Budget 2025: ವಂದೇ ಭಾರತ್ ಸೇರಿ ರೈಲು ಪ್ರಯಾಣಿಕರ ನಿರೀಕ್ಷೆಗಳು

ನವದೆಹಲಿ, ಜನವರಿ 21: ಕೇಂದ್ರ ಬಜೆಟ್ ಅಧಿವೇಶನಕ್ಕೆ ಜನವರಿ 31ರಂದು ಚಾಲನೆ ದೊರೆಯಲಿದೆ. ಫೆಬ್ರವರಿ 1ರ ಶನಿವಾರ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಸಾಮಾನ್ಯ ಬಜೆಟ್‌ನಲ್ಲಿಯೇ ರೈಲ್ವೆ ಬಜೆಟ್ ಸೇರಿದೆ. ಆದ್ದರಿಂದ ರೈಲು ಪ್ರಯಾಣಿಕರು ಬಜೆಟ್ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ರೈಲ್ವೆ ಜಾಲದ ಆಧುನೀಕರಣ, ಜಾಲ ವಿಸ್ತರಣೆ, ಪ್ರಯಾಣಿಕರ ಸೇವೆಗಳನ್ನು ಉತ್ತಮಗೊಳಿಸುವುದು ಸೇರಿದಂತೆ ವಿವಿಧ ನಿರೀಕ್ಷೆಗಳು ಪ್ರಯಾಣಿಕರಲ್ಲಿವೆ. ಸಾಮಾನ್ಯ ರೈಲುಗಳ ಜೊತೆಗೆ ವಂದೇ ಭಾರತ್ ರೈಲು, ಕವಚ ತಂತ್ರಜ್ಞಾನ, ನಿಲ್ದಾಣಗಳನ್ನು ಮೇಲ್ದರ್ಜೇರಿಸುವುದು ಇವುಗಳಲ್ಲಿ ಸೇರಿವೆ.

Vande Bharat Train And Others What Railway Passengers Expect From Budget 2025

ಪ್ರಯಾಣಿಕರ ಸುರಕ್ಷತೆ, ಉತ್ತಮ ಗುಣಮಟ್ಟದ ಸೇವೆ ನೀಡಲು ರೈಲ್ವೆ ವಲಯವನ್ನು ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಆಧುನೀಕರಣಗೊಳಿಸುವುದು ಸಹ ನಿರೀಕ್ಷೆಯಲ್ಲಿ ಸೇರಿದೆ. ಹೈ-ಸ್ಪೀಡ್ ರೈಲುಗಳ ಪರಿಚಯ, ಹೊಸ ಮಾರ್ಗಗಳು, ಪರಿಸರ ಸ್ನೇಹಿ ಕ್ರಮಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡಬಹುದು ಎಂದು ಅಂದಾಜಿಸಲಾಗಿದೆ.

ರೈಲ್ವೆ ಇಲಾಖೆ ಅನುದಾನ ಹೆಚ್ಚಳ: ಬಜೆಟ್‌ 2025-26ರಲ್ಲಿ ರೈಲ್ವೆ ಇಲಾಖೆಗೆ ಹೆಚ್ಚಿನ ಅನುದಾನ ನಿರೀಕ್ಷೆ ಮಾಡಲಾಗಿದೆ. ಶೇ 15 ರಿಂದ 20ರಷ್ಟು ಅನುದಾನ ಹೆಚ್ಚು ಸಿಗುವ ಭರವಸೆ ಇದೆ. ಕಳೆದ ಹಣಕಾಸು ವರ್ಷದಲ್ಲಿ 2.65 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ಬಾರಿ ಇದು 3 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಬಜೆಟ್‌ನಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಒತ್ತು ನೀಡಲು, ರೈಲ್ವೆಯಲ್ಲಿ ಎಐ ತಂತ್ರಜ್ಞಾನ ಬಳಕೆ ಮಾಡಲು ಹೆಚ್ಚಿನ ಗಮನ ಹರಿಸಲಾಗುತ್ತದೆ. ಕೆಲವು ದಿನಗಳ ಹಿಂದೆ ಎಐ ಆಧಾರಿತ ರೈಲು ಬೋಗಿ ವಿನ್ಯಾಸದ ತಂತ್ರಜ್ಞಾನವನ್ನು ಲೋಕಾರ್ಪಣೆ ಮಾಡಲಾಗಿತ್ತು, ಇದು ಬೋಗಿ ತಯಾರಿಕೆಗೆ ಬಳಕೆ ಮಾಡುವ ಕಬ್ಬಿಣದ ಪರೀಕ್ಷೆಗಳನ್ನು ನಡೆಸುತ್ತಿದೆ.

ಬಜೆಟ್‌ನಲ್ಲಿ ಐಎಫ್‌ಸಿ ಬೋಗಿಗಳನ್ನು ಎಲ್‌ಹೆಚ್‌ಬಿ ಆಗಿ ಪರಿವರ್ತನೆ ಮಾಡುವತ್ತಲೂ ಗಮನ ಹರಿಸುವ ನಿರೀಕ್ಷೆ ಇದೆ. 2023-24ರಲ್ಲಿ ಗುರಿ ಹೊಂದಿದಷ್ಟು ಎಲ್‌ಹೆಚ್‌ಬಿ ಬೋಗಿಗಳನ್ನು ಇನ್ನೂ ಸಹ ತಯಾರು ಮಾಡಿಲ್ಲ. 2025-26ರಲ್ಲಿ ಎಷ್ಟು ಬೋಗಿ ತಯಾರಿಕೆ ಗುರಿ ಹೊಂದಲಾಗಿದೆ? ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.

ವಂದೇ ಭಾರತ್ ರೈಲು ಸೇವೆಗೆ ಭಾರೀ ಬೇಡಿಕೆ ಇದೆ. ಆದ್ದರಿಂದ ಹೊಸ ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಸೇವೆ ಆರಂಭಿಸುವ ನಿರೀಕ್ಷೆ ಇದೆ. ಅಲ್ಲದೇ 2025ರಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಲು ಈಗಾಗಲೇ ಇಲಾಖೆ ಸಿದ್ಧತೆಯನ್ನು ನಡೆಸಿದೆ, ಪ್ರಾಯೋಗಿಕ ಸಂಚಾರವೂ ನಡೆಯುತ್ತಿದೆ.

ಬಜೆಟ್‌ನಲ್ಲಿ ರೈಲು ಪ್ರಯಾಣ ದರವನ್ನು ಏರಿಕೆ ಮಾಡುವ ಸಾಧ್ಯತೆ ಕಡಿಮೆ ಇದೆ. ಈಗಿರುವ ದರವೇ ಮುಂದುವರೆಯಲಿದೆ. ಅಲ್ಲದೇ ಕೇಂದ್ರ ಸರ್ಕಾರದ ಮಹತ್ವದ ಅಮೃತ್ ಭಾರತ್ ರೈಲು ನಿಲ್ದಾಣ ಅಭಿವೃದ್ಧಿ ಯೋಜನೆಗೆ ಮತ್ತಷ್ಟು ನಿಲ್ದಾಣಗಳನ್ನು ಸೇರಿಸುವ ಸಾಧ್ಯತೆ ಇದೆ.

ಬಜೆಟ್‌ನಲ್ಲಿ ಬುಲೆಟ್ ರೈಲು ಯೋಜನೆ ಪೂರ್ಣಗೊಳಿಸಲು ಆದ್ಯತೆ ನೀಡುವ ನಿರೀಕ್ಷೆ ಇದೆ. ಮುಂಬೈ ಮತ್ತು ಅಹಮಬಾದ್‌ ರೈಲು ಮಾರ್ಗ ಘೋಷಣೆ ಮಾಡಿದ್ದು, ಕಾಮಗಾರಿ ನಡೆಯುತ್ತಿದೆ. ಬುಲೆಟ್‌ ರೈಲು ಮಾರ್ಗ ಗುಜರಾತ್‌ನಲ್ಲಿ 352 ಕಿ. ಮೀ. ಹಾಗೂ ಮಹಾರಾಷ್ಟ್ರದಲ್ಲಿ 156 ಕಿ. ಮೀ. ಒಳಗೊಂಡಿದೆ. ಮುಂಬೈ ಮತ್ತು ಅಹಮಬಾದ್‌ ನಡುವಿನ ರಸ್ತೆ ಸಂಚಾರವು 6 ರಿಂದ 8 ಗಂಟೆ ತೆಗೆದುಕೊಳ್ಳಲಿದೆ. ಬುಲೆಟ್‌ ರೈಲಿನಲ್ಲಿ 3 ಗಂಟೆಗೆ ತಲು‍ಪಬಹುದಾಗಿದೆ ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+