ಉತ್ತರಾಖಂಡ್ ಸಚಿವ ಸತ್ಪಾಲ್ ಪತ್ನಿಗೆ ಕೊರೊನಾ ಸೋಂಕು
ಡೆಹ್ರಾಡೂನ್, ಮೇ 31: ಉತ್ತರಾಖಂಡ್ ಸಚಿವ ಸತ್ಪಲ್ ಮಹಾರಾಜ್ ಅವರ ಪತ್ನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಶನಿವಾರ ಉತ್ತರ್ ಖಂಡ್ ನಲ್ಲಿ 22 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಉತ್ತರ್ ಖಂಡ್ ನಲ್ಲಿ ಸೋಂಕಿತರ ಸಂಖ್ಯೆ 749ಕ್ಕೆ ಏರಿಕೆ ಆಗಿದೆ.
ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ರಾಜ್ಯ ಶಿಷ್ಟಾಚಾರದ ಪ್ರಕಾರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಶಿಷ್ ಶ್ರೀವಾಸ್ತವ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ .

ಡೆಹ್ರಾಡೂನ್ ನಲ್ಲಿನ ಖಾಸಗಿ ಲ್ಯಾಬ್ ವೊಂದರಲ್ಲಿ ಅಮೃತಾ ರಾವ್ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವ್ ವರದಿ ಬಂದಿದೆ.ಭಾರತದಲ್ಲಿ 8,380 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 1.8 ಲಕ್ಷ ಸೋಂಕಿತರಿದ್ದಾರೆ. 24 ಗಂಟೆಗಳಲ್ಲಿ 193 ಮಂದಿ ಮೃತಪಟ್ಟಿದ್ದು, ಕೊರೊನಾವೈರಸ್‌ನಿಂದ ಮೃತಪಟ್ಟವರ ಸಂಖ್ಯೆ 5 ಸಾವಿರದ ಗಡಿ ದಾಟಿದೆ.












Click it and Unblock the Notifications