Vande Bharat: ವಾರಣಾಸಿಯಲ್ಲಿ 2ನೇ ಕೇಸರಿ ವಂದೇ ಭಾರತ್‌ಗೆ ಚಾಲನೆ ನೀಡಲಿರುವ ಪ್ರಧಾನಿ-ಮಾರ್ಗಗಳ ವಿವರ ತಿಳಿಯಿರಿ
ನವದೆಹಲಿ, ಡಿಸೆಂಬರ್, 18: ವಾರಣಾಸಿ-ನವದೆಹಲಿ ನಡುವಿನ ಎರಡನೇ ವಂದೇ ಭಾರತ್ ರೈಲಿಗೆ ಇಂದು (ಡಿಸೆಂಬರ್ 18) ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತ ಹಸಿರು ನಿಶಾನೆ ತೋರಲಿದ್ದಾರೆ. ಇದು ಕೇಸರಿ ಬಣ್ಣದ ವಂದೇ ಭಾರತ್ ರೈಲು ಆಗಿದೆ. ಮತ್ತು ಇದು ಹಲವು ವಿಶೇಷತೆಗಳನ್ನು ಹೊಂದಿದೆ ಎಂದು ಉತ್ತರ ರೈಲ್ವೆ ಮಾಹಿತಿ ನೀಡಿದೆ. ಹಾಗಾದರೆ ಈ ರೈಲು ಚಾಲನೆಯ ಸಮಯದ ವಿವರವನ್ನು ಇಲ್ಲಿ ತಿಳಿಯಿರಿ.

ಇಂದು ಮಧ್ಯಾಹ್ನ 2:15ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಾರಣಾಸಿ-ನವದೆಹಲಿ ನಡುವಿನ ಕೇಸರಿ ಬಣ್ಣದ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ದೇಶದಲ್ಲಿ ಆರಂಭಿಸಲಿರುವ ಎರಡನೇ ಕೇಸರಿ ಬಣ್ಣದ ವಂದೇ ಭಾರತ್ ರೈಲು ಇದಾಗಿದ್ದು, ಇದು ಹಲವು ವಿಶೇಷತೆಗಳನ್ನು ಪ್ರಯಾಣಿಕರಿಗೆ ನೀಡಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಈ ಕುರಿತಂತೆ ಉತ್ತರ ರೈಲ್ವೆ ತನ್ನ ಪತ್ರಿಕಾ ಹೇಳಿಕೆಯನ್ನು ನೀಡುವುದರ ಜೊತೆಗೆ ಕೇಸರಿ ಬಣ್ಣದ ರೈಲಿನ ಫೋಟೋಗಳನ್ನು ಬಿಡುಗಡೆ ಮಾಡಿದೆ.
ಈ ರೈಲಿನಲ್ಲಿ ಏನೆಲ್ಲ ವಿಶೇಷತೆಗಳು ಇರಲಿವೆ?
ಅಷ್ಟೇ ಅಲ್ಲದೆ ರೈಲು ಆನ್‌ಬೋರ್ಡ್ ವೈ-ಫೈ ಇನ್ಫೋಟೈನ್‌ಮೆಂಟ್, ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಪ್ಲಶ್ ಇಂಟೀರಿಯರ್‌ಗಳು, ಟಚ್-ಫ್ರೀ ಅನುಕೂಲತೆಗಳೊಂದಿಗೆ ಜೈವಿಕ-ವ್ಯಾಕ್ಯೂಮ್ ಟಾಯ್ಲೆಟ್‌ಗಳು, ಡಿಫ್ಯೂಸ್ಡ್ ಎಲ್ಇಡಿ ಲೈಟಿಂಗ್, ಪ್ರತಿ ಸೀಟ್‌ನ ಕೆಳಗೆ ಚಾರ್ಜಿಂಗ್ ಪಾಯಿಂಟ್‌ಗಳಂತಹ ಉತ್ತಮ ಪ್ರಯಾಣಿಕರ ಸೌಕರ್ಯಗಳನ್ನು ಈ ಕೇಸರಿ ಬಣ್ಣದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಹೊಂದಿದೆ ಎಂದು ತಿಳಿಸಿದೆ.
ವೈಯಕ್ತಿಕ ಸ್ಪರ್ಶ-ಆಧಾರಿತ ಓದುವ ದೀಪಗಳು ಮತ್ತು ಮರೆಮಾಚುವ ರೋಲರ್ ಬ್ಲೈಂಡ್‌ಗಳು ಇವೆ. ಇದು ಸೂಕ್ಷ್ಮಾಣು-ಮುಕ್ತ ಗಾಳಿಯ ಪೂರೈಕೆಗಾಗಿ ಯುವಿ ದೀಪದೊಂದಿಗೆ ಉತ್ತಮ ಶಾಖದ ವಾತಾವರಣ ಮತ್ತು ಹವಾನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ. ಉತ್ತಮ ಹವಾನಿಯಂತ್ರಣ ವ್ಯವಸ್ಥೆಯು ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಸರಿಹೊಂದಿಸುತ್ತದೆ ಎಂದು ತಿಳಿಸಿದೆ.
ರೈಲು ಸಂಚಾರದ ಸಮಯ
ಡಿಸೆಂಬರ್ 18ರ ಮಧ್ಯಾಹ್ನ 2:15ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ ಪಡೆದ ಬಳಿಕ, ಈ ರೈಲು ವಾರಣಾಸಿಯಿಂದ ನವದೆಹಲಿಗೆ ಪ್ರಯಾಣ ಆರಂಭಿಸಲಿದೆ. ಇನ್ನು ಸಾಮಾನ್ಯ ದಿನಗಳಲ್ಲಿ ಮಂಗಳವಾರ ಹೊರತುಪಡಿಸಿ ವಾರದಲ್ಲಿ 6 ದಿನಗಳವರೆಗೆ ವಾರಣಾಸಿಯಿಂದ ನವದೆಹಲಿಗೆ ಬೆಳಗ್ಗೆ 6:00 ಗಂಟೆಗೆ ರೈಲು ಸಂಚಾರ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ನಿಯಮಿತ ಕಾರ್ಯಾಚರಣೆಯು ಡಿಸೆಂಬರ್ 20ರಂದು ಪ್ರಾರಂಭವಾಗಲಿದೆ. ವಾರಣಾಸಿಯಿಂದ 6:00ಕ್ಕೆ ಹೊರಡುವ ಈ ರೈಲು, 07:34 ಕ್ಕೆ ಪ್ರಯಾಗರಾಜ್, 09:30ಕ್ಕೆ ಕಾನ್ಪುರ್ ಸೆಂಟ್ರಲ್ ಮತ್ತು ಕೊನೆಗೆ ಮಧ್ಯಾಹ್ನ 2:05 ಗಂಟೆಗೆ ನವದೆಹಲಿಗೆ ತಲುಪುತ್ತದೆ. ನಂತರ ನವದೆಹಲಿಯಿಂದ ಮಧ್ಯಾಹ್ನ 3ಕ್ಕೆ ಹೊರಡುತ್ತದೆ, ಕಾನ್ಪುರ ಸೆಂಟ್ರಲ್ ಅನ್ನು ಸಂಜೆ 7:12ಕ್ಕೆ ತಲುಪುತ್ತದೆ, ರಾತ್ರಿ 9:15ಕ್ಕೆ ಪ್ರಯಾಗರಾಜ್ ತಲುಪುತ್ತದೆ ಮತ್ತು 11:05 ಗಂಟೆಗೆ ವಾರಣಾಸಿಯಲ್ಲಿ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ ಎಂದು ತಿಳಿಸಿದೆ.












Click it and Unblock the Notifications