ಝೊಮ್ಯಾಟೋ ಸೇವೆ ಬಳಸಿಕೊಂಡು ಪ್ರೇಮಿಗಳ ದಿನದಂದೇ ಒಂದೇ.. ಒಂದು ಸಂದೇಶ ಬರೆದು 16 ವಿಳಾಸಗಳಿಗೆ ಕೇಕ್ ಕಳುಹಿಸಿದ ಭೂಪ.!
ಪ್ರೇಮಿಗಳ ದಿನ ಬಂತೆಂದರೆ ಸಾಕು ಬಹುತೇಕ ಮಂದಿ ಪ್ರೆಯಸ್ಸಿಯನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಈ ವೇಳೆ ಝೊಮೆಟೋ, ಸ್ವಿಗ್ಗಿ ಸೇವೆ ತುಂಬಾ ಪ್ರಮುಖ ಪಾತ್ರವಹಿಸುತ್ತವೆ. ಈಗಾಗಲೇ ನಿನ್ನೆ (ಫೆಬ್ರವರಿ 14) ಪ್ರೇಮಿಗಳ ದಿನಾಚರಣೆ ಮುಗಿದಿದೆ. ಆದರೆ ಇಲ್ಲೊಬ್ಬ ವ್ಯಕ್ತಿಯೊಬ್ಬ ಝೊಮ್ಯಾಟೋ ಸೇವೆಯನ್ನು ಬಳಸಿಕೊಂಡು ಹೆಚ್ಚು ಪ್ರೇಯಸಿಯರ ಮನ ಗೆಲ್ಲುವ ಪ್ರಯತ್ನ ಮಾಡಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಹಾಗಾದರೆ ಆ ಯುವಕ ಯಾರು ಎನ್ನುವ ಮಾಹಿತಿಯನ್ನು ಇಲ್ಲೊ ತಿಳಿಯಿರಿ.
ಈ ಯುವಕನ ಹೆಸರು ಸಮೇತ ಅಸಲಿ ಸತ್ಯವನ್ನು ಝೊಮ್ಯಾಟೋ ಬಯಲು ಮಾಡಿದೆ. ಆತನ ಹೆಸರಿನ ಸಮೇತ ಟ್ವೀಟ್ ಮಾಡಿರುವ ಝೊಮ್ಯಾಟೋ, ಬರೋಬ್ಬರಿ 16 ವಿಭಿನ್ನ ವಿಳಾಸಗಳಿಗೆ ದಿಲ್ಲಿ ಯುವಕ ತರುಣ್ ಎಂಬಾತ ಕಳಿಸಿದ್ದ ಕೇಕ್‌ಗಳ ಆರ್ಡರ್ ಮಾಹಿತಿ ಕುರಿತಾಗಿ ಟ್ವೀಟ್‌ನಲ್ಲಿ ಮಾಹಿತಿ ಪ್ರಕಟಿಸಿದ್ದು, ಇದು ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರೇಮಿಗಳ ದಿನಾಚರಣೆ ಬಂತೆಂದರೆ ಗಿಫ್ಟ್‌ಗಳ ಮಾರಾಟಗಾರರಿಗೆ ಹಬ್ಬವಿದ್ದಂತೆ. ಪ್ರೇಮಿಗಳ ದಿನದಂದು ತಮ್ಮ ಪ್ರೇಯಸಿಗೆ ಗುಲಾಬಿ ಹೂ, ಟೆಡ್ಡಿ ಬೇರ್, ಚಾಕೋಲೇಟ್, ಸಿಹಿ ತಿನಿಸು ಹೀಗೆ ಹಲವು ರೀತಿಯ ಉಡುಗೊರೆಗಳನ್ನು ಪ್ರಿಯಕರ ಕೊಡುತ್ತಾನೆ ಈ ವೇಳೆ ತನ್ನ ಪ್ರೇಯಸಿಯನ್ನು ಒಲಿಸಿಕೊಳ್ಳಲು ಇನ್ನಿಲ್ಲದ ಕಸರತ್ತನ್ನು ನಡೆಸುತ್ತಾನೆ. ಆದರೆ ದಿಲ್ಲಿಯ ಈ ವ್ಯಕ್ತಿ ಮಾಡಿದ ಹೊಸ ಪ್ರಯತ್ನವಂತೂ ನೆಟ್ಟಿಗರ ಕಣ್ಣು ಕೆಂಪಗಾಗುವಂತೆ ಮಾಡಿದೆ.
ನವದೆಹಲಿಯ ತರುಣ್ ಎಂಬ ಯುವಕ 16 ವಿಳಾಸಗಳಿಗೆ ಝೊಮ್ಯಾಟೋ ಮೂಲಕ ಕೇಕ್ ಕಳಿಸಿದ್ದನಂತೆ. ಈ ಎಲ್ಲಾ ಕೇಕ್‌ಗಳಲ್ಲೂ ಒಂದೇ ಬರಹವನ್ನು ಬರೆಸಿದ್ದನಂತೆ. ಇನ್ನು 16 ವಿಳಾಸಗಳಲ್ಲೂ ಬೇರೆ ಬೇರೆ ಯುವತಿಯರ ಹೆಸರಿಗೆ ತರುಣ್ ಕೇಕ್ ಕಳಿಸಿದ್ದನಂತೆ. ಪ್ರತಿಯೊಂದು ಕೇಕ್ ಮೇಲೆ 'ತರುಣ್ ಕಡೆಯಿಂದ Happy Valentine's Day' ಎಂದು ಬರೆಸಿದ್ದನಂತೆ.
ಟ್ವೀಟ್‌ನಲ್ಲಿ ಪ್ರತಿಕ್ರಿಯೆಗಳು ಹೇಗಿವೆ ಗೊತ್ತಾ?
"ತರುಣ್ ತನ್ನ ಗ್ರಾಹಕರ ಗೆಳತಿಯರಿಗಾಗಿ ಕೇಕ್ ಮತ್ತು ಹೂವುಗಳನ್ನು ಆಯೋಜಿಸುವಲ್ಲಿ ಅಸಾಧಾರಣ ಸೇವೆಯನ್ನು ಒದಗಿಸುವ ಮೂಲಕ ತನಗೆ ತಾನೇ ಹೆಸರು ಮಾಡುತ್ತಿದ್ದಾನೆ,"
"ತರುಣ್ ತನ್ನ ಸಾಧ್ಯತೆಗಳನ್ನು ಉತ್ತಮಗೊಳಿಸಲು Zomato ಅನ್ನು ಹೇಗೆ ಬಳಸಬೇಕೆಂದು ತಿಳಿದಿದ್ದಾನೆ".
"ಅವನು ಯಾಕೆ ಝೊಮಾಟೊ ಮೂಲಕ ಕೇಕ್ ಕಳುಹಿಸುತ್ತಿದ್ದಾನೆ." ಈ ರೀತಿಯಾಗಿ ಟ್ವೀಟ್‌ನಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ ಹಾಗೂ ಇನ್ನೂ ವ್ಯಕ್ತವಾಗುತ್ತಲೇ ಇವೆ.












Click it and Unblock the Notifications