.

ಅಕ್ಟೋಬರ್ 1 ರಿಂದ ದೇಶದಲ್ಲಿ ಒಂದೇ ಮಾದರಿಯ ಡಿಎಲ್, ಆರ್‌ಸಿಅಕ್ಟೋಬರ್ 1 ರಿಂದ ದೇಶದಲ್ಲಿ ಒಂದೇ ಮಾದರಿಯ ಡಿಎಲ್, ಆರ್‌ಸಿ

 ಲಾಕ್‌ಡೌನ್ ನಂತರ ಹಲವು ಬಾರಿ ನಿರ್ದೇಶನ

ಲಾಕ್‌ಡೌನ್ ನಂತರ ಹಲವು ಬಾರಿ ನಿರ್ದೇಶನ

ಮಾರ್ಚ್ 24, 2020ರ ಬಳಿಕ ಕೊರೊನಾ ಕಾರಣದಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ್ದು, ಅತ್ಯವಶ್ಯಕ ಸರಕು ಹಾಗೂ ಸೇವೆ ಒದಗಿಸುವ ಉದ್ದೇಶದಿಂದ ರಸ್ತೆ ಮತ್ತು ಸಾರಿಗೆ ಸಚಿವಾಲಯ ಹಲವು ಬಾರಿ ನಿರ್ದೇಶನಗಳನ್ನು ಜಾರಿಗೊಳಿಸಿತ್ತು. ಫೆಬ್ರವರಿ 2020ರಲ್ಲಿ ಎಲ್ಲಾ ದಾಖಲೆಗಳನ್ನು ಮಾರ್ಚ್ 31, 2021 ರವರೆಗೆ ವಿಸ್ತರಿಸಿತ್ತು. ಇದೀಗ ಮತ್ತೆ ಅವಧಿ ವಿಸ್ತರಣೆ ಮಾಡಲಾಗಿದೆ.

 ನಾಗರಿಕರಿಗೆ ಅನುಕೂಲವಾಗಲು ಈ ಕ್ರಮ

ನಾಗರಿಕರಿಗೆ ಅನುಕೂಲವಾಗಲು ಈ ಕ್ರಮ

ದೇಶದಲ್ಲಿ ಕೊರೊನಾ ಎರಡನೇ ಅಲೆ ಸೃಷ್ಟಿಯಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಮತ್ತೆ ಈ ಮಾನ್ಯತೆಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ. ದೇಶಾದ್ಯಂತ ಲಾಕ್‌ಡೌನ್‌ ಇದ್ದ ಕಾರಣ ಬಹುತೇಕ ಸರ್ಕಾರಿ ಕಚೇರಿಗಳ ಕಾರ್ಯ ಸ್ಥಗಿತವಾಗಿತ್ತು. ಸಂಚಾರ ಇಲಾಖೆಯೂ ಸಂಪೂರ್ಣ ಬಂದ್ ಆಗಿದ್ದು, ಡಿಎಲ್, ಎಲ್‌ಎಲ್‌ ಪ್ರಕ್ರಿಯೆ ಮಾಡದಿರಲು ನಿರ್ಧರಿಸಲಾಗಿತ್ತು. ಮೋಟಾರು ವಾಹನ ಕಾಯ್ದೆ ಮತ್ತು ಕೇಂದ್ರ ಮೋಟಾರು ವಾಹನಗಳ ನಿಯಮಗಳಿಗೆ ಸಂಬಂಧಿಸಿದ ನಾಗರಿಕರಿಗೆ ಅನುಕೂಲವಾಗುವಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

English summary
Government extended the validity of motor vehicle documents like DL, Registration certificate and permits till June 30, 2021 due to coronavirus pandemic,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X