‘ಕೊರೊನಾ’ ಬಳಿಕ ಮತ್ತೊಂದು ಭೀಕರ ರೋಗಕ್ಕೆ ಲಸಿಕೆ ಸಿಕ್ಕೇಬಿಡ್ತು!

ನವದೆಹಲಿ: ಮಳೆಗಾಲ ಬಂತು ಅಂದರೆ ಸಾಕು ನಾನಾ ರೋಗಗಳು ಕಾಡುತ್ತವೆ. ಅದ್ರಲ್ಲೂ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಮುಂದುವರಿದಷ್ಟೂ, ಸೋಂಕು ಕೂಡ ಹೆಚ್ಚಾಗುತ್ತಿವೆ. ಅದೇ ರೀತಿ ಸೊಳ್ಳೆ ಮೂಲಕ ಹರಡುವ 'ಚಿಕೂನ್‌ ಗುನ್ಯಾ' 2 ದಶಕದಿಂದ ಭಾರತದಲ್ಲೂ ತೀವ್ರವಾಗಿ ಕಾಡುತ್ತಿದೆ. ಮಳೆಗಾಲದಲ್ಲಿ ಚಿಕೂನ್‌ ಗುನ್ಯಾ ಕಾಟಕ್ಕೆ ಜನರು ಬೆಚ್ಚಿಬಿದ್ದಿದ್ದರು. ಆದರೆ ಈಗ ಈ ಭಯಾನಕ ರೋಗಕ್ಕೂ ಮದ್ದು ಸಿಕ್ಕಿದೆ.

ಹೌದು, ಕೊರೊನಾ ರೀತಿಯ ಭೀಕರ ಸಾಂಕ್ರಾಮಿಕ ರೋಗಕ್ಕೂ ಲಸಿಕೆ ಸಿಕ್ಕಾಗಿದೆ. ಇದಾದ ಕೆಲ ವರ್ಷದಲ್ಲಿ 'ಚಿಕೂನ್‌ ಗುನ್ಯಾ'ಗೂ ವ್ಯಾಕ್ಸಿನ್ ಕನ್ಫರ್ಮ್ ಆಗಿದೆ. ಫ್ರಾನ್ಸ್ ಮೂಲದ ಔಷಧ ತಯಾರಕ ಸಂಸ್ಥೆ 'ವಾಲ್ನೆವಾ' ಈ ಪ್ರಯೋಗದಲ್ಲಿ ದೊಡ್ಡ ಯಶಸ್ಸು ಸಾಧಿಸಿದೆ ಎನ್ನಲಾಗಿದೆ. ಅಮೆರಿಕದಲ್ಲಿ ಈ ಸಂಸ್ಥೆ 3ನೇ ಹಂತದ ಪ್ರಯೋಗ ನಡೆಸಿತ್ತು. ಪ್ರಯೋಗದ ಫಲಿತಾಂಶ ಹೊರಬಿದ್ದು, ಚಿಕೂನ್‌ ಗುನ್ಯಾ ವಿರುದ್ಧದ ಈ ಲಸಿಕೆ ಪರಿಣಾಮಕಾರಿ ಹಾಗೂ ಸುರಕ್ಷಿತ ಎಂಬುದನ್ನ ಸಂಶೋಧಕರು ಕಂಡುಕೊಂಡಿದ್ದಾರೆ. ರಿಸರ್ಚ್ ಪೇಪರ್ ಒಂದರ ಪ್ರಕಾರ, ಇದು ಸೋಂಕಿನ ವಿರುದ್ಧ ಶೇ. 99ರಷ್ಟು ಪ್ರತಿಕಾಯ ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ (Chikungunya).

 Vaccine may come to market for Chikungunya

ಜನರಿಗೆ ಸಿಗುತ್ತಾ ಬಿಗ್ ರಿಲೀಫ್?

ಅಂದಹಾಗೆ ಸಾಮಾನ್ಯ ರೋಗದಂತೆ ಶುರುವಾಗುವ ಈ ಚಿಕೂನ್‌ ಗುನ್ಯಾ, ರೋಗಿಯ ಜೀವ ಹಿಂಡುತ್ತದೆ. ಭಾರತ, ಆಫ್ರಿಕಾ, ಆಗ್ನೇಯ ಏಷ್ಯಾ ಭಾಗದಲ್ಲಿ ಕಂಡುಬರುತ್ತಿದ್ದ ಈ ರೋಗ ಇತ್ತೀಚೆಗೆ ಅಮೆರಿಕ, ಯುರೋಪ್‌ನ ಕೆಲ ಭಾಗದಲ್ಲೂ ತೀವ್ರವಾಗಿ ಹರಡಿದೆ. ಈ ಹಿನ್ನೆಲೆ ಚಿಕೂನ್‌ ಗುನ್ಯಾಗೆ ಲಸಿಕೆ ಕಂಡುಹಿಡಿಯಬೇಕು ಅನ್ನೋ ಹಠದಲ್ಲಿ ಇದೀಗ ದೊಡ್ಡ ಗೆಲುವು ಸಿಕ್ಕಂತಾಗಿದೆ. ಇದೇ ಕಾರಣಕ್ಕೆ ಜನರು ಕೂಡ ತಮಗೆ ಬಿಗ್ ರಿಲೀಫ್ ಸಿಗುತ್ತಾ..? ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಆದರೆ ಚಿಕೂನ್ ಗುನ್ಯಾ ವ್ಯಾಕ್ಸಿನ್ ಇನ್ನೂ ಒಂದಷ್ಟು ಪರೀಕ್ಷೆಗಳನ್ನು ಎದುರಿಸಬೇಕಿದೆ, ನಂತರ ಆರೋಗ್ಯ ಇಲಾಖೆ ಒಪ್ಪಿಗೆ ಪಡೆದು ಜನರಿಗೆ ಸಿಗಲಿದೆ.

'ಚಿಕೂನ್‌ ಗುನ್ಯಾ' ಲಕ್ಷಣ ಏನು?

ಸೊಳ್ಳೆಗಳಿಂದ ಹರಡುವ ನಾನಾ ರೋಗಗಳಲ್ಲಿ ಈ ಡೆಡ್ಲಿ ಚಿಕೂನ್ ಗುನ್ಯಾ ಕೂಡ ಒಂದು ಎನ್ನಬಹುದು. ಸೋಂಕು ತಾಗಿದ ಬಳಿಕ 4ರಿಂದ 7 ದಿನದಲ್ಲಿ ಲಕ್ಷಣಗಳು ಕಂಡುಬರುತ್ತವೆ. ದೇಹದಲ್ಲಿ ಅತಿಯಾದ ನೋವು, ದೇಹದ ಹಲವಾರು ಭಾಗಗಳಲ್ಲಿ ದದ್ದು ಕಾಣಿಸುವುದು. ಈ ಸಂದರ್ಭದಲ್ಲಿ ದೇಹದಲ್ಲಿ ತೀವ್ರ ನೋವು ಕಂಡುಬರುವುದು. ಪಾದ & ಕೈಗಳಲ್ಲಿ ಊತವೂ ಕಂಡುಬಂದು, ಕಣ್ಣು ಕೆಂಪಾಗಬಹುದು. ಹಾಗೇ ಜ್ವರ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಸೊಳ್ಳೆಗಳ ಕಾಟ ಹೆಚ್ಚಾಗಿರುವ ಪ್ರದೇಶದಲ್ಲಿ ಚಿಕೂನ್‌ ಗುನ್ಯಾ ಹಾವಳಿ ಕೂಡ ಹೆಚ್ಚಾಗಿ ಕಂಡುಬರುತ್ತದೆ.

 Vaccine may come to market for Chikungunya

ಒಟ್ನಲ್ಲಿ ವಿಜ್ಞಾನಿಗಳು ಕಷ್ಟಪಟ್ಟು ಮತ್ತೊಂದು ಭೀಕರ ಕಾಯಿಲೆಗೆ ಲಸಿಕೆ ಕಂಡುಹಿಡಿದು ಜನರಿಗೆ ರಿಲೀಫ್ ನೀಡುತ್ತಿದ್ದಾರೆ. ಇನ್ನೇನು ಕೆಲವೇ ದಿನದಲ್ಲಿ ಈ ಲಸಿಕೆಗೆ ಒಪ್ಪಿಗೆ ಕೂಡ ಸಿಗುವ ಸಾಧ್ಯತೆ ಇದೆ. ಲಸಿಕೆ ಯಶಸ್ಸಿನ ಬಗ್ಗೆ ಸಂಶೋಧಕರು ಸಂತಸ ವ್ಯಕ್ತಪಡಿಸಿದ್ದಾರೆ. ಭಾರತದಂತೆ ಆಫ್ರಿಕಾ ದೇಶಗಳಲ್ಲೂ ಚಿಕೂನ್‌ ಗುನ್ಯಾ ರೋಗ ಮಲೇರಿಯಾಗಿ ರೀತಿಯಾಗೇ ಸಮಸ್ಯೆ ತಂದೊಡ್ಡಿತ್ತು. ಇದೀಗ ಆಫ್ರಿಕಾದ ಬಡ ರಾಷ್ಟ್ರಗಳ ಬಡ ಜನರು ಕೂಡ ಲಸಿಕೆ ಅಭಿವೃದ್ಧಿಯಿಂದ ಖುಷಿ ಪಡುತ್ತಿದ್ದಾರೆ. ಈ ಲಸಿಕೆ ತನ್ನ ಪರೀಕ್ಷೆಯಲ್ಲಿ ಪಾಸ್ ಆಗಿ ಜನರ ಬಳಕೆಗೆ ಲಭ್ಯವಾದರೆ, ಚಿಕೂನ್‌ ಗುನ್ಯಾ ವಿರುದ್ಧದ ಮೊದಲ ವ್ಯಾಕ್ಸಿನ್ ಎಂಬ ಹೆಗ್ಗಳಿಕೆ ಕೂಡ ಪಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+