ಯುಪಿಎಸ್‌ಸಿಯ ಐಎಎಸ್ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟ
ನವದೆಹಲಿ, ಜುಲೈ 14: ಯುಪಿಎಸ್‌ಸಿ ಐಎಎಸ್ ಪೂರ್ವಭಾವಿ (ಪ್ರಿಲಿಮ್ಸ್) ಪರೀಕ್ಷೆ 2018ರ ಫಲಿತಾಂಶ ಇಂದು ಪ್ರಕಟವಾಗಿದೆ.
ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಯುಪಿಎಸ್‌ಸಿಯ ಮುಖ್ಯಪರೀಕ್ಷೆ ಎದುರಿಸಲು ಅರ್ಹರಾಗುತ್ತಾರೆ ಹಾಗಾಗಿ ಈ ಪರೀಕ್ಷೆಯನ್ನು ಫರ್ಸ್ಟ್ ಐಎಎಸ್ ಎಂದೂ ಸಹ ಕರೆಯಲಾಗುತ್ತದೆ.
ಫಲಿತಾಂಶವು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಪರೀಕ್ಷಾರ್ಥಿಗಳು ಡಿಸೆಂಬರ್‌ನಲ್ಲಿ ನಡೆಯಲಿರುವ ಮುಖ್ಯ ಪರೀಕ್ಷೆಗೆ ಹಾಜರಾಗಲಿದ್ದಾರೆ.

ಫಲಿತಾಂಶವು ಪಿಡಿಎಫ್ ಮಾದರಿಯಲಿರಲಿದ್ದು, ಪಿಡಿಎಫ್ ಕಡತವನ್ನು ಡೌನ್‌ಲೋಡ್ ಮಾಡಿಕೊಂಡು ತೆರೆದು ಕಂಟ್ರೋಲ್ ಎಫ್ ಕೀ ಬಳಸಿ ಸರ್ಚ್ ಬಾರ್ ತೆರೆದು ನಿಮ್ಮ ನೊಂದಣಿ ಸಂಖ್ಯೆ ನಮೂದಿಸಿ ಫಲಿತಾಂಶ ಹುಡುಕಬೇಕಿದೆ.
ದೇಶದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಯೆಂದೇ ಯುಟಿಎಸ್‌ಸಿಯನ್ನು ಪರಿಗಣಿಸಲಾಗಿದ್ದು ಸಾವಿರಾರು ಜನ ಇದಕ್ಕಾಗಿ ಬಹಳ ವರ್ಷ ತಯಾರಿ ನಡೆಸಿ ಕಾದಿರುತ್ತಾರೆ. ಯುಪಿಎಸ್‌ಸಿ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವುದೇ ಉದ್ಯಮವೇ ಆಗಿಬಿಟ್ಟಿದೆ.












Click it and Unblock the Notifications