ವಿಡಿಯೋ: ಮಾತಾ ವೈಷ್ಣೋದೇವಿ ಮಂದಿರದಲ್ಲಿ ಪೂಜಾ ವಿಧಾನ

ಡೆಹ್ರಾಡೂನ್, ಜೂನ್.08: ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೂ ಧಾರ್ಮಿಕ ಕೇಂದ್ರಗಳನ್ನು ತೆರೆಯುವುದಕ್ಕೆ ಅನುಮತಿ ನೀಡಲಾಗಿದೆ. ಮಹಾಮಾರಿ ಅಂಟಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಲು ಕೇಂದ್ರ ಗೃಹ ಸಚಿವಾಲಯವು ಮಾರ್ಗಸೂಚಿಗಳನ್ನು ಹೊರಡಿಸಿದೆ.

Recommended Video

      ಚಿರಂಜೀವಿಯ ಅಂತಮ ದರ್ಶನ ಪಡೆದ ರವಿಚಂದ್ರನ್ ಕುಟುಂಬ | Chiranjeevi Sarja | Ravi chandran | Oneindia Kannada

      ಉತ್ತರಾಖಂಡ್ ಸರ್ಕಾರವು ಸ್ಥಳೀಯ ದೇವಸ್ಥಾನ, ಮಂದಿರ, ಮಸೀದಿ ಮತ್ತು ಚರ್ಚ್ ಗಳನ್ನು ತೆರೆಯುವುದಕ್ಕೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಡೆಹ್ರಾಡೂನ್ ನಲ್ಲಿ ಇರುವ ಮಾತಾ ವೈಷ್ಣೋದೇವಿ ಗುಫಾ ಯೋಗ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

      ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆವರೆಗೂ ದೇವರ ದರ್ಶನ ಪಡೆಯುವುದಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಗಳತ್ತ ಮುಖ ಮಾಡುತ್ತಿದ್ದಾರೆ. ಇದರ ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಕಂಟೇನ್ಮೆಂಟ್ ವಲಯಗಳಲ್ಲಿ ದೇವಸ್ಥಾನಗಳನ್ನು ತೆರೆಯದಿರಲು ಉತ್ತರಾಖಂಡ್ ಸರ್ಕಾರವು ಸೂಚನೆ ನೀಡಿದೆ.

      Uttarakhand: Prayers being offered at Mata Vaishno Devi Gufa Yog Mandir in Dehradun.


      ಉತ್ತರಾಖಂಡ್ ನಲ್ಲಿ ಕೊರೊನಾ ವೈರಸ್ ಸ್ಥಿತಿಗತಿ:

      ಉತ್ತರಾಖಂಡ್ ನಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕನ್ನು ಸರ್ಕಾರ ಸಮರ್ಥವಾಗಿ ಎದುರಿಸಿದೆ. ಮಹಾಮಾರಿ ಹರಡುವಿಕೆಗೆ ಕಡಿವಾಣ ಹಾಕಿರುವುದ ಅಂಕಿ-ಅಂಶಗಳಲ್ಲಿ ಸಾಬೀತಾಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 2.5 ಲಕ್ಷದ ಗಡಿ ದಾಟಿದೆ. ಆದರೆ ಉತ್ತರಾಖಂಡ್ ನಲ್ಲಿ ಇದುವರೆಗೂ 1,352 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದ್ದು, ಈ ಪೈಕಿ 528 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಬಾಕಿ ಉಳಿದಿರುವ 809 ಮಂದಿ ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+