ನಿಂತಿದ್ದ ಲಾರಿಗೆ ಮಿನಿವ್ಯಾನ್ ಡಿಕ್ಕಿ: 9 ಮಂದಿ ಸಾವು
ಲಖಿಂಪುರ, ಏಪ್ರಿಲ್ 28: ಉತ್ತರ ಪ್ರದೇಶದ ಲಖೀಂಪುರ ಖೇರಿ ಎಂಬಲ್ಲಿ ನಿಂತಿದ್ದ ಲಾರಿಗೆ ಮಿನಿ ವ್ಯಾನ್ ವೊಂದು ಡಿಕ್ಕಿ ಹೊಡೆದ ಪರಿಣಾಮ 9 ಜನರು ಮೃತರಾಗಿದ್ದಾರೆ.
17 ಜನರನ್ನು ಹೊತ್ತಿದ್ದ ಮಿನಿ ವ್ಯಾನ್ ನಸುಕಿನಲ್ಲಿ ಲಖಿಂಪುರ ಖೇರಿ ಎಂಬಲ್ಲಿ ವೇಗವಾಗಿ ಚಲಿಸುತ್ತಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ರಸ್ತೆಯ ಪಕ್ಕದಲ್ಲಿ ನಿಂತಿದ್ದ ಟ್ರಕ್ ಅನ್ನು ಗಮನಿಸದ ಮಿನಿ ವ್ಯಾನ್ ಚಾಲಕ ಹಿಂಬದಿಯಿಂದ ಲಾರಿಗೆ ಗುದ್ದಿದ್ದಾನೆ. ಇದರಿಂದ ಚಾಲಕನ್ನೂ ಸೇರಿ 9 ಜನ ಮೃತರಾಗಿದ್ದು, ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ.
#SpotVisual Uttar Pradesh: 9 dead after a vehicle carrying 17 people rammed into a parked truck in Lakhimpur Kheri. pic.twitter.com/Q4jEioZei3
— ANI UP (@ANINewsUP) April 28, 2018
ಚಾಲಕನನ್ನು 25 ವರ್ಷದ ಅನುಪ್ ಆವಸ್ಥಿ ಎಂದು ಗುರುತಿಸಲಾಗಿದ್ದು, ಉಳಿದ ಮೃತರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಗಾಯಗೊಂಡವರನ್ನು ಇಲ್ಲಿನ ಶಹಜಹಾನ್ ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊನ್ನೆ(ಏ.26) ತಾನೇ ಉತ್ತರ ಪ್ರದೇಶದ ಖುಷಿ ನಗರದಲ್ಲಿ ಚಲಿಸುತ್ತಿದ್ದ್ ರೈಲಿಗೆ ಸ್ಕೂಲ್ ಬಸ್ ವೊಂದು ಡಿಕ್ಕಿ ಹೊಡೆದ ಪರಿಣಾಮ 13 ಮಕ್ಕಳು ಬಲಿಯಾಗಿದ್ದರು. ಚಾಲಕ ಇಯರ್ ಫೋನ್ ಧರಿಸಿ ವಾಹನ ಚಲಾಯಿಸುತ್ತಿದ್ದುದೇ ಘಟನೆಗೆ ಕಾರಣ ಎನ್ನಲಾಗಿತ್ತು.












Click it and Unblock the Notifications