ಗನ್ ಹಿಡಿದು ಕುಣಿದಿದ್ದ ಉತ್ತರಾಖಂಡದ ಉಚ್ಚಾಟಿತ ಶಾಸಕ ಬಿಜೆಪಿಗೆ ವಾಪಸ್

ಡೆಹರಾಡೂನ್, ಆಗಸ್ಟ್ 25: ಗನ್ ಹಿಡಿದು ನರ್ತಿಸುವ ವೈರಲ್ ವಿಡಿಯೋದಿಂದ ವಿವಾದ ಸೃಷ್ಟಿಸಿದ್ದ ಉತ್ತರಾಖಂಡದ ಉಚ್ಚಾಟಿತ ಬಿಜೆಪಿ ಶಾಸಕ ಪ್ರಣವ್ ಸಿಂಗ್ 'ಚಾಂಪಿಯನ್' ಪಕ್ಷಕ್ಕೆ ಮರಳಿದ್ದಾರೆ.

ಉತ್ತರಾಖಂಡದ ಕಾನ್ಪುರ ಕ್ಷೇತ್ರದ ಶಾಸಕ ಪ್ರಣವ್ ಸಿಂಗ್, ಕಳೆದ ವರ್ಷ ಗನ್ ಹಿಡಿದು ನರ್ತಿಸಿದ್ದ ಪ್ರಕರಣದ ಬಳಿಕ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆಗೊಳಿಸಲಾಗಿತ್ತು. ಸೋಮವಾರ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಬನ್ಸಿಧರ್ ಭಗತ್ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ವಾಪಸಾದರು.

ವಿವಾದದಲ್ಲಿ ಸಿಲುಕಿರುವ ಪ್ರಣವ್ ಸಿಂಗ್ ಮತ್ತು ಇತರೆ ಮೂವರು ಬಿಜೆಪಿ ಶಾಸಕರು ಪಕ್ಷದ ನಾಯಕರ ಎದುರು ತಮ್ಮ ಅಭಿಪ್ರಾಯಗಳನ್ನು ಮಂಡಿಸುವಂತೆ ಭಗತ್ ಸಮನ್ ನೀಡಿದ್ದರು. ಪತ್ನಿ ಹಾಗೂ ಕುಟುಂಬದ ಇತರೆ ಸದಸ್ಯರ ಜತೆಗೆ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಚಾಂಪಿಯನ್, ಭಗತ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಮರಳಿದರು.

 Uttarakhand BJP Re-Inducts Expelled MLA Pranav Singh Champion

ಇತ್ತೀಚೆಗೆ ಮಹಿಳೆಯೊಬ್ಬರಿಂದ ಅತ್ಯಾಚಾರದ ಆರೋಪಕ್ಕೆ ಒಳಗಾಗಿರುವ ದ್ವಾರಹತ್ ಶಾಸಕ ಮಹೇಶ್ ನೇಗಿ, ಅಶಿಸ್ತಿನ ವರ್ತನೆ ಕಾರಣದಿಂದ ಶೋಕಾಸ್ ನೋಟಿಸ್ ಪಡೆದುಕೊಂಡಿದ್ದ ಝಬ್ರೆದಾ ಶಾಸಕ ದೇಶರಾಜ್ ಕಾರ್ನವಾಲ್ ಮತ್ತು ಲೋಹಘಾಟ್ ಕ್ಷೇತ್ರದ ಶಾಸಕ ಪೂರನ್ ಸಿಂಗ್ ಫರ್ಟ್ಯಾಲ್ ಅವರನ್ನು ಕೂಡ ಹಾಜರಾಗುವಂತೆ ಸೂಚಿಸಲಾಗಿತ್ತು.

ಕಳೆದ ವರ್ಷದ ಜುಲೈನಲ್ಲಿ ಕೈಯಲ್ಲಿ ಗನ್ ಮತ್ತು ಆಲ್ಕೋಹಾಲ್ ಹಿಡಿದು ನರ್ತಿಸುತ್ತಿದ್ದ ಶಾಸಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಉತ್ತರಾಖಂಡ ರಾಜ್ಯ ಮತ್ತು ಜನರ ಬಗ್ಗೆ ಅವರು ಅಶ್ಲೀಲ ಪದಗಳಿಂದ ನಿಂದಿಸುವುದು ವಿಡಿಯೋದಲ್ಲಿ ದಾಖಲಾಗಿತ್ತು. ಇದು ವಿವಾದ ಸೃಷ್ಟಿಸಿದ್ದರಿಂದ ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳವರೆಗೆ ಉಚ್ಚಾಟನೆ ಮಾಡಲಾಗಿತ್ತು. ಆದರೆ ಒಂದೇ ವರ್ಷದಲ್ಲಿ ಅವರನ್ನು ಪಕ್ಷಕ್ಕೆ ಮತ್ತೆ ಸೇರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+