ಘಟಾನುಘಟಿ ನಾಯಕರ ಬಿಗ್ ಫೈಟ್ ಶುರು

ನವದೆಹಲಿ, ಏ.10: ದೇಶದ 11 ರಾಜ್ಯಗಳಲ್ಲಿ 92 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಆರಂಭಗೊಂಡಿದೆ. ಲೋಕಸಭಾ ಸ್ಪೀಕರ್ ಮೀರಾ ಕುಮಾರ್, ಕೇಂದ್ರ ಸಚಿವ ಕಪಿಲ್ ಸಿಬಲ್, ಶಶಿ ತರೂರ್, ಅಜಿತ್ ಸಿಂಗ್, ಸೇನಾ ಪಡೆಯ ಮಾಜಿ ಮುಖ್ಯಸ್ಥ ವಿ.ಕೆ.ಸಿಂಗ್ ಸೇರಿದಂತೆ 150ಕ್ಕೂ ಹೆಚ್ಚು ಘಟಾನುಘಟಿ ನಾಯಕರ ಹಣೆ ಬರಹ ನಿರ್ಧಾರವಾಗಲಿದೆ.

ದೆಹಲಿ, ಕೇರಳ, ಹರ್ಯಾಣ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಒಡಿಶಾ, ಜಾರ್ಖಂಡ್ ಸೇರಿದಂತೆ ಒಟ್ಟು 11 ರಾಜ್ಯಗಳಲ್ಲಿ ಮತದಾನ ನಡೆದಿದೆ. ಜಾರ್ಖಂಡ್ ನ ಹಜಾರಿಬಾಗ್ ನಲ್ಲಿ ರಾಮನವಮಿ ಹಬ್ಬದ ಪ್ರಯುಕ್ತ ಚುನಾವಣೆ ಮುಂದೂಡಲಾಗಿದೆ.

ಗುರುವಾರ ಮತದಾನದಲ್ಲಿ 11 ಕೋಟಿ ಮತದಾರರು 150ಕ್ಕೂ ಹೆಚ್ಚು ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ. ಬಿಜೆಪಿಯ ದೆಹಲಿ ಅಧ್ಯಕ್ಷ ಹರ್ಷವರ್ಧನ್. ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಕಿ ಅವರ ಭವಿಷ್ಯವೂ ಕೂಡ ನಿರ್ಧಾರವಾಗಲಿದೆ. ಉಳಿದಂತೆ ಶಾಜಿಯಾ ಇಲ್ಮಿ, ಅಜಯ್ ಮಾಕೇನ್, ಕೆ.ವಿ ಥಾಮಸ್, ಕೋಡಿಕುನ್ನಿಲ್ ಸುರೇಶ್, ಕಮಲ್ ನಾಥ್, ಕಪಿಲ್ ಸಿಬಲ್ ಮುಂತಾದ ನಾಯಕರು ಕಣದಲ್ಲಿದ್ದಾರೆ.

Third phase voting 11 states and three Union Territories (UTs

ಚಲನಚಿತ್ರ ತಾರೆಯರಾದ ಜಯಪ್ರದಾ, ನಗ್ಮಾ, ಕಿರಣ್ ಖೇರ್, ಗುಲ್ ಪನಾಗ್, ಮನೋಜ್ ತಿವಾರಿ, ರಾಜ್ ‌ಬಬ್ಬರ್ ಅವರುಗಳ ಹಣೆಬರಹವನ್ನೂ ಮತದಾರರು ಮತಯಂತ್ರದಲ್ಲಿ ಮೊಹರು ಮಾಡಲಿದ್ದಾರೆ.ಸುಮಾರು 92 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಇದರಲ್ಲಿ 10 ಕ್ಷೇತ್ರಗಳು ಉತ್ತರ ಪ್ರದೇಶ ರಾಜ್ಯದಲ್ಲಿ ಬರಲಿದೆ.

ಕದನ ಕುತೂಹಲದಲ್ಲಿ ಕಪಿಲ್ ಸಿಬಲ್, ಹರ್ಷವರ್ಧನ್, ಆಶುತೋಷ್ ಸ್ಪರ್ಧಿಸಿರುವ ದೆಹಲಿಯ ಚಾಂದಿನಿ ಚೌಕ್ ಕ್ಷೇತ್ರ, ಶಶಿತರೂರ್, ಓ ರಾಜಗೋಪಾಲ್ ಸ್ಪರ್ಧೆಯ ತಿರುವನಂತಪುರಂ ಕ್ಷೇತ್ರ, ರಾಜ್ ಬಬ್ಬರ್, ವಿ.ಕೆ ಸಿಂಗ್, ಶಾಜಿಯಾ ಇಲ್ಮಿ ಸ್ಪರ್ಧಿಸಿರುವ ಘಾಜಿಯಾ ಬಾದ್, ಪವನ್ ಕುಮಾರ್ ಬನ್ಸಾಲ್, ಗುಲ್ ಪನಾಗ್, ಕಿರಣ್ ಖೇರ್ ಸ್ಪರ್ಧೆಯ ಚಂಡೀಗಢ,

ಇಂದು ಚುನಾವಣೆ ನಡೆದಿರುವ ಕ್ಷೇತ್ರಗಳಲ್ಲಿ 2009ರಲ್ಲಿ ಕಥೆ ಏನಾಗಿತ್ತು?

* ಅಂಡಮಾನ್ ಹಾಗೂ ನಿಕೋಬಾರ್ ನಲ್ಲಿ ಬಿಜೆಪಿ
* ಬಿಹಾರದಲ್ಲಿ 6 ಸೀಟುಗಳಲ್ಲಿ ಜೆಡಿಯು 3, ಬಿಜೆಪಿ 2, ಕಾಂಗ್ರೆಸ್ 1
* ಚಂದೀಗಢದಲ್ಲಿ ಕಾಂಗ್ರೆಸ್
* ಛತ್ತೀಸ್ ಗಢದಲ್ಲಿ ಬಿಜೆಪಿ
* ಹರ್ಯಾಣದಲ್ಲಿ ಕಾಂಗ್ರೆಸ್ 9, ಎಚ್ ಜೆಸಿ 1
* ಜಮ್ಮು ಮತ್ತು ಕಾಶ್ಮೀರ: ಕಾಂಗ್ರೆಸ್
* ಜಾರ್ಖಂಡ್ : ಬಿಜೆಪಿ, ಜೆಎಂಎಂ, ಜೆವಿಎಂ(ಪಿ), ಪಕ್ಷೇತರ ತಲಾ 1
* ಕೇರಳ: ಕಾಂಗ್ರೆಸ್ 13, ಸಿಪಿಎಂ 4, ಐಯುಎಂಎಲ್ 2, ಕೆಸಿ(ಎಂ) 1
* ಲಕ್ಷದ್ವೀಪ: ಕಾಂಗ್ರೆಸ್
* ಉತ್ತರಪ್ರದೇಶ: ಬಿಎಸ್ಪಿ 5, ಆರ್ ಎಲ್ ಡಿ 2, ಬಿಜೆಪಿ 2, ಎಸ್ಪಿ ೧
* ಒರಿಸ್ಸಾ: ಕಾಂಗ್ರೆಸ್ 5, ಬೆಜೆಡಿ 5
* ದೆಹಲಿ: ಕಾಂಗ್ರೆಸ್ 7
* ಮಹಾರಾಷ್ಟ್ರ: ಕಾಂಗ್ರೆಸ್ 4, ಶಿವಸೇನಾ 3, ಬಿಜೆಪಿ 2, ಎನ್ ಸಿಪಿ 1
* ಮಧ್ಯಪ್ರದೇಶ: ಕಾಂಗ್ರೆಸ್ 4, ಬಿಜೆಪಿ 4, ಬಿಎಸ್ಪಿ 1

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+