ದೇಶಾದ್ಯಂತ ಯುಪಿಐ ಸೇವೆಯಲ್ಲಿ ವ್ಯತ್ಯಯ: ಗೂಗಲ್ ಪೇ ಮತ್ತು ಪೇಟಿಎಂ ಬಳಕೆದಾರರ ಪರದಾಟ
UPI services down; ನಿನ್ನೆಯಷ್ಟೇ ಎಸ್‌ಬಿಐ ಯುಪಿಐ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದೀಗ ಎಲ್ಲಾ ಬ್ಯಾಂಕ್‌ಗಳ ಯುಪಿಐ ಪಾವತಿಯಲ್ಲಿ ವ್ಯತ್ಯಯ ಉಂಟಾಗಿದೆ. ಆದ್ದರಿಂದ ಬಳಕೆದಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪೋನ್ ಪೇ, ಗೂಗಲ್ ಪೇ ಸೇರಿದಂತೆ ಇತರೆ ಬ್ಯಾಂಕ್ ವರ್ಗಾವಣೆಯ ಯುಪಿಐ ಆಪ್‌ಗಳಲ್ಲಿ ಸರ್ವರ್ ಡೌನ್ ಆಗಿದೆ. ಒಬ್ಬರಿಂದ ಒಬ್ಬರಿಗೆ ಹಣ ಕಳಿಸುವುದಕ್ಕೆ, ಅಂಗಡಿ ಮುಂಗಟ್ಟುಗಳಲ್ಲಿನ ಖರೀದಿಗೆ ಯುಪಿಐ ಪಾವತಿಗೆ ಸಮಸ್ಯೆ ಉಂಟಾಗಿದೆ.

ಯುಪಿಐನಿಂದ ಬಳಕೆದಾರರು ಹಣ ವರ್ಗಾವಣೆಗೆ ಸಾದ್ಯವಾಗದೇ ಸಂಕಷ್ಟ ಎದುರಿಸುತ್ತಿದ್ದಾರೆ. ತಾವು ಖರೀದಿಸಿದಂತಹ ಯಾವುದೇ ವಸ್ತುಗಳಿಗೆ ಯುಪಿಐ ಪೇಮೆಂಟ್ ಮೂಲಕ ಪಾವತಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ವರದಿಗಳನ್ನು ಮಾಡಿದ್ದಾರೆ. ತಮಗೆ ಯುಪಿಐ ಮೂಲಕ ಎಸ್‌ಬಿಐ, ಹೆಚ್‌ಡಿಎಫ್‌ಸಿ, ಐಸಿಐಸಿಐ ಸೇರಿದಂತೆ ಎಲ್ಲಾ ಬ್ಯಾಂಕ್‌ಗಳ ವ್ಯವಹಾರಕ್ಕೆ ಅಡಚಣೆ ಉಂಟಾಗಿದೆ.
ಯುಪಿಐ ಬಳಕೆದಾರರ ಪರದಾಟ: ದೇಶಾದ್ಯಂತ ಏಕೀಕೃತ ಪಾವತಿ ಇಂಟರ್ಫೇಸ್ ಸೇವೆಯು ಇತ್ತೀಚೆಗಷ್ಟೇ ಸುಮಾರು ಎರಡೂವರೆ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಈ ಸಮಯದಲ್ಲಿ, ಜನರು ಗೂಗಲ್ ಪೇ, ಫೋನ್‌ಪೇ ಮತ್ತು ಪೇಟಿಎಂ ನಂತಹ ಅಪ್ಲಿಕೇಶನ್‌ಗಳ ಮೂಲಕ ಹಣವನ್ನು ವರ್ಗಾಯಿಸುವಲ್ಲಿ ಸಮಸ್ಯೆಗಳನ್ನು ಎದುರಿಸಿದರು. ಅಲ್ಲದೆ 10ಕ್ಕೂ ಹೆಚ್ಚು ಬ್ಯಾಂಕ್‌ಗಳ ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ ಸೇವೆಗಳ ಮೇಲೂ ಪರಿಣಾಮ ಬೀರಿತು.
ಕಳೆದ ಬುಧವಾರ ಸಂಜೆ ಇದ್ದಕ್ಕಿದ್ದಂತೆ ಬಳಕೆದಾರರು ಅಪ್ಲಿಕೇಶನ್‌ಗೆ ಲಾಗಿನ್ ಆಗಲು ಮತ್ತು ನೆಟ್ ಬ್ಯಾಂಕಿಂಗ್ ಅನ್ನು ಸಹ ಪ್ರವೇಶಿಸಲು ಸಾಧ್ಯ ಆಗಲಿಲ್ಲ. ಸಂಜೆ ವೇಳೆ ದೇಶಾದ್ಯಂತ ಹಲವು ಚಿಕ್ಕ ಮಳಿಗೆಯಿಂದ ಹಿಡಿದು ಶಾಪಿಂಗ್ ಮಾಲ್‌ಗಳವರೆಗೆ ಯುಪಿಐ ಬಳಕೆಯಲ್ಲಿ ವ್ಯತ್ಯಯವಾಗಿ ಜನರು ಪರದಾಡಿದ ಘಟನೆ ನಡೆದಿತ್ತು.
ಮೂಲಗಳ ಪ್ರಕಾರ, ಕಳೆದ ಬುಧವಾರ ಸಂಜೆ 7ರಿಂದ 9:30 ರ ನಡುವೆ ಯುಪಿಐ ಮೂಲಕ ಪಾವತಿಗಳನ್ನು ಮಾಡುವಲ್ಲಿ ಬಳಕೆದಾರರು ಗರಿಷ್ಠ ಸಮಸ್ಯೆಗಳನ್ನು ಎದುರಿಸಿದರು. ಈ ಅವಧಿಯಲ್ಲಿ 23,000ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಆದರೆ ಈ ತಾಂತ್ರಿಕ ದೋಷಕ್ಕೆ ಕಾರಣ ತಿಳಿದುಬಂದಿರಲಿಲ್ಲ.
ಬಳಕೆದಾರರು ತಾತ್ಕಾಲಿಕ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದರು, ಇದರಿಂದಾಗಿ UPIನಲ್ಲಿ ಭಾಗಶಃ ಅಡಚಣೆ ಉಂಟಾಯಿತು ಎಂದು ರಾಷ್ಟ್ರೀಯ ಪಾವತಿ ನಿಗಮ ತಿಳಿಸಿತ್ತು. ಬಳಿಕ ಈ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ವ್ಯವಸ್ಥೆಯು ಸ್ಥಿರವಾಗಿದೆ ಎಂದು ಎನ್‌ಪಿಸಿಐ ತಿಳಿಸಿತ್ತು.
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಮಧ್ಯಂತರ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿತ್ತು, ಇದರಿಂದ UPI ಭಾಗಶಃ ಕುಸಿತ ಕಂಡಿತ್ತು. ಅದನ್ನು ಈಗ ಪರಿಹರಿಸಲಾಗಿದೆ ಮತ್ತು ವ್ಯವಸ್ಥೆಯು ಸ್ಥಿರವಾಗಿದೆ. ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ಎನ್‌ಪಿಸಿಐ ಸಂಸ್ಥೆ ತನ್ನ ಟ್ವಿಟರ್ ಖಾತೆಯಲ್ಲಿ ತಿಳಿಸಿತ್ತು.












Click it and Unblock the Notifications