Vande Bharat Express: ನಾಲ್ಕು ವರ್ಷ ಪೂರೈಸಿದ "ವಂದೇ ಭಾರತ್" ಎಕ್ಸ್‌ಪ್ರೆಸ್, ಅಭಿವೃದ್ಧಿಯ ವಿವರ ಇಲ್ಲಿದೆ
ವಂದೇ ಭಾರತ್ ರೈಲು 4ನೇ ವರ್ಷ ಪೂರೈಸಿದ್ದು, ಈ ನಾಲ್ಕು ವರ್ಷಗಳಲ್ಲಿ ಇದರ ವಿಸ್ತರಣೆ ಎಷ್ಟಾಗಿದೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನವದೆಹಲಿ, ಫೆಬ್ರವರಿ, 17: ಭಾರತದಲ್ಲಿ ಇದೀಗ ವಂದೇ ಭಾರತ್ ರೈಲಿನದ್ದೇ ಸದ್ದು ಹೆಚ್ಚಾಗಿದ್ದು, ಪ್ರಯಾಣಿಕರು ಕೂಡ ಇದೇ ರೈಲ್ಲಿನಲ್ಲಿಯೇ ಹೆಚ್ಚಾಗಿ ಪ್ರಯಾಣ ಮಾಡಲು ಆರಂಭಿಸಿದ್ದಾರೆ. ಹಾಗೆಯೇ ಈ ವಂದೇ ಭಾರತ್ ರೈಲು ಆರಂಭವಾಗಿ ಇದೀಗ 4 ವರ್ಷಕ್ಕೆ ಕಾಲಿಟ್ಟಿದೆ. ಈ ನಾಲ್ಕು ವರ್ಷಗಳಲ್ಲಿ ಹಲವು ವೃಶಿಷ್ಟತೆಗಳನ್ನು ಪರಿಚಯಿಸುತ್ತಾ ಬಂದಿದ್ದು, ಇದರ ವ್ಯಾಪ್ತಿ ಎಲ್ಲಿಯವೆರೆಗೂ ವಿಸ್ತರಿಸಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಫೆಬ್ರವರಿ 15, 2019ರಂದು ಭಾರತೀಯ ರೈಲ್ವೆ ಹೈ-ಸ್ಪೀಡ್ ರೈಲನ್ನು ಪರಿಚಯಿಸಿತು. ಇದನ್ನು ಆರಂಭದಲ್ಲಿ ಟ್ರೈನ್ 18 ಎಂದು ಕರೆಯಲಾಗುತ್ತಿತ್ತು. ಮತ್ತು ನಂತರ "ವಂದೇ ಭಾರತ್" ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಲಾಯಿತು. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಆಗಿನ ಜನರಲ್ ಮ್ಯಾನೇಜರ್ ಸುಧಾಂಶು ಮಣಿ ಅವರ ಮಾರ್ಗದರ್ಶನದಲ್ಲಿ ಈ ರೈಲು ಅನ್ನು ಅಭಿವೃದ್ಧಿಪಡಿಸಲಾಯಿತು. ಮತ್ತು ರಾಜಧಾನಿ ಮತ್ತು ಶತಾಬ್ದಿ ಎಕ್ಸ್‌ಪ್ರೆಸ್ ನಂತರ ಭಾರತೀಯ ರೈಲ್ವೆಗೆ ಗೇಮ್ ಚೇಂಜರ್ ಆಗಲು ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ರೈಲು ಸೆಟ್ ಅನ್ನು ಅಭಿವೃದ್ಧಿಪಡಿಸಲಾಯಿತು.

ಫೆ. 15ರಂದು ಪ್ರಾರಂಭವಾದ "ವಂದೇ ಭಾರತ್"
ಫೆಬ್ರವರಿ 15 ರಂದು ಪ್ರಾರಂಭವಾದ ಮೊದಲ "ವಂದೇ ಭಾರತ್" ಎಕ್ಸ್‌ಪ್ರೆಸ್ ನವದೆಹಲಿ-ವಾರಣಾಸಿ ಮಾರ್ಗದಲ್ಲಿ ಕಾರ್ಯನಿರ್ವಹಿಸಿತ್ತು. ಈ ಸಂದರ್ಭದಲ್ಲಿ ದೇಶದ ಹಲವಾರು ಭಾಗಗಳಲ್ಲಿ ಇನ್ನೂ ಒಂಬತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಾರಂಭಿಸಲಾಗಿದೆ. ಸದ್ಯ ದೇಶದ 108 ಜಿಲ್ಲೆಗಳು ಮತ್ತು 17 ರಾಜ್ಯಗಳನ್ನು ಸಂಪರ್ಕಿಸುವ ಒಟ್ಟು 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ.

ದೇಶದೆಲ್ಲೆಡೆ ಸಂಚಾರ ಆರಂಭಿಸಿದ "ವಂದೇ ಭಾರತ್"
ಆಗಸ್ಟ್ 15, 2021ರಂದು ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿ, ಸ್ವಾತಂತ್ರ್ಯದ ಅಮೃತ್ ಮಹೋತ್ಸವದ 75 ವಾರಗಳ ಅವಧಿಯಲ್ಲಿ 75 "ವಂದೇ ಭಾರತ್" ರೈಲುಗಳು ದೇಶದ ಮೂಲೆ ಮೂಲೆಗಳನ್ನು ಸಂಪರ್ಕಿಸುತ್ತವೆ ಎಂದು ಘೋಷಿಸಿದ್ದರು.
ವಂದೇ ಭಾರತ್ ರೈಲು ಭಾರತದ ಮೊದಲ ಹೈಸ್ಪೀಡ್ ರೈಲು ಆಗಿದ್ದು, ಇದು ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿದೆ.

"ವಂದೇ ಭಾರತ್" ರೈಲಿನ ವಿಶೇಷತೆ ಏನು?
1. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೂಕ್ಷ್ಮತೆಯ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಇದು ಅತೀ ವೇಗದಲ್ಲಿ ಓಡುತ್ತದೆ.
2. ಪ್ರಯಾಣಿಕರ ಮಾಹಿತಿಯನ್ನು ಪಡೆಯಲು ಜಿಪಿಎಸ್ ಆಧಾರಿತ ಆಡಿಯೋ ವ್ಯವಸ್ಥೆಯನ್ನು ಮಾಡಲಾಗಿದೆ.
3. ಮನರಂಜನಾ ಉದ್ದೇಶಗಳಿಗಾಗಿ ಆನ್-ಬೋರ್ಡ್ ಹಾಟ್‌ಸ್ಪಾಟ್ ಮತ್ತು ಅತ್ಯಂತ ಆರಾಮದಾಯಕ ಆಸನಗಳನ್ನು ಹೊಂದಿದೆ.
4. ಕಾರ್ಯನಿರ್ವಾಹಕ ವರ್ಗವು ತಿರುಗುವ ಕುರ್ಚಿಗಳನ್ನು ಸಹ ಹೊಂದಿದೆ. ಎಲ್ಲಾ ಶೌಚಾಲಯಗಳು ಜೈವಿಕ ನಿರ್ವಾತ ಪ್ರಕಾರವಾಗಿದೆ. ಲೈಟಿಂಗ್ ಡ್ಯುಯಲ್ ಮೋಡ್ ಆಗಿದೆ, ಅಂದರೆ. ಸಾಮಾನ್ಯ ಪ್ರಕಾಶಕ್ಕಾಗಿ ಮತ್ತು ಪ್ರತಿ ಆಸನಕ್ಕೆ ವೈಯಕ್ತಿಕವಾಗಿ ಹರಡುತ್ತದೆ.
5. ಇಲ್ಲಿ ಬಿಸಿ ಊಟ, ಬಿಸಿ ಮತ್ತು ತಂಪು ಪಾನೀಯಗಳನ್ನು ಪೂರೈಸಲು ಸೌಲಭ್ಯಗಳ ಪ್ಯಾಂಟ್ರಿಯನ್ನು ಹೊಂದಿದೆ.
6. ಹಾಗೆಯೇ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಶಾಖ ಮತ್ತು ಶಬ್ಧವನ್ನು ತಗ್ಗಿಸಲು ಉದ್ದೇಶಿಸಲಾಗಿದೆ.

ಮೆಟ್ರೋದ ಬಗ್ಗೆ ಅಶ್ವನಿ ವೈಷ್ಣವ್ ಹೇಳಿದ್ದೇನು?
ಹಾಗೆಯೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮಿನಿ ಆವೃತ್ತಿಯಾದ "ವಂದೇ ಮೆಟ್ರೋ" ಸೇವೆಗಳನ್ನು ಶೀಘ್ರದಲ್ಲೇ ದೇಶದಲ್ಲಿ ಪ್ರಾರಂಭಿಸಲಾಗುವುದು. "ವಂದೇ ಮೆಟ್ರೋ" ವಿನ್ಯಾಸ ಮತ್ತು ಉತ್ಪಾದನೆ ಇದೇ ವರ್ಷದಲ್ಲೇ ಪೂರ್ಣಗೊಳ್ಳಲಿದೆ. ದೊಡ್ಡ ನಗರಗಳಲ್ಲಿ ಜನರು ತಮ್ಮ ಉದ್ಯೋಗದ ಸ್ಥಳ ಮತ್ತು ಊರುಗಳ ನಡುವೆ ಆರಾಮವಾಗಿ ಪ್ರಯಾಣಿಸಲು ಸಹಾಯ ಮಾಡುವ ಉದ್ದೇಶದಿಂದ "ವಂದೇ ಮೆಟ್ರೋ" ಸೇವೆಗಳನ್ನು ಪ್ರಾರಂಭಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗಷ್ಟೇ ಮಾಹಿತಿ ನೀಡಿದ್ದರು. ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023ರ ಕೇಂದ್ರ ಬಜೆಟ್ ಮಂಡಿಸಿದ ನಂತರ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಅವರು "ವಂದೇ ಮೆಟ್ರೋ" ಯೋಜನೆಯನ್ನು ಘೋಷಿಸಿದ್ದಾರೆ.
"ದೊಡ್ಡ ನಗರಗಳ ಸುತ್ತಮುತ್ತ ಪ್ರಯಾಣಿಸಲು ವಂದೇ ಭಾರತ್ ಮೆಟ್ರೋ ಸೇವೆ ಸಹಕಾರಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಲ್ಲಿ ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾದ ವಂದೇ ಮೆಟ್ರೋ ರೈಲುಗಳನ್ನು ಶೀಘ್ರದಲ್ಲೇ ದೇಶದಲ್ಲಿ ಪರಿಚಯಿಸಲಾಗುವುದು," ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ಧರು.
"ದೊಡ್ಡ ನಗರಗಳ ಸುತ್ತಮುತ್ತ ಪ್ರಯಾಣಿಸಲು ವಂದೇ ಭಾರತ್ ಮೆಟ್ರೋ ಸೇವೆ ಸಹಕಾರಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಲ್ಲಿ ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾದ ವಂದೇ ಮೆಟ್ರೋ ರೈಲುಗಳನ್ನು ಶೀಘ್ರದಲ್ಲೇ ದೇಶದಲ್ಲಿ ಪರಿಚಯಿಸಲಾಗುವುದು," ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ಧರು.
"ನಾವು ವಂದೇ ಮೆಟ್ರೋವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ದೊಡ್ಡ ನಗರಗಳ ಸುತ್ತಲೂ ಪ್ರಯಾಣ ಬೆಳೆಸುವವರಿಗೆ ಈ ಯೋಜನೆ ಸಹಕಾರಿಯಾಗಲಿದೆ. ಅದಕ್ಕಾಗಿ ನಾವು ವಂದೇ ಭಾರತ್ ರೈಲಿಗೆ ಸಮಾನವಾದ ವಂದೇ ಮೆಟ್ರೋವನ್ನು ತರುತ್ತಿದ್ದೇವೆ. ಈ ವರ್ಷ ವಿನ್ಯಾಸ ಮತ್ತು ಉತ್ಪಾದನೆ ಪೂರ್ಣಗೊಳ್ಳಲಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ರೈಲಿನ ಉತ್ಪಾದನೆಯ ವೇಗವನ್ನು ಹೆಚ್ಚಿಸಲಾಗುವುದು," ಎಂದು ಮಾಹಿತಿ ನೀಡಿದ್ದರು.












Click it and Unblock the Notifications