ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಆತ್ಮಹತ್ಯೆ ಶಂಕೆ

ಬುದಾವುನ್, ಆಗಸ್ಟ್ 23: ಸರ್ಕಾರಿ ಶಾಲೆಯೊಂದರ ಆವರಣದಲ್ಲಿ ಮೂವರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿಯ ಮೃತದೇಹ ಗುರುವಾರ ಪತ್ತೆಯಾಗಿದೆ.

ಉತ್ತರ ಪ್ರದೇಶದ ಬುದಾವುನ್ ನಗರದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.

ತನ್ನ ಮಗಳು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನತದೃಷ್ಟ ಬಾಲಕಿಯ ತಾಯಿ ತಿಳಿಸಿದ್ದಾರೆ.

'ಅವಮಾನವಾಗಿದ್ದರಿಂದ ನನ್ನ ಮಗಳು ನೇಣು ಹಾಕಿಕೊಂಡಿದ್ದಾಳೆ. ಅಲ್ಲದೆ, ಆಕೆಯ ಸಹೋದರರಿಗೆ ತೊಂದರೆ ನೀಡುವುದಾಗಿ ಆಕೆಗೆ ಬೆದರಿಸಲಾಗಿತ್ತು' ಎಂದು ತಾಯಿ ಹೇಳಿದ್ದಾರೆ.

uttar pradesh minor girl found dead after gang rape

'ಆಗಸ್ಟ್ 21 ರಂದು ಅತ್ಯಾಚಾರದ ಕುರಿತ ದೂರು ದಾಖಲಾಗಿತ್ತು. ಸಂತ್ರಸ್ತ ಬಾಲಕಿಯ ವೈದ್ಯಕೀಯ ಪರೀಕ್ಷೆ ಮುಕ್ತಾಯವಾಗಿತ್ತು. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಅದರ ನಡುವೆಯೇ ಬಾಲಕಿಯ ಮೃತದೇಹ ಸಿಕ್ಕಿರುವ ಮಾಹಿತಿ ಬಂದಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಬದಾವುನ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಬಾಲಕಿಯು ಕುಟುಂಬದವರ ಬಳಿ ನೋವು ತೋಡಿಕೊಂಡಾಗ ಅತ್ಯಾಚಾರದ ಪ್ರಕರಣ ಬೆಳಕಿಗೆ ಬಂದಿತ್ತು.

ಬಾಲಕಿಯು ಶೌಚಕ್ಕೆ ತೆರಳಲು ಸೋಮವಾರ ಮಧ್ಯರಾತ್ರಿ ಮನೆಯಿಂದ ಹೊರಗೆ ತೆರಳಿದಾಗ ಮೂವರು ವ್ಯಕ್ತಿಗಳು ಗನ್ ತೋರಿಸಿ ಆಕೆಯನ್ನು ಅಪಹರಿಸಿದ್ದರು. ಸರ್ಕಾರಿ ಶಾಲೆಯೊಂದಕ್ಕೆ ಹೊತ್ತೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ಅಕೆ ಅಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಎಂದು ಕುಟುಂಬದವರು ದೂರಿನಲ್ಲಿ ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+