ಉತ್ತರ ಪ್ರದೇಶದಲ್ಲಿ ಭಾರೀ ಅಪಘಾತ: 6 ಮಂದಿ ದುರ್ಮರಣ
ಸಿತಾಪುರ, ಡಿಸೆಂಬರ್ 23: ಉತ್ತರ ಪ್ರದೇಶದ ಸಿತಾಪುರ ಎಂಬಲ್ಲಿ ಟೆಂಪೋ ಮತ್ತು ಲಾರಿ ನಡುವಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನ ಮೃತರಾಗಿದ್ದಾರೆ.
ಇಲ್ಲಿನ ರಾಮ್ ಕೋಟ್ ಸಮೀಪದ ನೆರಿಯ ರಾಷ್ಟ್ರೀಯ ಹೆದ್ದಾರಿ 24 ರಲ್ಲಿ ಈ ಘಟನೆ ಸಂಭವಿಸಿದ್ದು, ಟೆಂಪೋದಲ್ಲಿದ್ದ ಆರೂ ಪ್ರಯಾಣಿಕರೂ ಮೃತರಾಗಿದ್ದಾರೆ.

ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.











Click it and Unblock the Notifications