ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವವಿವಾಹಿತರಿಗೆ ಯೋಗಿ ಸರ್ಕಾರದಿಂದ 'ನಿಯಂತ್ರಣ' ಗಿಫ್ಟ್

By Mahesh
|
Google Oneindia Kannada News

ಲಕ್ನೋ, ಜುಲೈ 06: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮತ್ತೊಂದು ಹೊಸ ಯೋಜನೆ ಪ್ರಕಟಿಸಿದೆ. ಜನನ ನಿಯಂತ್ರಣಕ್ಕಾಗಿ ಜಾರಿಗೆ ಬರಲಿರುವ ಈ ಯೋಜನೆಯಂತೆ ನವ ವಿವಾಹಿತರಿಗೆ ಶಗುನ್ (ಉಡುಗೊರೆ) ದೊರೆಯಲಿದೆ. ಯೋಗಿ ಅವರು ನೀಡಲಿರುವ ಶಗುನ್ ಬೇರೇನೂ ಅಲ್ಲ, ಕಾಂಡೋಮ್ ಹಾಗೂ ಜನಸಂಖ್ಯಾ ನಿಯಂತ್ರಣ ಮಾಹಿತಿಯ ಕಿಟ್.

ಕುಟುಂಬ ಯೋಜನೆಯ ಅಗತ್ಯ ಹಾಗೂ ಎರಡು ಮಕ್ಕಳ ನಡುವೆ ಇರಬೇಕಾದ ಅಂತರ ಮುಂತಾದ ಮಾಹಿತಿಗಳುಳ್ಳ ಕಿಟ್ ವಿತರಣೆ ಮಾಡಲು ಸರ್ಕಾರ ಮುಂದಾಗಿದೆ. ಜುಲೈ 11ರಂದು ಆಚರಿಸಲಾಗುವ ವಿಶ್ವ ಜನಸಂಖ್ಯಾ ದಿನದಂದು ಈ ಗಿಫ್ಟ್ ಯೋಜನೆ ಜಾರಿಗೊಳ್ಳಲಿದೆ.

30 ದಿನಗಳಲ್ಲಿ ವಿವಾಹ ನೋಂದಾಯಿಸಿ, ಇಲ್ಲವೇ ದಂಡ ಕಟ್ಟಿ!30 ದಿನಗಳಲ್ಲಿ ವಿವಾಹ ನೋಂದಾಯಿಸಿ, ಇಲ್ಲವೇ ದಂಡ ಕಟ್ಟಿ!

Uttar Pradesh government gifting Condoms for newly weds.

ಕಿಟ್ ನಲ್ಲಿ ಏನಿರಲಿದೆ?: ರಾಜ್ಯದ ಆಶಾ ಕಾರ್ಯಕರ್ತೆಯರು ಕುಟುಂಬ ಯೋಜನೆಯ ಸಂದೇಶ, ಕಾಂಡೋಂಗಳು, ಸಾಮಾನ್ಯ ಗರ್ಭನಿರೋಧಕ, ತುರ್ತು ಗರ್ಭನಿರೋಧಕ ಮಾತ್ರೆಗಳು ಹಾಗೂ ನವವಧುವರರಿಗೆ ಅಗತ್ಯವಾದ ಇತರ ವಸ್ತುಗಳಾದಂತಹ ಟವೆಲ್ ಗಳು, ಕರ್ಚೀಫ್, ನೈಲ್ ಕಟ್ಟರ್, ಬಾಚಣಿಗೆ, ಕನ್ನಡಿ ಮುಂತಾದವುಗಳನ್ನೊಳಗೊಡ ಕಿಟ್ ಒಂದನ್ನು ಅವರಿಗೆ ನೀಡಲಿದ್ದಾರೆ.

ಒಂದು ವೇಳೆ ನವವಿವಾಹಿತರು ಅನಕ್ಷರಸ್ಥರಾಗಿದ್ದರೆ ಹಾಗೂ ಆರೋಗ್ಯ ಇಲಾಖೆಯ ಪತ್ರವನ್ನು ಓದಲು ಅಸಮರ್ಥರಾದರೆ, ಚಿಂತಿಸಬೇಕಾಗಿಲ್ಲ. ಆಶಾ ಕಾರ್ಯಕರ್ತರೇ ತಿಳಿ ಹೇಳಿ, ನೆರವು ನೀಡಲಿದ್ದಾರೆ.

ಲೈಂಗಿಕ ಶಿಕ್ಷಣ ಅಷ್ಟೊಂದು ಮಹತ್ವ ಪಡೆಯದ ರಾಜ್ಯವೊಂದರಲ್ಲಿ ಆರಂಭಗೊಳ್ಳುವ ಮಿಶನ್ ಪರಿವಾರ್ ವಿಕಾಸ್ ಯೋಜನೆ ಸ್ವಾಗತಾರ್ಹ ಎಂದು ಹಲವು ಸಾಮಾಜಿಕ ಕಾರ್ಯಕರ್ತರು ಹೇಳಿಕೊಂಡಿದ್ದಾರೆ

English summary
Uttar Pradesh government has taken a step in the right direction by planning to educate newly-married couples the importance of safe sex and family planning by gifting Condoms for newly weds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X